ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಕ್ರಿಸ್ಮಸ್ ಸಂಭ್ರಮ

ಕಾರವಾರ 27: ನಗರದಲ್ಲಿ ಕ್ರೈಸ್ತ ಬಾಂಧವರು ಮಂಗಳವಾರ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು. 

ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಮುನ್ನಾ ದಿನವಾದ ಸೋಮವಾರವೇ ನಗರದ ಎಲ್ಲೆಡೆ ಚರ್ಚಗಳು ಶೃಂಗಾರಗೊಂಡಿದ್ದವು. ಸೋಮವಾರ ರಾತ್ರಿ 9 ರಿಂದ ಪ್ರಾರಂಭವಾದ ಪೂಜೆ ಮತ್ತು ಕ್ರಿಸ್ಮಸ್ ಆಚರಣೆಯ ವಿಧಿ ವಿಧಾನಗಳು ಮಧ್ಯರಾತ್ರಿವರೆಗೆ ನಡೆದವು. ನಂತರ ಒಂದು ತಾಸು ಕ್ರಿಸ್ಮಸ್ ಸಡಗರ ಆವರಿಸಿಕೊಂಡಿತು.  ನಗರದ ಕ್ಯಾಥಡ್ರೆಲ್ ಚಚರ್್, ಹೈಚಚರ್್, ಕ್ರಿಸ್ತ ಜ್ಯೋತಿ ದೇವಾಲಯ ಸೇರಿದಂತೆ, ವಿವಿಧ  ಕಡೆಯ ಚಚರ್್ಗಳು ವಾರದ ಮೊದಲೇ ಬಣ್ಣ ಬಣ್ಣಗಳಿಂದ ಅಲಂಕೃತವಾಗಿದ್ದವು.  ಕ್ರಿಸ್ಮಸ್ ಗಿಡಗಳಿಗೆ ವಿವಿಧ ಬಣ್ಣಗಳ  ನಕ್ಷತ್ರ,ವಿದ್ಯುತ್ದೀಪಗಳಿಂದ ಅಲಂಕರಿಸಲಾಗಿತ್ತು. ಚಚರ್್ ಅಲ್ಲದೇ ಮನೆ ಮುಂದೆ ಕ್ರಿಸ್ತನ ಹಾಗೂ ಮಾತೆ ಮೇರಿಯ ಮಣ್ಣಿನ ಮೂತರ್ಿಗಳನ್ನು ಗೋದಳಿಗಳಲ್ಲಿಟ್ಟು ಸಾಮೂಹಿಕವಾಗಿ ಪ್ರಾರ್ಥನೆ ನಡೆಯಿತು. 

ಕ್ರೈಸ್ತ ಬಾಂಧವರ ಅಂಗಡಿಗಳು, ಹೊಟೆಲ್ಗಳು, ಬ್ಯಾಂಕ್ ಸೇರಿದಂತೆ ಇನ್ನಿತರ ವ್ಯಾಪಾರ ಕೇಂದ್ರಗಳು ಕೂಡ ವಿದ್ಯುತ್ ದೀಪಗಳ ಬೆಳಕಿನಿಂದ ಕಂಗೊಳಿಸಿದವು.  ಪ್ರಮುಖ ಹೊಟೆಲ್ಗಳ ಎದುರು ಸಾಂತಾ ಕ್ಲಾಸ್, ಗೊಂಬೆಗಳ ವೇಷ ತೊಟ್ಟವರು ಹೆಪಿ ಕ್ರಿಸ್ಮಸ್ ಶುಭಾಶಯ ಹೇಳಿ ಚಿಣ್ಣರಿಗೆ ಚಾಕ್ಲೇಟ್ ವಿತರಿಸಿದರು. ಹೊಟೆಲ್ಗಳಿಗೆ ಬರುವ ಗ್ರಾಹಕರಿಗೆ ಹೆಂಡ್ಶೇಕ್ ಮಾಡಿ ಶುಭಾಶಯ ಹೇಳುತ್ತಿರುವುದು ಕಂಡು ಬಂತು. 

ಅಲ್ಲದೇ ನಗರದ ಪಾದ್ರಿಬಾಗ್,ಕಾಜುಬಾಗ್, ಮಾರಿಯಾನಗರ, ಹೈಚಚರ್್ ಪ್ರದೇಶಗಳಲ್ಲಿ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಾಸವಿರುವ ಸಮಾಜ ಬಾಂಧವರಿಗೆ,ಸ್ನೇಹಿತರಿಗೆ, ಅಕ್ಕಪಕ್ಕದ ನಿವಾಸಿಗಳಿಗೆ  ಪರಸ್ಪರ ಹಬ್ಬದ ಸಿಹಿ ತಿನಿಸು ಕೇಕ್, ಗಿಫ್ಟ್ ಐಟಂಗಳನ್ನು ಹಂಚಿ ಕ್ರಿಸ್ಮಸ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಇಲ್ಲೆಲ್ಲ ಕ್ರೈಸ್ತ ಬಾಂಧವರು ಮಧ್ಯರಾತ್ರಿ ಸಮಯದಲ್ಲಿ ಕ್ರಿಸ್ತನ ಜನನದ ಪ್ರತೀಕವಾಗಿ ಶೃದ್ಧಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು. ಇದಲ್ಲದೇ ಸದಾಶಿವಗಡ, ಹಳಗಾ, ಮಖೇರಿ, ಚೆಂಡಿಯಾ, ಅಮದಳ್ಳಿ ಮುಂತಾದ ಗ್ರಾಮೀಣ ಪ್ರದೇಶದ ಚಚರ್್ಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿದ ಬಳಿಕ ಚಚರ್್ನ ಧರ್ಮಗುರುಗಳು ಜೀಸಸ್ ಕ್ರಿಸ್ತನ ಸಂದೇಶಗಳನ್ನು ಬೋಧಿಸಿದರು. 

ಭಾವೈಕ್ಯತೆಯ ಪ್ರತೀಕವಾಗಿ ಅನ್ಯ ಧಮರ್ಿಯರೂ ಕೂಡ ಕ್ರೈಸ್ತ ಬಾಂಧವರಿಗೆ ಶುಭಾಶಯ ಹೇಳಿದರು. ಸಾಮಾಜಿಕ ಜಾಲತಾಣಗಳ ಮೂಲಕ ಸಹ ಸ್ನೇಹಿತರಿಗೆ ಹಾಗೂ ಬಂಧು ಬಾಂಧವರಿಗೆ ಶುಭಾಶಯ ಕೋರಿದರು.       

ಅಮದಳ್ಳಿಯ ಚಚರ್್ನಲ್ಲಿ ವಿಶೇಷ ಕಾರ್ಯಕ್ರಮ:

ಅಮದಳ್ಳಿಯ ಚಚರ್್ನಲ್ಲಿ ಮಧ್ಯರಾತ್ರಿ ಸಾಮೂಹಿಕ ಪ್ರಾರ್ಥನೆ ನಡೆಸಿದ ಬಳಿಕ ಮಂಗಳವಾರ ಸಾಯಂಕಾಲ ಮೆರವಣಿಗೆ ಹೊರಡಿಸಲಾಯಿತು.ಮೆರವಣಿಗೆಯು ಚಚರ್್ ಆವರಣದಿಂದ ಸಾಗಿ ಅಮದಳ್ಳಿ ಮಾರುಕಟ್ಟೆ ತನಕ ಸಾಗಿತು. ಮೆರವಣಿಗೆಯಲ್ಲಿ ಮೊಂಬತ್ತಿ ದೀಪ ಹಿಡಿದು ನೂರಾರು ಜನರು ಭಾಗವಹಿಸಿದ್ದರು. ಆನಂತರ ಅಮದಳ್ಳಿ ಚಚರ್್ನ ಪ್ರಾರ್ಥನಾ ಸಭೆಯಲ್ಲಿ ಸೇರಿದ ಜನರನ್ನುದ್ದೇಶಿಸಿ ಧರ್ಮಗುರು ಬ್ರಿಟ್ಟೋ ಡಿಸಿಲ್ವ ಮಾತನಾಡಿ, ಜೀಸಸ್ ಕ್ರೈಸ್ತ್ನ ಶಾಂತಿ, ಸಹನೆ, ಸಹಬಾಳ್ವೆ ಮಹತ್ವವನ್ನು ಸಾರಿದರು ಎಂದು ಸ್ಥಳೀಯ ನಿವಾಸಿ ಇನ್ನಾಸ್ ಡಿಸೋಜಾ ಹೇಳಿದರು.