ಬ್ಯಾಡಗಿ 09: ತಾಲೂಕಿನ ಮೊಟ್ಟೆ ಬೆನ್ನೂರು ಗ್ರಾಮದ ಕೋಟೆ ಆಂಜನೇಯ ಗುಡ್ಡದ ಹತ್ತಿರ ಪುನಾ ಬೆಂಗಳೂರು ಎನ್ ಎಚ್ 4 ರಸ್ತೆಯಲ್ಲಿ ಹರಿಹರದಿಂದ ರಾಕ್ ಗಾರ್ಡನ್ ಸ್ಥಳಕ್ಕೆ ಹೋಗುತ್ತಿದ್ದ ಆಡಿ ಕಾರ್ ಹೊರಟಿದ್ದ ಲಾರಿಗೆ ಹಿಂಬದಿಯಿಂದ ಗುದ್ದಿ ಸ್ಥಳದಲ್ಲಿಯೇ ಕಾರಿನಲ್ಲಿದ್ದ ಆರು ಮಂದಿ ದುರ್ಮರಣಕ್ಕೆ ಈಡಾಗಿದ್ದಾರೆ.
ಇಬ್ಬರು ಗಂಭೀರವಾಗಿ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತಪಟ್ಟಿವರು ಸೈಯದ್ ಫರಾನ್ ಇನಾಮುಲ್ಲಾ ವಯಸ್ಸು 20 ವರ್ಷ ಸಾ.ಹರಿಹರಉಮ್ಮಯಿರಾ ಸೈಯದ್ ಇನಾಮುಲ್ಲಾ ವಯಸ್ಸು 11 ವರ್ಷ ಸಾ. ಹರಿಹರ. ಅಲೀಷ ಅಕ್ಬರ್ ನಾರಂಗಿ ವಯಸ್ಸು 22 ವರ್ಷ ಸಾ.ಮಾಪಸಾ ಗೋವಾ ರಾಜ್ಯ ಪುರಖಾನ್ ಅಕ್ಬರ್ ನಾರಂಗಿ ವಯಸ್ಸು 14 ವರ್ಷ ಸಾ.ಮಾಪಸಾ ಗೋವಾ ರಾಜ್ಯ. ಉಮ್ಮಿಶೀಫಾ ಅಕ್ಬರ್ ಉದಗಟ್ಟಿ ವಯಸ್ಸು 13 ವರ್ಷ ಸಾ.ರಾಣೇಬೆನ್ನೂರ. ಆಶೀಯಾ ಕಲಂದರ್ 12 ವರ್ಷ ಸಾ.ಧಾರವಾಡ.ಗಾಯಗೊಂಡವರು ಮೇಹಕ್ ತಂದೆ ರಶೀದ್ ನಾರಂಗಿ 16 ವರ್ಷ ಸಾ.ಗೋವಾ, ಉಮ್ಮಿ ಟಸ್ಕಿನ್ ಅಪ್ರೋಚ್ ಉದಗಟ್ಟಿ ವಯಸ್ಸು 11 ವರ್ಷ.ಪ್ರಕರಣವನ್ನು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ.