ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಉದ್ಘಾಟನೆ

Centenary Inauguration of Govt Senior Primary School

 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಉದ್ಘಾಟನೆ 

ಹಾನಗಲ್  07:  ಶಾಲೆಗಳ ಕಟ್ಟಡ ನಿರ್ಮಿಸಲು ಭೂಮಿದಾನ ಮಾಡಿರುವ ದಾನಿಗಳ ಜಯಂತಿಯನ್ನು ಕಡ್ಡಾಯವಾಗಿ ಶಾಲೆಗಳಲ್ಲಿ ಆಚರಿಸುವ ಮೂಲಕ ದಾನಿಗಳನ್ನು ಸ್ಮರಿಸುವಂತೆ ಶಾಸಕ ಶ್ರೀನಿವಾಸ ಮಾನೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. 

     ತಾಲೂಕಿನ ಮಾರನಬೀಡ ಗ್ರಾಮದ ಮುದುಕಪ್ಪ ಬಸಪ್ಪ ಕರಿಯಪ್ಪನವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

       ದಾನದ ರೂಪದಲ್ಲಿ ಜಮೀನು ಸಿಗದಿದ್ದರೆ ಶಾಲೆ, ಕಾಲೇಜು, ಆಸ್ಪತ್ರೆಗಳು ನಿರ್ಮಾಣವಾಗುತ್ತಿರಲಿಲ್ಲ. ರುದ್ರಭೂಮಿಗೂ ಜಾಗ ಸಿಗುತ್ತಿರಲಿಲ್ಲ.ಹಾಗಾಗಿ ಉದಾರ ದಾನಿಗಳನ್ನು ನೆನೆಯಬೇಕಿರುವುದು ನಮ್ಮ ಕರ್ತವ್ಯವಾಗಿದೆ. ತಾಲೂಕಿನಲ್ಲಿ ಒಟ್ಟು 51 ಶಾಲೆಗಳಿಗೆ ದಾನಿಗಳು ಭೂಮಿ ದಾನ ಮಾಡಿದ್ದಾರೆ. ಸಮುದಾಯ ಸಾಥ್ ನೀಡಿದರೆ ಶೈಕ್ಷಣಿಕವಾಗಿ ಬದಲಾವಣೆ ತರುವುದು ಸುಲಭ ಸಾಧ್ಯವಾಗಲಿದೆ ಎಂದರು.  

  ಸಾನ್ನಿಧ್ಯವಹಿಸಿದ್ದ ಹಾವೇರಿಯ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ  ಶಿಕ್ಷಕರು ಸಮರ​‍್ಣ ಮನೋಭಾವನೆಯಿಂದ ಶಿಕ್ಷಣ ನೀಡಿದರೆ ವಿದ್ಯಾರ್ಥಿಗಳು ದೇವರ ರೂಪದಲ್ಲಿ ಕಾಣಲಿದ್ದಾರೆ. ಬದುಕಿಗೆ ಬೇಕಿರುವ ಮೌಲ್ಯಗಳನ್ನು ಬಿತ್ತುವ ಕೆಲಸವನ್ನು ಶಿಕ್ಷಕರು ಶ್ರದ್ಧೆಯಿಂದ ನಿರ್ವಹಿಸಬೇಕಿದೆ ಎಂದು ಹೇಳಿದ ಅವರು ಸಮುದಾಯದ ಸಹಕಾರದಿಂದ ಸರ್ಕಾರಿ ಶಾಲೆಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಕೆಲಸ ಹಾನಗಲ್ ತಾಲೂಕಿನಲ್ಲಿ ಮಾದರಿಯಾಗಿ ನಡೆದಿದೆ ಎಂದು ಸಂತಸ ವ್ಯಕ್ತಪಡಿಸಿದರು. 

  ಸಮ್ಮುಖ ವಹಿಸಿದ್ದ ಹೋತನಹಳ್ಳಿಯ ಸಿದ್ದಾರೂಢ ಮಠದ ಸದ್ಗುರು ಶಂಕರಾನಂದ ಸ್ವಾಮೀಜಿ ಮಾತನಾಡಿ, ಶಿಕ್ಷಣದಿಂದ ಮಾತ್ರ ವಿಕಾಸ ಸಾಧ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಮುಂದಾಗಬೇಕಿದೆ ಎಂದರು. 

  ಗ್ರಾಪಂ ಅಧ್ಯಕ್ಷ ಈರ​‍್ಪ ಜಾಡರ,ಎಸ್‌.ಡಿ.ಎಂ.ಸಿ. ಅಧ್ಯಕ್ಷ ಅಶೋಕ ಸಂಶಿ, ಪ್ರಮುಖರಾದ ಶಿವಶಂಕ್ರಯ್ಯ ಹಿರೇಮಠ, ಬಸವಣ್ಣೆಪ್ಪ ಕರಿಯಪ್ಪನವರ, ಪುಟ್ಟಪ್ಪ ನರೇಗಲ್, ಎಸ್‌.ಜಿ.ಕೋಟಿ, ಡಿ.ಡಿ.ಹಾಲುಂಡಿ, ಪಿಡಿಒ ಆರ್‌.ವೈ.ಹನಕನಹಳ್ಳಿ, ಬಸಪ್ಪ ಒಡೆಯರ, ಕಲ್ಲಪ್ಪ ಬರದೂರ, ನವೀದ್ ಅಲಿ ಹರವಿ, ಬಸಪ್ಪ ಮಾದಮ್ಮನವರ, ಡಾ.ಸುರೇಶ ಮಡಿವಾಳರ, ಮಹಲಿಂಗಪ್ಪ ಬೈಲವಾಳ, ಸಹದೇವಪ್ಪ ಸಂಶಿ, ಎಸ್‌.ಜಿ.ಹಿರೇಮಠ, ಎಂ.ಎ.ನೆಗಳೂರ, ಉಮೇಶ ಗೌಳಿ, ಚಂದ್ರು ಶಿವಬಸಕ್ಕನವರ, ಬಸವರಾಜ ಈಳಿಗೇರ, ಗೌರಮ್ಮ ವರ್ದಿ, ಶೇಕಯ್ಯ ಈಳಿಗೇರ, ಚಂದ್ರ​‍್ಪ ಅಗಡಿ ಸೇರಿದಂತೆ ಇತರರು ಇದ್ದರು.