ಲೋಕದರ್ಶನ ವರದಿ
ಘಟಪ್ರಭಾ 23: ವೇತನ ನೀಡಬೇಕೆಂದು ಒತ್ತಾಯಿಸಿ ಗುರುವಾರ ಪ್ರಾರಂಭಗೊಂಡ ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತ ಸಿಬ್ಬಂದಿ ಹಾಗೂ ನೌಕರರ ಧರಣಿ ಮೂರನೆ ದಿನಕ್ಕೆ ಕಾಲಿಟ್ಟಿದ್ದು, ನೌಕರರು ಪ.ಪಂ ಕಾಯರ್ಾಲಯದ ಎದುರು ಧರಣಿ ನಡೆಸುತ್ತಿದ್ದರು.
ಮಂಜೂರಾದ ಹುದ್ದೆಗಳಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಖಾಯಂ ಪೌರಕಾಮರ್ಿಕರನ್ನು ಹೊರತುಪಡಿಸಿ ಉಳಿಯುವ ಹುದ್ದೆಗಳಿಗೆ ವಿಶೇಷ ನೇಮಕಾತಿ ನಿಯಮಗಳನ್ವಯ ನಿಗದಿಪಡಿಸಿರುವ ಅರ್ಹತಾ ಅವಧಿಯನ್ನು ಪೂರ್ಣಗೊಳಿಸಿರುವದನ್ನು ದೃಡಪಡಿಸಿಕೊಂಡು ಕನಿಷ್ಠ ವೇತನ ಕಾಯ್ದೆಯನ್ವಯ ವೇತನವನ್ನು ಮಹಾನಗರ ಪಾಲಿಕೆ/ ನಗರ ಸ್ಥಳೀಯ ಸಂಸ್ಥೆಗಳಿಂದ ನೇರ ಪಾವತಿಗೆ ಕ್ರಮವಹಿಸುವದು ಎಂದು ನಿದರ್ೇಶಕರು ಪೌರಾಡಳಿತ ನಿದರ್ೇಶನಾಲಯ ಬೆಂಗಳೂರು ಇವರು ಅದೇಶ ಮಾಡಿರುವದನ್ನು ಪ.ಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಕೆ. ಬಿ. ಪಾಟೀಲ ಧರಣಿ ನಿರತ ಸಿಬ್ಬಂದಿವರಿಗೆ ತಿಳಿಸಿದ ಬಳಿಕ ಮಲ್ಲಾಪೂರ ಪ.ಪಂ ಸಿಬ್ಬಂದಿಯವರು ಧರಣಿಯನ್ನು ಶನಿವಾರ ಮದ್ಯಾಹ್ನ ಅಂತ್ಯಗೊಳಿಸಿದರು.
ಈ ಸಂದರ್ಭದಲ್ಲಿ ಪ.ಪಂ ಸದಸ್ಯರಾದ ಮಲ್ಲು ಕೋಳಿ. ಸಲೀಮ ಕಬ್ಬೂರ, ಇಮ್ರಾನ ಬಟಕುಕರ್ಿ, ಪ್ರವೀಣ ಮಟಗಾರ, ಪಟ್ಟಣದ ಹಿರಿಯರಾದ ಡಿ.ಎಮ್ ದಳವಾಯಿ, ಸುರೇಶ ಪೂಜಾರಿ, ಜಿ.ಎಸ್.ರಜಪೂತ, ವೀರಭದ್ರ ಗಂಡವ್ವಗೋಳ, ಪರಸರಾಮ ಗೋಕಾಕ, ಅಪ್ಪಾಸಾಬ ಮುಲ್ಲಾ ಸೇರಿದಂತೆ ಅನೇಕರು ಇದ್ದರು.