ಗುರು ತಂದೆಯಾಗಿ ತಾಯಿಯಾಗಿ ಭಕ್ತರನ್ನು ಸಲಹಿ ಮಾರ್ಗದರ್ಶನ ಮಾಡಿರುವ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ

ರಾಣಿಬೆನ್ನೂರ,21: ಗುರು ತಂದೆಯಾಗಿ ತಾಯಿಯಾಗಿ ಭಕ್ತರನ್ನು ಸಲಹಿ ಮಾರ್ಗದರ್ಶನ ಮಾಡಿರುವ ಶ್ರೀ ಲಿಂಗೈಕ ಚಂದ್ರಶೇಖರ ಒಡೆಯರ ಶಿವಾಚಾರ್ಯ ಮಹಾಸ್ವಾಮಿಗಳು ಕಾಮಧೇನು ಕಲ್ಪವೃಕ್ಷವಾಗಿದ್ದಾರೆ ಎಂದು ಹೊನ್ನಾಳಿ ಹಿರೇಕಲ್ಮಠದ ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. 

ಇಲ್ಲಿನ ಮೃತ್ಯುಂಜಯ ನಗರದ ಶ್ರೀ ಚೆನ್ನೇಶ್ವರ ಮಠದಲ್ಲಿ ಚೆನ್ನಮಲ್ಲಕಾರ್ಜುನಸ್ವಾಮಿ ಸಂಸ್ಕೃತಿ ಪ್ರಸಾರ ಪರಿಷತ್ತು ವತಿಯಿಂದ ಏರಿ​‍್ಡಸಿದ್ದ (ರಿ) ರಾಣೇಬೆನ್ನೂರು ಇಲ್ಲಿ ಪೂಜ್ಯಶ್ರೀ ಲಿಂಗೈಕ್ಯ ಒಡೆಯರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರ ಸಂಸ್ಕರಣೋತ್ಸವ ಅಂಗವಾಗಿ ಜ್ಞಾನವಾಹಿನಿ 280 ರ  ಮಾಸಿಕ ಧರ್ಮ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ವ್ಯಕ್ತಿಗೆ ಜಯವಲ್ಲ, ಜಾತಿಗೆ ಜಯವಲ್ಲ, ಧರ್ಮಕ್ಕೆ ಜಯವಲ್ಲ ಸಮಗ್ರ ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವ ಪರಂಪರೆಯನ್ನು ನೀಡಿರುವ ಶ್ರೀಗಳ ಧರ್ಮ ಹಾದಿ ಎಂದಿಗೂ ಪ್ರಸ್ತುತವಾಗಿದೆ ಎಂದು ನುಡಿದರು.  

ಚನ್ನಬಸವ ಪ್ರಶಸ್ತಿ ಪುರಸ್ಕೃತ  ಪ್ರೊ. ಎಚ್‌.ಎ. ಭಿಕ್ಷಾವರ್ತಿಮಠ  ಇವರು ಉಪನ್ಯಾಸ ನೀಡಿದರು.  

ನಿವೃತ್ತ ಶಿಕ್ಷಕ ಪಾಲಾಕ್ಷಯ್ಯ ನೆಗಳೂರಮಠ, ನೆಹರು ಮಾರ್ಕೆಟ್ ವರ್ತಕರ ಸಂಘದ ಅಧ್ಯಕ್ಷ ಬಸವರಾಜಪ್ಪ ಪಟ್ಟಣಶೆಟ್ಟಿ,  ಹಾಲಪ್ಪ ಮುದ್ದಿಯವರ, ಪುಟ್ಟನಗೌಡ ತೆಂಬದ, ಈರಣ್ಣ  ಶೆಟ್ಟರ,  ರಾಜಶೇಖರ ಹಾದಿಮನಿ, ಸುರೇಶ ಸಣ್ಣಗೌಡರ,  ವಿಜಯ್ ಕಬ್ಬಿಣದ,  ಸುರೇಶ್ ಮಾಳಗಿ, ಶಿವಯೋಗಿ ಅಂಗಡಿ, ನಾಗರಾಜ ಅಂಗಡಿ, ಮೃತ್ಯುಂಜಯ ಪಾಟೀಲ, ಕೋಮಲ ಕುಮಾರ ಕೋರಿಶೆಟ್ರು, ಮಂಜುನಾಥ ಗೌಡಶಿವಣ್ಣನವರ, ಬಸವರಾಜ ನರಸಿಗೊಂಡರ, ವಾದಿರಾಜ ಕುಲಕರ್ಣಿ, ಸಿದ್ದಣ್ಣ ಶಿವಲಿಂಗಪ್ಪನವರ, ಅಮೃತಗೌಡ ಹಿರೇಮಠ,  ಜಗದೀಶ ಮಳಿಮಠ,  ಕಸ್ತೂರೆಮ್ಮ ಪಾಟೀಲ, ಎಂಕೆ ಹಾಲಸಿದ್ದಯ್ಯಾ, ಸುನಂದಮ್ಮ ತಿಳವಳ್ಳಿ ಉಪಸ್ಥಿತರಿದ್ದರು