ಪ್ಲಾಸ್ಟಿಕ್ ವಸ್ತುಗಳನ್ನು ಅಂಗಡಿಕಾರರಿಂದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವದು. ಪ್ಲಾಸ್ಟಿಕ್ ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ


ಲೋಕದರ್ಶನ ವರದಿ

ತಾಳಿಕೋಟೆ 10:  ಸಕರ್ಾರದ ನಿಶೇದಿತವಾದ ಪ್ಲಾಸ್ಟಿಕ್ನ್ನು ಅಂಗಡಿಗಳಲ್ಲಿ ಇಟ್ಟು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪುರಸಭೆ ಅಧಿಕಾರಿಗಳು ಗುರುವಾರರಂದು ದಾಳಿ ಮಾಡಿ ಪ್ಲಾಸ್ಟಿಕ್ ಸಂಬಂದಿತ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪಟ್ಟಣದ ಮಹಾವೀರ ಶೆಡಜಿ ಜನರಲ್ ಸ್ಟೋರ್ಸ, ಶೋಭಾ ಜನರಲ್ ಸ್ಟೋರ್ಸ್, ನಿಡಗುಂದಿ ಜನರಲ್ ಸ್ಟೋರ್ಸ್, ಪಟೇಲ್ ಜನರಲ್ ಸ್ಟೋರ್ಸ್ ಅಂಗಡಿಗಳನ್ನೊಳಗೊಂಡು ವಿವಿಧ ಅಂಗಡಿಗಳ ಮೇಲೆ ದಾಳಿ ಮಾಡಿ ನಿಶೇದಿತ ಪ್ಲಾಸ್ಟಿಕ್ ಸಂಬಂದಿತ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ರಾಜ್ಯ ಸಕರ್ಾರದ ಪ್ರದತ್ತವಾಗಿರುವ ಪರಿಸರ ಸಂರಕ್ಷಣೆ ಕಾಯ್ದೆ 1986 ರ ಸೇಕ್ಷನ್ 5 ರ ಪ್ರಕಾರ ಪ್ರಕರ್ಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.

ದಾಳಿಯ ಸಮಯದಲ್ಲಿ ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಆರ್.ಡಿ.ಸನಗೊಂಡ, ಆರೋಗ್ಯ ಅಧಿಕಾರಿ ಎಸ್.ಎ.ಘತ್ತರಗಿ, ಕಿರಿಯ ಆರೋಗ್ಯ ನಿರಿಕ್ಷಕ ನಯೀಮಬಾಬಾ ಅವರು ಪಾಲ್ಗೊಂಡಿದ್ದರು.