ಕೊರೊನಾ ನಿಯಂತ್ರಣಕ್ಕೆ ಸ್ವಯಂ ಪ್ರೇರಣೆಯಿಂದ ಶ್ರಮಿಸಲು ಕಾರಜೋಳ ಮನವಿ

ಕಲಬುರಗಿ, ಏ.23, ಕಲಬುರಗಿಯಲ್ಲಿ ಕೊನೊನಾ ವೈರಸ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ  ಶ್ರಮಿಸುತ್ತಿದ್ದರೂ, ಕೊರೊನಾ ವೈರಸ್ ಹರಡುತ್ತಿದೆ. ಕೊರೊನಾ ವೈರಸ್ ನಿಯಂತ್ರಣಕ್ಕಾಗಿ  ನಿಯೋಜಿತ  ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಜನಪ್ರತಿನಿಧಿಗಳು,  ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಶ್ರಮಿಸಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ  ಮನವಿ ಮಾಡಿದ್ದಾರೆ.ಕಲಬುರಗಿಯಲ್ಲಿ   ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇಂದು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಕೋವಿದ್-19  ನಿಯಂತ್ರಣ ಕುರಿತಂತೆ ಸಭೆ ನಡೆಸಿ ಮಾತನಾಡಿದ ಅವರು, ಕೊರೊನಾ ನಿಯಂತ್ರಣ ಕ್ಕಾಗಿ  ಸರ್ಕಾರದ ‌ನಿರ್ದೇಶನಗಳನ್ನು ಜಿಲ್ಲಾಡಳಿತ ಮತ್ತಷ್ಟು ಕಟ್ಟು ನಿಟ್ಟಾಗಿ  ಜಾರಿಗೊಳಿಸಬೇಕು. ಸಾರ್ವಜನಿಕರು  ಸ್ವಯಂ ಪ್ರೇರಿತವಾಗಿ ಅನುಸರಿಬೇಕು.  ಕೃಷಿ  ಉತ್ಪನ್ನಗಳಿಗೆ , ಕೃಷಿಪೂರಕ ಚಟುವಟಿಗಳಿಗೆ ಅಡಚಣೆ ಮಾಡಬಾರದು.

ವೈದ್ಯರು, ಆಶಾ  ಕಾರ್ಯಕರ್ತರು, ಪೊಲೀಸರು ಸೇರಿದಂತೆ ಕೊರೊನಾ ವಾರಿಯರ್ಸ್‌ ಗಳಿಗೆ ಸಹಕರಿಸಬೇಕು. ಅವರು  ತಮ್ಮ ಜೀವದ ಹಂಗನ್ನು ತೊರೆದು ಕಾರ್ಯನಿರ್ವಹಿಸುತ್ತಿದ್ದಾರೆ. ಅವರೊಂದಿಗೆ ಸಹಕರಿಸಿ,  ಜಾಗೃತರಾಗಬೇಕು. ಯಾವುದೇ ಕೊರೊನಾ ವೈರಸ್ ಲಕ್ಷಗಳಿದ್ದರೆ ಕೂಡಲೇ ಸ್ವಯಂ ಪ್ರೇರಿತರಾಗಿ   ವೈದ್ಯರನ್ನು ಭೇಟಿಯಾಗಿ ತಪಾಸಣೆಗೊಳಗಾಗಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ  ಲೋಕಸಭಾ ಸದಸ್ಯ ಡಾ.ಉಮೇಶ ಜಾಧವ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಮಾಲಾಜೆ, ಕಲಬುರಗಿ  ನಗರ ಪೊಲೀಸ್ ಆಯುಕ್ತ  ಸತೀಶ್ ಕುಮಾರ್,  ಜಿಲ್ಲಾಧಿಕಾರಿ  ಶರತ್‌ ಬಿ.   ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ‌ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ ಕಿಶೋರ್ ಬಾಬು, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಮುಂತಾದವರು ಉಪಸ್ಥಿತರಿದ್ದರು.