ಎಮ್ಮೆ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿ

ಲೋಕದರ್ಶನವರದಿ

ಬ್ಯಾಡಗಿ11: ಇತ್ತೀಚೆಗೆ ಬ್ಯಾಡಗಿ, ರಾಣೆಬೆನ್ನೂರ, ಹಾನಗಲ್ ಹಾಗೂ ಹಾವೇರಿ ತಾಲೂಕುಗಳು ಸೇರಿದಂತೆ ಇನ್ನೀತರೇ ತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ಎತ್ತು, ಆಕಳು ಹಾಗೂ ಎಮ್ಮೆಗಳ ಕಳ್ಳರ ಹಾವಳಿ ಹೆಚ್ಚಾಗಿ ರೈತರ ನಿದ್ದೆಗೆಡಿಸಿದ ಘಟನೆಗಳು ಜರುಗಿದ್ದವು. ಸ್ಥಳೀಯ ಸಿಪಿಐ  ಭಾಗ್ಯಾವತಿ ಬಂತಿ ಅವರು ಪಿಎಸ್ಐ ಮಹಾಂತೇಶ ಹಾಗೂ ಪೋಲಿಸ್ ಸಿಬ್ಬಂದಿಯೊಂದಿಗೆ ಚುರುಕಿನ ಕಾಯರ್ಾಚರಣೆ ನಡೆಸಿ ಅಂತರ್ ತಾಲೂಕಾ ಎತ್ತು, ಆಕಳು  ಹಾಗೂ ಎಮ್ಮೆಗಳ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

  ಆರೋಪಿತರನ್ನು ಹಿರೇಕೆರೂರ ತಾಲೂಕಿನ ಯೋಗಿಕೋಪ್ಪ ಗ್ರಾಮದ ಸುರೇಂದ್ರ ಬಣಕಾರ, ಬ್ಯಾಡಗಿ ಪಟ್ಟಣದ ಫೈಯಾಜ್ ಬೆಳಗಾಂ, ತಾಲೂಕಿನ ಹೆಡಿಗ್ಗೊಂಡ ಗ್ರಾಮದ ಮಲ್ಲಪ್ಪ ರೊಡ್ಡಮ್ಮನವರ, ಚಂದ್ರು ಕನವಳ್ಳಿ ಎಂದು ಗುತರ್ಿಸಲಾಗಿದೆ. ಆರೋಪಿತರು ಎತ್ತು, ಆಕಳು ಹಾಗೂ ಎಮ್ಮೆಗಳನ್ನು ಬ್ಯಾಡಗಿ ತಾಲೂಕಿನ ಮಾಸಣಗಿ, ಬುಡಪನಹಳ್ಳಿ, ಹೆಡಿಗ್ಗೊಂಡ, ರಾಣೆಬೆನ್ನೂರ ತಾಲೂಕಿನ ಕಾಕೋಳ, ಗುಡ್ಡದಮತ್ತಿಹಳ್ಳಿ, ಹಾನಗಲ್ ತಾಲೂಕಿನ ಆಡೂರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಾಗೂ ಹಾವೇರಿ ತಾಲೂಕಿನ ನೆಲೋಗಲ್ ಸುತ್ತಮುತ್ತಲಿನ ಗ್ರಾಮಗಳಲ್ಲಿಯ ರೈತರ ಎತ್ತು, ಆಕಳು ಹಾಗೂ ಎಮ್ಮೆಗಳನ್ನು ಕಳ್ಳತನ ಮಾಡಿ ಧನದ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು.

   ಆರೋಪಿತ  ಕಳ್ಳರು ತಾವು ಕದ್ದ ಎತ್ತು, ಆಕಳು ಹಾಗೂ ಎಮ್ಮೆಗಳನ್ನು ದೂರದ ಊರುಗಳಾದ ಹುಬ್ಬಳ್ಳಿ, ದಾವಣಗೇರಿ ಹಾಗೂ ರಾಣೆಬೆನ್ನೂರ ಸೇರಿದಂತೆ ಇನ್ನಿತರೇ ಕಡೆಗಳಲ್ಲಿ ಧನದ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರೆಂದು ಹೇಳಲಾಗಿದೆ. ಮಾರಾಟ ಮಾಡಿದ ಹಣವನ್ನು ಆರೋಪಿತರು ಹಂಚಿಕೊಳ್ಳುತ್ತಿದ್ದರು. ಅಂದಾಜು 4 ಲಕ್ಷ ರೂ.ಗಳ ಮೌಲ್ಯದ ಎತ್ತು, ಆಕಳು ಹಾಗೂ ಎಮ್ಮೆಗಳನ್ನು ಆರೋಪಿತರಿಂದ ಮೂಲ ಮಾಲೀಕರಿಗೆ ಕೊಡಿಸುವಲ್ಲಿ ಸಿಪಿಐ  ಭಾಗ್ಯಾವತಿ ಬಂತಿ ಅವರು ಯಶಸ್ವಿಯಾಗಿದ್ದಾರೆ. ಜಿಲ್ಲಾ ಎಸ್ಪಿಯವರ ಮಾರ್ಗದರ್ಶನದಲ್ಲಿ ಸಿಪಿಐ ಭಾಗ್ಯಾವತಿ ಬಂತಿ ಅವರು ಈ ಕಾಯರ್ಾಚರಣೆ ಮಾಡಿ ಅಂತರ್ ತಾಲೂಕಾ ಎತ್ತು, ಆಕಳು ಹಾಗೂ ಎಮ್ಮೆಗಳ ಕಳ್ಳರನ್ನು ಬಂಧಿಸಿ ಕಾರಾಗೃಹಕ್ಕೆ ಕಳುಹಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.