ಹಾರೂಗೇರಿ,20: ಅಖಿಲ ಭಾರತ ಸ್ವಾತಂತ್ರ್ಯ ಸೇನಾನಿ ಜನಮಾನ್ಯ ದಿ. ವ್ಹಿ,ಎಲ್. ಪಾಟೀಲ (ಅಭಾಜಿ) ಫೌಂಡೇಶನ್ ಶಾಖೆ ಚಿಂಚಲಿ ಇವರ ಆಶ್ರಯದಲ್ಲಿ ದಿ. 22 ರಿಂದ 25 ವರಗೆ ನಾಲ್ಕು ದಿನಗಳವರೆಗೆ ಉತ್ತರ ಕನರ್ಾಟಕದ ಬೃಹತ್ ಕೃಷಿ ಮೇಳವನ್ನು ಸ್ಟೇಶನ್ ರೋಡ ಡಾ. ಬಾಬಾಸಾಹೇಬ ಅಂಬೇಡಕರ ಕ್ರೀಡಾಂಗಣ ಮಹಾಕಾಳಿ ಹೈಸ್ಕೂಲ ಮೈದಾನದಲ್ಲಿ ಆಯೋಜಿಸಿದ್ದಾರೆ.
ದಿ. 22ರಂದು ಕೃಷಿ ಮೇಳದ ಉದ್ಘಾಟನೆಯನ್ನು ಸಂಸ್ಥಾಪಕ ಅಧ್ಯಕ್ಷರು ಅಭಾಜಿ ಫೌಂಢೇಶನ್ ರಾಯಬಾಗ ಹಾಗೂ ಬೆಳಗಾವಿ ಜಿಲ್ಲಾ ಪಂಚಾಯತ ಸದಸ್ಯ ಪ್ರಣಯ ಪಾಟೀಲ ನೆರವೇರಿಸುವರು.
ಕನರ್ಾಟಕ ಸರಕಾರದ ಸಹಕಾರದೊಂದಿಗೆ ನಡೆಸಲ್ಪಡುತ್ತಿರುವ ಈ ಕೃಷಿ ಮೇಳದಲ್ಲಿ ಹಲವು ವಿಷಯಗಳಾದ ಹನಿ ನೀರಾವರಿ, ಸಾವಯುವ ಕೃಷಿ, ಹೈನುಗಾರಿಕೆ ಹಾಗೂ ಸವಳು ಜವಳು ಜಮೀನಗಳ ನಿರ್ವಹಣೆ ಬಗ್ಗೆ ನುರಿತ ವಿಷಯ ಪರಿಣಿತರಿಂದ ವಿಶೇಷ ರಾಜ್ಯ ಮಟ್ಟದ ವಿಚಾರ ಸಂಕಿರಣಗಳನ್ನು ನಡೆಸಲಿದ್ದಾರೆ. ಮತ್ತು ಆಥರ್ಿಕ ಬೆಳೆಗಳು ಮತ್ತು ರೈತರು ಒಕ್ಕಲತನದ ಸಲಕರಣೆಗಳ ಪ್ರದರ್ಶನವನ್ನು ಆಯೋಜಿಸಿದ್ದಾರೆ.
ಕೃಷಿ ಮೇಳದ ವಿಶೇಷತೆಗಳು: ಹೈ-ಟೆಕ್ ಹಸಿರು ಮನೆಯಲ್ಲಿ ವಿವಿಧ ಹೂವಿನ ಬೆಳಗಳ ಪ್ರಾತ್ಯಕ್ಷಿತೆ, ವಿವಿಧ ಕಬ್ಬುಗಳ ತಳಿಗಳ ಪ್ರಾತ್ಯಕ್ಷಿತೆ, ಹೈ ಟೆಕ್ ತೋಟಗಾರಿ, ಅರಣ್ಯ ಇಲಾಖೆ ಗಿಡಗಳ ಪ್ರಾತ್ಯಕ್ಷಿತೆ, ಹನಿ ನೀರಾವರಿಗಳ ಹಾಗೂ ಕೃಷಿ ಪರಿಕರಗಳ ಯಂತ್ರೋಪಕರಣಗಳ ಬಳಕೆಯ ಪ್ರಾತ್ಯಕ್ಷಿತೆ, ಔಷಧಿ ಸೌಗಂಧಿಕ ಮತ್ತು ಜೈವಿಕಿಚಿದನ ಸಸಿಗಳ ಸಮಗ್ರ ಮಾಹಿತಿ, ಸಪೋಟ ಬೆಳೆಗಳ ಪ್ರಾತ್ಯಕ್ಷಿತೆ ಮತ್ತು ಕಸಿ ಕಟ್ಟುವಿಕೆ, ಮೀನು ಸಾಕಾಣಿಕೆ ಪದ್ದತಿ ಮತ್ತು ಬಣ್ಣದ ಮೀನು ಮರಿ ಪಾಲನೆ ತಾಂತ್ರಿಕತೆ, ಸಾವಯವ ಗೊಬ್ಬರ, ಕಾಂಪೋಸ್ಟ, ಎರೆಹುಳ ಹೊಬ್ಬರ ಮತ್ತು ಅಜೋಲ ತಯಾರಿಕೆ ಪ್ರಾತ್ಯಕ್ಷಿತೆ, ವಿವಿಧ ಕೀಟಗಳ ವೀಕ್ಷಣೆ ಮತ್ತು ಮಾಹಿತಿ, ಮಣ್ಣು ಮತ್ತು ನೀರಿನ ಪರೀಕ್ಷೆಯ ಪ್ರಾತ್ಯಕ್ಷಿತೆ, ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಪ್ರಾತ್ಯಕ್ಷಿತೆ, ಜಾನುರುಗಳ ಪ್ರದರ್ಶನ, ವಿವಿಧ ತಳಿಗಳ ಶ್ವಾನಗಳ ಪ್ರದರ್ಶನ ಹಾಗೂ ಆಲನೆ ಪಾಲನೆಬಗೆ ಸಮಗ್ರ ಮಾಹಿತಿ, ವಿವಿಧ ಬೆಳೆಗಳ ರೋಗ ಮತ್ತು ಕೀಟ ನಿಯಂತ್ರಣದ ಬಗ್ಗೆ ಸಮಗ್ರ ಮಾಹಿತಿ ಹೀಗೆ ವಿಶೇಷವಾಗಿ ಪ್ರಾತ್ಯಕ್ಷಿತೆ ಮತ್ತು ಉಪನ್ಯಾಸವನ್ನು ಆಯೋಜಿಸಿದ್ದಾರೆ.
ದಿ. 24 ರಂದು ಮಧ್ಯಾಹ್ನ 02.30 ಗಂಟೆಗೆ ಟಗರಿನ ಕಾದಾಟ, ಹಾಲು ಹಲ್ಲಿನ ಟಗರಿನ ಕಾಳಗ, ಎರಡು ಹಲ್ಲಿನ ಟಗರಿನ ಕಾಳಗ, ನಾಲ್ಕು ಹಲ್ಲಿನ ಟಗರಿನ ಕಾಳಗ, ಆರು ಹಲ್ಲಿನ ಟಗರಿನ ಕಾಳಗಗಳು ನಡೆಯುತ್ತವೆ. ಈ ಕಾಳಗದಲ್ಲಿ ಪ್ರಥಮ, ದ್ವಿತಿಯ, ತೃತಿಯ ಬಹುಮಾನಗಳು ನೀಡಲಾಗವುದು.
ದಿ. 25ರಂದು ಮುಂಜಾನೆ 9 ಗಂಟೆಗೆ ಶ್ವಾನಗಳ ಪ್ರದರ್ಶನ ನಡೆಯುತ್ತವೆ. ನಂತರ ಮಧ್ಯಾಹ್ನ 2 ಗಂಟೆಗೆ ಭವ್ಯವಾದ ಹೋರಿಗಳ ಪ್ರದರ್ಶನ, ಹಾಲು ಹಲ್ಲಿನ ಹೋರಿಯ ಪ್ರದರ್ಶನ, ಎರಡು ಹಲ್ಲಿನ ಹೋರಿಯ ಪ್ರದರ್ಶನ, ನಾಲ್ಕು ಹಲ್ಲಿನ ಹೋರಿಯ ಪ್ರದರ್ಶನ, ಆರು ಹಲ್ಲಿನ ಹೋರಿಯ ಪ್ರದರ್ಶನಗಳಿಗೆ ಪ್ರಥಮ, ದ್ವಿತಿಯ, ತೃತಿಯ ಬಹುಮಾನಗಳು ನೀಡಲಾಗವುದು.
ಕೃಷಿ ಮೇಳದಲ್ಲಿ 10-10ಗಳ 47 ಮಳಿಗೆಗಳು ಹಾಗೂ 10-20 ಗಳ 15 ಮಳಿಗೆಗಳಿವೆ. ವಿಶೇಷ ಮನೆ ಬಳಕೆ ವಸ್ತು, ವಾಹನ ಹಾಗೂ ಕೃಷಿ ವಾಹನ, ವಿದ್ಯುತ್ ಯಂತ್ರೋಪಕರಣ ಹಾಗೂ ಹೊಸ ಹೊಸ ವಸ್ತಗಳ ಪ್ರದರ್ಶನಗಳು ಮಳಿಗೆಯಲ್ಲಿ ಇರುತ್ತವೆ.
ಕೃಷಿ ಮೇಳದ ಹೆಚ್ಚಿನ ಮಾಹಿತಿಗಾಗಿ. ಇಂದ್ರಜಿತ್ ಪೂಜೇರಿ 9686206101, ಜಯು ಪೂಜೇರಿ 7847909101 ಇವರನ್ನು ಸಂಪಕರ್ಿಸಬೇಕೆಂದು ಕೃಷಿ ಮೇಳದ ವ್ಯವಸ್ಥಾಪಕ ಮಂಡಳಿಯವರು ತಿಳಿಸಿದ್ದಾರೆ.