ಲೋಕದರ್ಶನ ವರದಿ
ಕಕ್ಕೇರಿ: ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಪಿಕೆಪಿಎಸ್ ಸಂಘದ ಶೇರುದಾರರ ಹಿತದೃಷ್ಟಿಯಿಂದ ಸಂಘವನ್ನು ಉಳಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಕರವೇ ಅಧ್ಯಕ್ಷ ಮಹಾಂತೇಶ ಸಂಗೊಳ್ಳಿ ಹೇಳಿದರು.
ತಾಲೂಕಿನ ಲಿಂಗನಮಠ ಗ್ರಾಮದಲ್ಲಿರುವ ಪಿಕೆಪಿಎಸ್ ಕಚೇರಿಯಲ್ಲಿ ಅವರು ಶುಕ್ರವಾರದಂದು ಸಂಘದ ಕಾರ್ಯನಿವರ್ಾಹಕ ಅಧಿಕಾರಿ ಶೋಭಾ ಬೆಳಗಾಂವಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
2017-18ರ ಸಾಲಿನ ಮತ್ತು 2018-19ರ ಸಾಲಿನಲ್ಲಿ ಲಿಂಗನಮಠ ಪಿಕೆಪಿಎಸ್ ಸಂಘದಲ್ಲಿ ಸಾಲಮನ್ನಾ ಪ್ರಯೋಜನ ಪಡೆದ ಫಲಾನುಭವಿಗಳ ಯಾದಿ, ಈ ಎರಡು ವರ್ಷದಲ್ಲಿ ಸಾಲಮನ್ನಾ ಪ್ರಯೋಜನ ಸಿಗದ ಸಾಲಗಾರ ಫಲಾನುಭವಿಗಳ ಯಾದಿ,
ಈ ವರ್ಷದಲ್ಲಿ ಸಾಲಮನ್ನಾ ಆದ ನಂತರ ಸಾಲ ಮರು ಹಂಚಿಕೆಯಾದ ಸಾಲಗಾರರ ಫಲಾನುಭವಿಗಳ ಯಾದಿ, ಈ ವರ್ಷದಲ್ಲಿ ಪ್ರತಿ ಸಾಲಗಾರನಿಗೆ ಎಷ್ಟು ಸಾಲದ ಹಣ ಹಂಚಿಕೆ ಮಾಡಿದರ ಸಂಪೂರ್ಣ ವರದಿ, ಇಲ್ಲಿಯವರೆಗೆ ಸಂಘದಲ್ಲಿರುವ ಸಾಲಗಾರ ಶೇರುದಾರರು ಮತ್ತು ಬಿನ್ ಸಾಲಗಾರ ಶೇರುದಾರರ ಸಂಪೂರ್ಣ ಯಾದಿ, ಸಂಘದ ಹೊಸ ಕಟ್ಟಡದ ನಿಮರ್ಾಣಕ್ಕಾಗಿ ಸಹಾಯಧನವನ್ನು ನೀಡಿದ ಶೇರುದಾರರ ಸಂಪೂರ್ಣ ಹೆಸರು ಮತ್ತು ಮೊತ್ತದ ಯಾದಿ. ಇದರ ಜೊತೆಗೆ 2017-18ರ ಸಾಲಿನ ಹಾಗೂ 2018-19ರ ಸಾಲಿನ ಸಂಘದ ವರ್ಷದ ಅಡಿಟ್ ರಿಪೋಟರ್್ ನ ಸಂಪೂರ್ಣ ಮಾಹಿತಿಯ ನಕಲು ಪ್ರತಿಯನ್ನು ಆದಷ್ಟೂ ಶೀಘ್ರದಲ್ಲಿ ನೀಡಬೇಕೆಂದು ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಗ್ರಾಮದ ಮುಖಂಡರಾದ ರಾಜು ರಪಾಟಿ, ಪಾಂಡುರಂಗ ಮಿಟಗಾರ, ಬಸವರಾಜ ಮುಗಳಿಹಾಳ, ಮಾವಳಿ ಶಹಾಪೂರ, ಲಿಂಗನಮಠ ಸೇವಾ ಸಂಘದ ಸದಸ್ಯರಾದ ಆನಂದ ಮಾಟೋಳ್ಳಿ, ಬಸನಗೌಡ ಪಾಟೀಲ, ರಾಜು ಸಂಗೊಳ್ಳಿ, ಶಿವು ಬಾಗೇವಾಡಿ, ಸಂಘದ ಶೇರುದಾರರು ಹಾಗೂ ಗ್ರಾಮಸ್ಥರು ಹಾಜರಿದ್ದರು.