ಅಥಣಿ 05: ಅಥಣಿ ಪಟ್ಟಣದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ 10.00 ಲಕ್ಷ.ರೂ,ಗಳಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಆಯುಷ ಫೆಡರೇಶನ್ ಆಫ್ ಇಂಡಿಯಾ (ಂಈಋ)ದ ಸಮುದಾಯ ಭವನದ ಭೂಮಿ ಪೂಜೆಯನ್ನು ಯುವ ಧುರೀಣ ಚಿದಾನಂದ ಸವದಿ ನೆರವೇರಿಸಿದರು.
ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಚಿದಾನಂದ ಸವದಿ, ಇದೇ ಮೊದಲ ಬಾರಿ ಬಹುಶಃ ರಾಜ್ಯದಲ್ಲಿಯೇ ್ರ್ರಥಮ ಬಾರಿಗೆ ಆಯುಶ್ ವೈದ್ಯರ ವೈದ್ಯಕೀಯ ಕಲಿಕಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಆಯುಷ್ ಭವನದ ನಿರ್ಮಾಣಕ್ಕೆ ಅಥಣಿ ಶಾಸಕರಾದ ಲಕ್ಷ್ಮಣ ಸವದಿ ತಮ್ಮ ಶಾಸಕ ನಿಧಿಯಿಂದ ಅನುದಾನ ಮಂಜೂರು ಮಾಡಿದ್ದಾರೆ ಎಂದು ಹೇಳಿದರು. ಶಾಸಕ ಲಕ್ಷ್ಮಣ ಸವದಿ ಅಥಣಿ ಮತಕ್ಷೇತ್ರ ಸಮಗ್ರ ಅಭಿವೃದ್ಧಿಗಾಗಿ ನೀರಾವರಿ, ಶೈಕ್ಷಣಿಕ, ಸಾಮಾಜಿಕ, ವೈದ್ಯಕೀಯ ಕ್ಷೇತ್ರಗಳಲ್ಲಿ ಅನೇಕ ಯೋಜನೆಗಳನ್ನು ಅನುಷ್ಢಾನಗೊಳಿಸಿದ್ದಾರೆ ಎಂದ ಅವರು ಮೂಲ ಭೂತ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಈ ನಿಟ್ಟಿನಲ್ಲಿಯೂ ಅನೇಕ ಮಹತ್ವದ ಕಾರ್ಯಕ್ರಮಗಳನ್ನು ಶಾಸಕ ಲಕ್ಷ್ಮಣ ಸವದಿ ಜಾರಿಗೊಳಿಸಿದ್ದಾರೆ ಎಂದು ಹೇಳಿದರು.
ಭೂಮಿ ಪೂಜಾ ಕಾರ್ಯಕ್ರಮದ ಸಾನಿಧ್ಯವನ್ನು ಶೆಟ್ಟರ ಮಠದ ಶ್ರೀ ಮರುಳಸಿದ್ಧ ಸ್ವಾಮೀಜಿ ಹಾಗೂ ಅಧ್ಯಕ್ಷತೆಯನ್ನು ಆಯುಷ್ ಸಂಘದ ಅಧ್ಯಕ್ಷ ಡಾ.ಸತೀಶ ಮುಗ್ಗನವರ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಥಣಿ ಗ್ರಾಮೀಣ ಗ್ರಾಮ ಪಂಚಾಯತ ಅಧ್ಯಕ್ಷ ಶಂಕರ ಗಡದೆ, ಪುರಸಭಾ ಸದಸ್ಯ ಮಲ್ಲೇಶ ಹುದ್ದಾರ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಜಿ.ಪಂ ಅಧಿಕಾರಿ ವೀರಣ್ಣಾ ವಾಲಿ, ಗುತ್ತಿಗೆದಾರ ಬಸವರಾಜ ಭಂಗಿ, ಆಯುಷ್ ಸಂಘದ ಡಾ.ಪಿ.ಬಿ.ಬಾಗೇವಾಡಿ, ಡಾ.ಸಂಜಯ ಪೂಜಾರಿ, ಡಾ.ರಾಮಸಿಂಗ ರಜಪುತ, ಡಾ.ಕಾಶಿನಾಥ ಮೋಪಗಾರ, ಡಾ.ಮುರಾರಿ ಬಣಜ, ಡಾ.ಮಹಾದೇವ ಕುಳಲಿ, ಡಾ.ಶಿವಾನಂದ ಗಲಭಿ, ಡಾ.ರವಿ ಗಾವಡೆ, ಡಾ.ರವೀಂದ್ರ ಪಾಟೀಲ, ಡಾ.ಸಂತೋಷ ಬಕ್ಕಣ್ಣವರ, ಡಾ.ಶಿವಾನಂದ ಗಸ್ತಿ, ಡಾ.ನಿಂಗಪ್ಪಾ ಕೋರಿ, ಡಾ.ಧರೆಪ್ಪ ತೇಲಿ, ಡಾ.ಸುರೇಶ ಬಂಡಗರ, ಡಾ.ಪಂಕಜ ಪಾಟೀಲ, ಡಾ.ಮೋಮಿನ್, ಡಾ.ಜಕನೂರ, ಡಾ.ಶ್ರೀ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.