ಲೋಕದರ್ಶನ ವರದಿ
ಯಲ್ಲಾಪುರ,18: ಸಕರ್ಾರಿ ಶಾಲೆಗಳಲ್ಲಿನ ಗುಣಮಟ್ಟದ ಹಾಗೂ ನೈತಿಕ ಶಿಕ್ಷಣ ಪಡೆದ ವಿದ್ಯಾಥರ್ಿಗಳು ಜಗತ್ತಿನ ಯಾವ ಮೂಲೆಯಲ್ಲೂ ಬದುಕು ರೂಪಿಸಿಕೊಳ್ಳಬಲ್ಲರು ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿದರ್ೇಶಕ ಸಿ.ಎಸ್. ನಾಯ್ಕ ಹೇಳಿದರು.
ಅವರು ತಾಲೂಕಿನ ಮಂಚಿಕೇರಿ ಸಮೀಪದ ತುಂಬೇಬೀಡಿನ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣಮಹೋತ್ಸವ ಸಮಾರಂಭದ ಉದ್ಘಾಟನಾ ಸಮಾರಂಭದಲ್ಲಿ ಮಕ್ಕಳ ಕೈಬರಹದ `ಸೊಗಸು' ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಮಕ್ಕಳಿಗಾಗಿ ಆಸ್ತಿ ಮಾಡುವ ಅಗತ್ಯವಿಲ್ಲ, ಅದು ಶಾಶ್ವತವೂ ಅಲ್ಲ. ಮಕ್ಕಳಿಗೆ ಉತ್ತಮ ಸಂಸ್ಕಾರಯುತ ಶಿಕ್ಷಣ ನೀಡಿದರೆ ದೇಶದ ಅಭಿವೃದ್ಧಿಗೆ ಮುಖ್ಯ ಪಾತ್ರವಹಿಸುತ್ತಾರೆ. ಅವರೇ ದೇಶದ ಆಸ್ತಿಯಾಗುತ್ತಾರೆ ಎಂದರು.
ಜಿ.ಪಂ ಸದಸ್ಯೆ ರೂಪಾ ಬೂರ್ಮನೆ ನೂತನ ಬಯಲು ರಂಗಮಂದಿರ ಉದ್ಘಾಟಿಸಿದ ಮಾತನಾಡಿ, ಮಕ್ಕಳಿಗೆ ಪಠ್ಯದ ಜೊತೆಗೆ ನೈತಿಕ ಶಿಕ್ಷಣದ ಅವಶ್ಯಕತೆ ಇದೆ. ಶಿಕ್ಷಕರು ಪಾಲಕರು ಅದರತ್ತ ಆದ್ಯತೆ ನೀಡಬೇಕು ಎಂದು ಹೇಳಿದರು.
ತಾ.ಪಂ ಅಧ್ಯಕ್ಷೆ ಭವ್ಯಾ ಶೆಟ್ಟಿ ಮಾತನಾಡಿ, ಇಂದಿನ ಮಕ್ಕಳಲ್ಲಿ ಸೂಕ್ಷ್ಮ ಸಂವೇದನಾ ಶಕ್ತಿ ಕಡಿಮೆಯಾಗುತ್ತಿದೆ. ಅದನ್ನು ಜಾಗೃತಗೊಳಿಸುವ ಕಾರ್ಯ ಸಕರ್ಾರಿ ಶಾಲೆಯ ಶಿಕ್ಷಕರಿಂದ ಸಾಧ್ಯ. ಸಕರ್ಾರ ತರಗತಿಗೊಂದರಂತೆ ಶಿಕ್ಷಕರ ನೇಮಕ ಮಾಡಿದರೆ ಮಕ್ಕಳಿಗೆ ಪರಿಣಾಮಕಾರಿಯಾಗಿ ಶಿಕ್ಷಣ ನೀಡಲು ಸಾಧ್ಯ ಎಂದರು.
ಕಂಪ್ಲಿ ಗ್ರಾ.ಪಂ.ಅಧ್ಯಕ್ಷ ಪವನಕುಮಾರ್ ಕೇಸರ್ಕರ್ ರಂಗೋಲಿ ಪ್ರದರ್ಶನ ಉದ್ಘಾಟಿಸಿದರು. ಹಿರಿಯರಾದ ಆರ್.ಎಸ್.ಹೆಗಡೆ ಕಂಪ್ಲಿ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶಾಲೆಯ ಹಳೆಯ ವಿದ್ಯಾಥರ್ಿಗಳಾದ ಎನ್.ಎಂ.ಭಟ್ಟ ಬಾಳಕಲ್, ಪ್ರಸನ್ನ ಭಟ್ಟ ಬಾಳಕಲ್, ಗಣೇಶ ಬೂರ್ಮನೆ, ವಿಜಯಲಕ್ಷ್ಮೀ ಕಂಪ್ಲಿ, ಪಂಡಿತ್ ಶ್ರೀಪಾದ ಹೆಗಡೆ ಕಂಪ್ಲಿ, ಶಾಂತಾರಾಮ ನಾಯಕ, ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಜಿ.ಎಂ.ಮಡಿವಾಳ, ಎಸ್.ಆರ್.ನಾಯ್ಕ,ಪ್ರೇಮಾ ಶೇಟ್, ಲಕ್ಷ್ಮೀ ನಾಯ್ಕ ಮುಂತಾದವರನ್ನು ಸನ್ಮಾನಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ, ತಾ.ಪಂ ಉಪಾಧ್ಯಕ್ಷೆ ಸುಜಾತಾ ಸಿದ್ದಿ, ಸದಸ್ಯ ನಟರಾಜ ಗೌಡರ್, ಗ್ರಾ.ಪಂ ಸದಸ್ಯರಾದ ವೆಂಕಟೇಶ ನಾಯ್ಕ, ರೇಣುಕಾ ಲಮಾಣಿ, ಹಿರಿಯರಾದ ವಿನಾಯಕ ಭಟ್ಟ ಬಾಳಕಲ್, ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರಾಜ ಹೆಗಡೆ, ಉಪಾಧ್ಯಕ್ಷ ಭಾಸ್ಕರ ಶಾಸ್ತ್ರಿ ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕಿ ಸುನಂದಾ ಭಟ್ಟ, ಶಿಕ್ಷಕಿ ಆಶಾಬಾಯಿ ಶೇಟ್, ಪ್ರಕಾಶ ಭಟ್ಟ, ಗುರುಪ್ರಸಾದ ಭಟ್ಟ ನಿರ್ವಹಿಸಿದರು.