ಚಾಮಲಾಪೂರ ಪ್ರಕರಣ: ಆರೋಪಿಗೆ ಕಠಿಣ ಶಿಕ್ಷೆ ನೀಡಲು ಒತ್ತಾಯಿಸಿ ಮನವಿ


ಮೂಡಲಗಿ 22: ರಾಜ್ಯದಲ್ಲಿ ಅಪ್ರಾಪ್ತ್ತ ಬಾಲಕಿಯರ ಮೇಲೆ ಅತ್ಯಾಚಾರಗಳು  ಹೆಚ್ಚು ನಡೆಯುತ್ತಿದ್ದು, ಇತ್ತಿಚಿಗೆ ಉಪ್ಪಾರ ಸಮಾಜದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಿ ಬಾಲಕಿಯ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ಭಗಿರಥ ಉಪ್ಪಾರ ಸಮಾಜ ಸೇವಾ ಸಂಘ ಮತ್ತು ಭಗಿರಥ ಯುವ ಸೇನೆ ಮೂಡಲಗಿ ಇವುಗಳ ನೆತೃತ್ವದಲ್ಲಿ ತಹಶೀಹಲ್ದಾರ ಮೂಲಕ ಮನವಿ ಸಲ್ಲಿಸಿದರು.  

ಮೈಸೂರು ಜಿಲ್ಲೆ ನಂಜನಗೂಡು ಪಟ್ಟಣದ ಚಾಮಲಾಪೂರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ಉಪ್ಪಾರ ಜನಾಂಗಕ್ಕೆ ಸೇರಿದ 12 ವರ್ಷದ ಹೆಣ್ಣು ಮಗು ಕುಮಾರಿ ಐಶ್ವರ್ಯ ಕೆ. ಎಂಬ ಮಗುವಿನ ಮೇಲೆ ಕಾಮುಕರು 

ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆಗೈದಿದ್ದು. ಅಂತಹ ಅತ್ಯಾಚಾರಿಗಳನ್ನು ಬಂಧಿಸಿ ಮರಣೆ ದಂಡನೆ ಶಿಕ್ಷೆ ವಿಧಿಸಬೇಕೆಂದು ಉಪ್ಪಾರ ಸಮಾಜ ಬಾಂಧವರು 

 ಆಗ್ರಹಿಸಿದರು. 

ಸಂಘದ ಅಧ್ಯಕ್ಷ ಶಿವಬಸು ಹಂದಿಗುಂದ ಮಾತನಾಡಿ ಅತ್ಯಾಚಾರಿಗಳನ್ನು ಶೀಘ್ರವಾಗಿ ಬಂಧಿಸಿ ಶಿಕ್ಷೆ ನೀಡಬೇಕು ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಕೈಗೊಳ್ಳುತ್ತೇವೆ ಎಂದು ಹೇಳಿದರು. 

ಹಿರಿಯ ಮುಂಖಡ ಬಿ.ಬಿ. ಹಂದಿಗುಂದ ಮಾತನಾಡಿ ಬಾಲಕಿಯ ಮೇಲಿನ ಅತ್ಯಾಚಾರವು ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಇಂತಹ ಆರೋಪಿಗಳನ್ನು ಬಂಧಿಸಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು .ಹಾಗೂ ಸಂತ್ರಸ್ತ ಕುಟುಂಬಕ್ಕೆ ಸರಕಾರದಿಂದ ಪರಿಹಾರಧನ ಕೊಡಬೇಕೆಂದು ಹೇಳಿದರು.

ಲಕ್ಷ್ಮಣ ಅಡಿಹುಡಿ, ಹಾಲಪ್ಪ ಅಂತರಗಟ್ಟಿ, ಈಶ್ವರ ಕಂಕಣವಾಡಿ, ಹನುಮಂತ ಪೂಜೇರಿ, ಶಿವಬಸು ಮೆಳವಂಕಿ, ಆನಂದ ಪೂಜೇರಿ, ಹನಮಂತ ಹಂದಿಗುಂದ, ರಂಗಪ್ಪಾ ಕಪ್ಪಲಗುದ್ದಿ, ಭಗವಂತ ಉಪ್ಪಾರ, ಬಸವರಾಜ ಹುಚ್ಚನ್ನವರ, ಹನಮಂತ ಕಂಕಣವಾಡಿ ವಾಯ.ವಾಯ.ಸುಲ್ತಾನಪೂರ, ಅಜ್ಜಪ್ಪಾ ಕಂಕಣವಾಡಿ, ರಮೇಶ ಉಪ್ಪಾರ, ಎಸ್. ಚಿಪ್ಪಲಕಟ್ಟಿ ಅಡಿವೆಪ್ಪ ಸಿರಸಂಗಿ, ಪ್ರವೀಣ ಕಂಕಣವಾಡಿ, ಪರಸಪ್ಪಾ ತಿಗಡಿ, ಗುರು ಗಂಗನ್ನವರ, ಆನಂದ ಮೆಳವಂಕಿ, ಕೃಷ್ಣಪ್ಪಾ ಪಾಟೀಲ್, ಭಿರಪ್ಪಾ ಕುರಿ, ಸುಭಾಸ ಗೋಡ್ಯಾಗೋಳ ಮುಂತಾದವರು ಹಾಜರಿದ್ದರು.