ಹಡಪದ ಅಪ್ಪಣ್ಣ ಸಮಾಜ ಅಭಿವೃದ್ಧಿ ಸಂಘದ ಧರ್ಮಕಾರ್ಯ ಶ್ಲಾಘನೀಯ

ಲೋಕದರ್ಶನ ವರದಿ

ಮೂಡಲಗಿ 13: ಸ್ಥಳೀಯ ಈರಣ್ಣನಗರದ ಅವಿರಳಜ್ಞಾನಿ ನಿಜಸುಖಿ ಶಿವಶರಣ ಹಡಪದ ಅಪ್ಪಣ್ಣನವರ ದೇವಸ್ಥಾನದಲ್ಲಿ ಶಿವಶರಣ ಹಡಪದ ಅಪ್ಪಣ್ಣ ಸಮಾಜ ಅಭಿವೃದ್ದಿ ಸಂಘದಿಂದ ಹಮ್ಮಿಕೊಂಡ 7ನೇ ಶರಣ ಸಂಸ್ಕೃತಿ ಉತ್ಸವವೂ ಅದ್ದೂರಿಯಿಂದ ನಡೆಯಿತು.

    ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಶರಣ ಸಂಸ್ಕೃತಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿ, ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ. ನಾವು ಗಳಿಸುವ ಸಂಪತ್ತಿನಲ್ಲಿ ಅಲ್ಪ ಸಂಪತ್ತನ್ನು ದಾನ ಮಾಡಬೇಕು. ಹಡಪದ ಅಪ್ಪಣ್ಣ ಸಮಾಜ ಅಭಿವೃದ್ಧಿ ಸಂಘವು ಹಮ್ಮಿಕೊಂಡ ಧರ್ಮಕಾರ್ಯ ಶ್ಲಾಘನೀಯವಾಗಿದೆ. ಇಂತಹ ಶರಣ ಸಂಸ್ಕೃತಿಯು ಹೆಚ್ಚು ಹೆಚ್ಚಾಗಿ ನಡೆಯಬೇಕಾಗಿದೆ ಎಂದರು.

    ಸುಣಧೋಳಿ ಜಡಿಸಿದ್ದೇಶ್ವರ ಮಠದ ಪೀಠಾಧಿಪತಿ ಅಭಿನವ ಶಿವಾನಂದ ಸ್ವಾಮಿಜಿ ಸಾನಿಧ್ಯವಹಿಸಿ ಆಶೀರ್ವಚನ ನೀಡುತ್ತ,  ಶರಣರು ಶರೀರ ದಂಡನೆಯಿಂದ ಮಹಾತ್ಮರಾಗಿದ್ದಾರೆ. ಮನುಷ್ಯ ತಮ್ಮಲ್ಲಿರುವ ದುಗರ್ುಣಗಳನ್ನು ತ್ಯಜಿಸಬೇಕು. ಭಕ್ತಿ ಮಾಡಿದಾಗ ಮಾತ್ರ ಭಕ್ತಿಯಲ್ಲಿರುವ ಶಕ್ತಿಯ ಮಹಾತ್ವ ತಿಳಿಯುತ್ತದೆ. ಭಗವಂತನ ಬಲದಿಂದ ಏನೂ ಬೇಕಾದರೂ ಸಾಧಿಸಬಹುದು.

   ಕಂಕಣವಾಡಿಯ ಮಾರುತಿ ಶರಣರು, ಖಣದಾಳದ ರಾಯಪ್ಪಾ ಶರಣರು, ಖಾನಟ್ಟಿಯ ಮಲ್ಲಿಕಾಜರ್ುನಮಠದ ಬಸವಾನಂದ ಸ್ವಾಮಿಜೀ, ಮೂಡಲಗಿಯ ಶಿವಶರಣ ಹಡಪದ ಅಪ್ಪಣ್ಣನವರ ದೇವಸ್ಥಾನದ ಶರಣರಾದ ಶಕಂರ ಉದಗಟ್ಟಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ನಾಗನೂರಿನ ಸಂಗೀತ ಶಿಕ್ಷಕ ಸೋಮಶೇಖರ ಕಂಠಿಕರಮಠ ಇವರಿಂದ ಸಂಗೀತ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಅನ್ವರ್ ನದಾಪ್, ಎಸ್.ಜಿ.ಢವಳೇಶ್ವರ, ರುದ್ರಪ್ಪ ವಾಲಿ, ನಿಂಗಪ್ಪ ಫಿರೋಜಿ, ಈರಪ್ಪ ಕಾಳಪ್ಪಗೋಳ, ಶಿವಬಸು ಸುಣಧೋಳಿ, ಸುಭಾಸ ರೈನಾಪೂರ, ಶಿವಬೋಧ ಉದಗಟ್ಟಿ, ಮಾರುತಿ ಹಡಪದ, ಮಾಹಂತೇಶ ಹಡಪದ, ಶಿವಬೋದ ಕೊರೆನ್ನವರ, ಚನ್ನಪ್ಪ ನಾವಿ,  ಉಮೇಶ ಹಡಪದ ಸೇರಿದಂತೆ ಹಡಪದ ಅಪ್ಪಣ್ಣ ಸಮಾಜ ಬಾಂಧವರು ಭಾಗವಹಿಸಿದ್ದರು.