ಮಕ್ಕಳು ಮಹಾತ್ಮರ ಆದರ್ಶಗಳನ್ನು ಅಳವಡಿಸಿಕೊಳ್ಳಿ : ಡಾ.ಸಿ.ಬಿ.ಕುಲಿಗೋಡ

ಮುಗಳಖೋಡ: ಇಂದಿನ ಯುವ ಪೀಳಿಗೆ ಹಾಗೂ ಸಮಾಜದ ಎಲ್ಲಾ ಮಕ್ಕಳು ದೇಶದ ಸ್ವತಂತ್ರಕ್ಕಾಗಿ ಹೋರಾಟ ನಡೆಸಿ ತಮ್ಮ ಸರ್ವಸ್ವವನ್ನು ಅರ್ಪಿಸಿದ ಮಹಾನ್ ದೇಶಭಕ್ತರ ಆದರ್ಶಗಳನ್ನು ಅಳವಡಿಕೊಂಡು ತಮ್ಮ ಜೀವನವನ್ನು ಸುಂದರಾಗಿ ರೂಪಿಸಿಕೊಳ್ಳಬೇಕೆಂದು ಜಿ.ಪಂ.ಮಾಜಿ ಸದಸ್ಯರಾದ ಡಾ.ಸಿ.ಬಿ.ಕುಲಿಗೋಡ ಅವರು ತಮ್ಮ ಅಭಿಮತವನ್ನು ವ್ಯಕ್ತಪಡಿಸಿದರು.

    ಅವರು ರಾಯಬಾಗ ತಾಲೂಕಿನ ಸುಕ್ಷೇತ್ರ ಮುಗಳಖೋಡ ಪಟ್ಟಣದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ನಡೆದ 73ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿ ನಾವೇಲ್ಲರೂ ದೇಶಕ್ಕಾಗಿ ನಮ್ಮ ಸರ್ವಸ್ವವನ್ನು ತ್ಯಾಗ ಮಾಡಲು ಸಿದ್ದರಿರಬೇಕೆಂದು ಹೇಳಿದರು.  ಸಂಸ್ಥೆಯ ಉಪಾದ್ಯಕ್ಷರಾದ ಪ್ರಕಾಶ ಆದಪ್ಪಗೋಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

   ಈ ಸಂಭ್ರಮದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಹಾತ್ಮರ ಭಾವಚಿತ್ರಕ್ಕೆ ಪಿ.ಎಂ.ಕುಲಿಗೋಡ ಹಾಗೂ ಗಣ್ಯರು ಪೂಜೆ ಸಲ್ಲಿಸಿದರು. ಮುಖಂಡರಾದ ರಮೇಶ ಯಡವನ್ನವರ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ನಂತರದಲ್ಲಿ ವಿವಿಧ ಅಂಗಸಂಸ್ಥೆಯ ಮಕ್ಕಳಿಂದ ದೇಶಭಕ್ತಿ ಗೀತೆ, ಭಾಷಣ, ನೃತ್ಯಗಳು ನಡೆದವು. ಈ ಕಾರ್ಯಕ್ರಮದಲ್ಲಿ ಯಮನಪ್ಪ ಬಾಬನ್ನವರ, ಪರಗೌಡ ಖೇತಗೌಡರ, ಎಸ್.ಎ.ಯಡವನ್ನವರ, ಶಿವಬಸು ಕಾಪಸಿ, ಅಶೋಕ ಬಾಗಿ, ಬಸವರಾಜ ತೇರದಾಳ, ಉಮಣ್ಣ ಬಾಬನ್ನವರ, ವಿಠ್ಠಲ ಮೇಕ್ಕಳಕಿ, ವಿಜಯ ನಾಯಿಕ, ಮಹಾದೇವ ಪತ್ತಾರ, ಇನ್ನೂ ಹಲವಾರು ಗಣ್ಯರು ಸೇರಿದಂತೆ ಪುರಸಬೆ ಸದಸ್ಯರಾದ ವಿಠ್ಠಲ ಯಡವನ್ನವರ, ಪ್ರತಾಪ ಶೇಗುಣಸಿ, ಚಂದು ಗೌಲತ್ತಿನವರ, ಮಯೂರ ಕುರಾಡೆ, ಕಪೀಲ ಕರಿಭೀಮಗೋಳ, ಪದ್ಮಣ್ಣ ಕುರಾಡೆ, ಸಂಸ್ಥೆಯ ರೈನಬೋ ಸೇಂಟ್ರಲ್ ಸ್ಕೂಲ್, ಪ್ರಾಥಮಿಕ, ಹೈಸ್ಕೂಲ್, ಪದವಿ-ಪೂರ್ವ, ಐ.ಟಿ.ಐ ಹಾಗೂ ಡಾ.ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯದ ಮುಖ್ಯಸ್ಥರು, ಸಿಬಂದ್ದಿಯವರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.