ಕೆನರಾ ವಿದ್ಯಾಜ್ಯೋತಿ ಸ್ಕಾಲರಶಿಪ್ ವಿತರಣೆ

ರಾಯಬಾಗ 01: ಕೆನರಾ ಬ್ಯಾಂಕ್ದವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು ಕೆನರಾ ವಿದ್ಯಾಜ್ಯೋತಿ ಸ್ಕಾಲರಶಿಪ್ ನೀಡುತ್ತಿದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿ ಗಳು ಪಡೆದುಕೊಳ್ಳಬೇಕೆಂದು ಕೆನರಾ ಬ್ಯಾಂಕ್ ರಾಯಬಾಗ ಶಾಖೆಯ ವ್ಯವಸ್ಥಾಪಕಿ ಪ್ರಜ್ಞಾ ಪವಾರ ಹೇಳಿದರು. 

ಮಂಗಳವಾರ ಪಟ್ಟಣದ ಸರಕಾರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುವ ಸಮಾರಂಭದಲ್ಲಿ ಪ್ರೌಢ ಮತ್ತು ಪ್ರಾಥಮಿಕ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳಿಗೆ ಶಿಷ್ಯವೇತನ ಚೆಕ್ಗಳನ್ನು ನೀಡಿ ಅವರು ಮಾತನಾಡಿದರು. 

ಮುಖ್ಯೋಪಾಧ್ಯಾಯ ಎಸ್.ಎಮ್.ಹೆಬ್ಬಾಳೆ ಮಾತನಾಡಿ, ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಸರಕಾರ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತಿದೆ. ವಿದ್ಯಾರ್ಥಿ ಗಳು  ಒಳ್ಳೆ ಅಧ್ಯಯನ ಮಾಡಿ ಶಾಲೆಗೆ ಕೀತರ್ಿ ತರಬೇಕೆಂದರು. 

ವಿದ್ಯಾಥರ್ಿನಿಯರಾದ ಸ್ನೇಹಾ ಮೊಟನ್ನವರ, ಸ್ನೇಹಾ ತಳವಾರ, ಸೌಂದರ್ಯ ಹೊಸಮನಿ, ಪಾಯಲ ರಾಠೋಡ, ಐಶ್ವರ್ಯ ಹೊಸಮನಿ ಇವರಿಗೆ ಶಿಷ್ಯವೇತನ ನೀಡಲಾಯಿತು. 

ಬ್ಯಾಂಕ ಸಿಬ್ಬಂದಿ ನವೀನಕುಮಾರ್, ಚಿದಾನಂದ ಮಾಳಗೆ, ಮಹಾಂತೇಶ ಮಸನಾಯ್ಕ, ಮುಖ್ಯೋಪಾಧ್ಯಾಯ ಆರ್.ಟಿ.ಅರಬಳ್ಳಿ ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿ ಗಳು ಉಪಸ್ಥಿತರಿದ್ದರು.