ಚೌಡಯ್ಯದಾನಪುರ: ವಿವಿಧ ಧಾರ್ಮಿಕ ಕಾರ್ಯಕ್ರಮ

ಲೋಕದರ್ಶನವರದಿ

ರಾಣೇಬೆನ್ನೂರು14: ತಾಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ಮಾತಂಗೆಮ್ಮದೇವಿ ಮೂತರ್ಿ ಪ್ರಾಣ ಪ್ರತಿಷ್ಠಾಪನೆ ಹಾಗೂ ವಿವಿಧ ಧಾಮರ್ಿಕ ಕಾರ್ಯಕ್ರಮಗಳು ಒಡೆಯರ ಚಿತ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಮಂಗಳವಾರ ಜರುಗಿದವು.

  ಸೋಮವಾರ ರಾತ್ರಿ ಗ್ರಾಮದ ವಿವಿಧ ಓಣಿಗಳಲ್ಲಿ ಸಕಲ ವಾದ್ಯಮೇಳಗಳೊಂದಿಗೆ ದೇವಿಯ ಮೆರವಣಿಗೆ ಬಹು ವಿಜೃಂಭಣೆಯಿಂದ ಜರುಗಿತು. 

      ನಂತರ ಬೆಳಗಿನ ಜಾವ ಒಡೆಯರ ಶ್ರೀಗಳು ಪೂಜಾ ವಿಧಿ ವಿಧಾನಗಳ ಪ್ರಕಾರ ಮೂತರ್ಿಗೆ ಪ್ರಾಣಪ್ರತಿಷ್ಠಾಪನೆ ಮಾಡಿದರು. ಮಧ್ಯಾಹ್ನ ಪ್ರಸಾದ ವ್ಯವಸ್ಥೆ ನೆರವೇರಿತು.

  ಕೊಟ್ರೇಶ ಹಿರೇಮಠ ಹಾಗೂ ಸಿದ್ದಯ್ಯಶಾಸ್ತ್ರಿ, ಸಂಕಪ್ಪ ಅರಸಪ್ಪನವರ, ವೀರಣ್ಣ ಬನ್ನಿಮಟ್ಟಿ, ಚಂದ್ರಪ್ಪ ದಳವಾಯಿ, ಲಕ್ಷ್ಮಣ ದೀಪಾವಳಿ, ಸಿದ್ದಪ್ಪ ನಾಗನೂರ, ದೇವಿಂದ್ರಪ್ಪ ಹರಿಜನ, ನಿಂಗಪ್ಪ ಹರಿಜನ, ಪರಶುರಾಮ ಹರಿಜನ, ಬಸಪ್ಪ ಹರಿಜನ, ಶಾಂತಪ್ಪ ಹರಿಜನ, ಕವಿತಾ, ಕಲಾವತಿ, ಹಾಲವ್ವ, ಹನುಮಕ್ಕ, ದುರಗವ್ವ ಸೇರಿದಂತೆ ಮತ್ತಿತರರು ಇದ್ದರು.