ಲೋಕದರ್ಶನ ವರದಿ
ಮುನವಳ್ಳಿ 9: ಇದೇ ಜ. 14 ಮತ್ತು 15 ರಂದು ಹರಿಹರ ದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಹಾಗೂ ಪಂಚಮಸಾಲಿ ಜಗದ್ಗುರು ಪೀಠದಿಂದ ಜರುಗುವ ಹರಜಾತ್ರಾ ಮಹೋತ್ಸವ ಮತ್ತು ಬೆಳ್ಳಿ-ಬೆಡಗು ಕಾರ್ಯಕ್ರಮದ ಹಿನ್ನಲೆಯಲ್ಲಿ ಪಟ್ಟಣದ ಪಂಚಮಸಾಲಿ ಸಂಘದ ವತಿಯಿಂದ ಪೂರ್ವಭಾವಿ ಸಭೆ ಜ. 8 ರಂದು ರಾತ್ರಿ ಜರುಗಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಂಘದ ಮುಖಂಡರಾದ ಶಿವಾನಂದ ಮೇಟಿ ಹಾಗೂ ಕಲ್ಲಪ್ಪ ನಲವಡೆ ಪಂಚಮಸಾಲಿ ಸಂಘ ಸ್ಥಾಪನೆಯಾಗಿ 25 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಬೆಳ್ಳಿ-ಬೆಡಗು ಕಾರ್ಯಕ್ರಮ ಜೊತೆಗೆ ಯುವ ಸಮಾವೇಶ ಮತ್ತು ಮಹಿಳಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಬಂಧು ಬಾಂಧವರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಲಾಯಿತು.
ಈ ಸಂದರ್ಭದಲ್ಲಿ ಪಂಚಪ್ಪ ಹನಸಿ, ರವಿ ದ್ಯಾಮನಗೌಡರ, ರುದ್ರಗೌಡ ಕಳಸನಗೌಡ್ರ, ಚನ್ನಪ್ಪಗೌಡ ದ್ಯಾಮನಗೌಡ್ರ, ಎಂ.ಎ. ಕಮತಗಿ, ದ್ಯಾಮನಗೌಡ ಬಕಾಡೆ, ರಾಮನಗೌಡ ಗೀದಿಗೌಡ್ರ,ಸತ್ಯಪ್ಪ ಅಡವಿ,ಶ್ರೀಕಾಂತ ಮಲಗೌಡ್ರ, ಸುಭಾಸ ಗೀದಿಗೌಡ್ರ, ಬಸವರಾಜ ಚುಳಕಿ, ಮಂಜುನಾಥ ನವಲಗುಂದ, ರಮೇಶ ಗಂಗನ್ನವರ, ಗುರು ಚಂದರಗಿ,ಉಮೇಶ ಚುಳಕಿ ಇತರರು ಇದ್ದರು.