ಸರ್ವಜ್ಞನ ಜಯಂತಿ ಆಚರಣೆ

Celebration of Sarvajna Jayanti

ಶಿಗ್ಗಾವಿ  22: ಪಟ್ಟಣದ ಕುಂಬಾರ ಓಣಿಯಲ್ಲಿ ಸರ್ವಜ್ಞನ ಜಯಂತಿಯನ್ನು ವಿರಕ್ತಮಠದ ಸಂಗನಬಸವ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಆಚರಿಸಲಾಯಿತು.     ಈ ಸಂದರ್ಭದಲ್ಲಿ ತಾಲೂಕ ದಂಡಾಧಿಕಾರಿ ರವಿ ಕೊರವರ, ಆಹಾರ ನೀರೀಕ್ಷಕ ಶಿವಾನಂದ ಅಜ್ಜಂಪುರ, ಸಮಾಜದ ಅದ್ಯಕ್ಷರಾದ ಮಹೇಶ ಕುಂಬಾರ, ಪುರಸಭೆ ಸದಸ್ಯ ದಯಾನಂದ ಅಕ್ಕಿ, ಸಮಾಜ ಸೇವಕ ಮಂಜುನಾಥ ಮಣ್ಣಣ್ಣವರ, ಕಾಂಗ್ರೇಸ ಮುಖಂಡರಾದ ಮುಕ್ತಿಯಾರ ತಿಮ್ಮಾಪೂರ, ಬಸವರಾಜ ಜೇಕಿನಕಟ್ಟಿ, ದಲಿತ ಮುಖಂಡ ಅಶೋಕ ಕಾಳೆ ಸಮಾಜದ ಮುಖಂಡರಾದ ಬಸಪ್ಪ ಅಜ್ಜಂಪುರ, ಮಹಾರುದ್ರ​‍್ಪ ಅಜ್ಜಂಪುರ, ಬಸಪ್ಪ ಕುಂಬಾರ, ಮಂಜುನಾಥ ಕುಂಬಾರ, ಗೌಳಿ, ಕುಂಬಾರಗೇರಿಮಠ ಸೇರಿದಂತೆ ಸಮಾಜದ ಗುರು ಹಿರಿಯರು ಮತ್ತು ಮಹಿಳೆಯರು ಉಪಸ್ಥಿತರಿದ್ದರು.  

ಭಾಕ್ಸ ಸುದ್ದಿ: ಈ ಸಂದರ್ಭದಲ್ಲಿ ಕೆಲವು ಗಣ್ಯವ್ಯಕ್ತಿಗಳನ್ನು ಸನ್ಮಾನಿಸಲಾಯಿತು.