ಮಹಿಳಾ ಸಾಹಿತ್ಯ ಕೃತಿಗಳಿಗೆ ಬಹುಮಾನಕ್ಕೆ ಗ್ರಂಥಗಳ ಆಹ್ವಾನ
Call for entries for the Women's Literary Works Prize
ಲೋಕದರ್ಶನ ವರದಿ
ಧಾರವಾಡ 16: ಕರ್ನಾಟಕ ವಿದ್ಯಾವರ್ಧಕ ಸಂಘವು 2025 ನೇ ವರ್ಷದ ಶ್ರೇಷ್ಠ ಮಹಿಳಾ ಕನ್ನಡ ಕೃತಿಗಳಿಗೆ “ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ” ಕ್ಕೆ ಕೃತಿಗಳನ್ನು ಆಹ್ವಾನಿಸಿದೆ. ಈ ಬಹುಮಾನಕ್ಕೆ ಕಥೆ, ಕಾವ್ಯ, ಕಾದಂಬರಿ/ನಾಟಕ ಹಾಗೂ ಇತರೆ ಕೃತಿಗಳ ನಾಲ್ಕು ವಿಭಾಗವಾರು ಒಂದೊಂದು ಕೃತಿಯಂತೆ ನಾಲ್ಕು ಅತ್ಯುತ್ತಮ ಕೃತಿಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಪ್ರತಿಯೊಂದು ಕೃತಿಗೆ ರೂ. 15,000/-(ಹದಿನೈದು ಸಾವಿರ) ಸಮಾನಾಂತರ ಬಹುಮಾನ ನೀಡಿ ಗೌರವಿಸಲಾಗುವುದು.
ಭಾಗವಹಿಸಲು ನಿಯಮಗಳು
1. ಲೇಖಕಿಯರ ಕೃತಿಗಳು ಮಾತ್ರ ಇರತಕ್ಕದ್ದು.
2. ಕನ್ನಡ ಮೂಲ ಕೃತಿಗಳಿಗೆ ಮಾತ್ರ ಬಹುಮಾನಕ್ಕೆ ಪರಿಗಣಿಸಲಾಗುವುದು. ಅನುವಾದದ ಕೃತಿಗಳಿಗೆ ಅವಕಾಶವಿರುವುದಿಲ್ಲ.
3. ಲೇಖಕಿಯರ ಹೆಸರಿನಲ್ಲಿಯೇ ಕೃತಿಗಳನ್ನು ಬಹುಮಾನಕ್ಕೆ ಕಳಿಸುವುದು. ಪ್ರಕಾಶಕರಿಂದ ಬಂದಲ್ಲಿ ಬಹುಮಾನಕ್ಕೆ ಪರಿಗಣಿಸಲಾಗುವುದಿಲ್ಲ.
4. ಕೃತಿಯು 1-1-2025 ರಿಂದ 31-12-2025 ರ ಒಳಗೆ ಪ್ರಕಟವಾಗಿರಬೇಕು.
5. ಪಿಎಚ್‌ಡಿ ಪ್ರಬಂಧ ಅಂತಾ ಯಾವುದೇ ವಿಶ್ವವಿದ್ಯಾಲಯಕ್ಕೆ ಹಾಜರುಪಡಿಸಿದ, ತಿರಸ್ಕೃತವಾದ
ಕೃತಿಗಳಿಗೆ ಹಾಗೂ ಎಂ.ಪಿಲ್ ಮಾಡಿ ಪ್ರಕಟಿಸಿದ ಕೃತಿಗಳಿಗೆ ಅವಕಾಶವಿರುವುದಿಲ್ಲ.
6. ಪ್ರತಿಯೊಂದು ಕೃತಿಯ 4 ಪ್ರತಿಗಳನ್ನು ಕಳಿಸಬೇಕು.
7. ಒಬ್ಬರು ಒಂದಕ್ಕಿಂತ ಹೆಚ್ಚು ಕೃತಿಗಳನ್ನು ಕಳಿಸಬಹುದಾದರೂ ಅವರ ಒಂದು ಕೃತಿಗೆ ಮಾತ್ರ ಬಹುಮಾನಕ್ಕೆ ಪರಿಗಣಿಸಲಾಗುವುದು.
8. ಲೇಖಕಿಯರು ತಮ್ಮ ಸಂಕ್ಷಿಪ್ತ ಮಾಹಿತಿಯನ್ನು ಭಾವಚಿತ್ರದೊಂದಿಗೆ ಮೊಬೈಲ್ ನಂಬರ ಸಮೇತ ಕಳಿಸಬೇಕು.
9. ಸಂಘದ ಕಚೇರಿ ವೇಳೆಯಲ್ಲಿ ಸ್ವತಃ ಬಂದು ಅಥವಾ ಅಂಚೆಯ/ಕೋರಿಯರ್ ಮೂಲಕ ಪುಸ್ತಕಗಳನ್ನು ತಲುಪಿಸಲು 2026 ಜೂನ 30 ಕೊನೆಯ ದಿನವಾಗಿರುತ್ತದೆ.
10. ಕೃತಿಗಳಿಗೆ ಬಹುಮಾನ ನೀಡುವಲ್ಲಿ ಸಂಘದ ನಿರ್ಣಯವೇ ಅಂತಿಮ.
11. ಸಂಘದ ಆಡಳಿತ ಮಂಡಳಿ ಸದಸ್ಯರು ಇದರಲ್ಲಿ ಪಾಲುಗೊಳ್ಳಲು ಅವಕಾಶವಿಲ್ಲ.
12. ಈಗಾಗಲೇ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನವನ್ನು ಎರಡು ಬಾರಿ ಪಡೆದುಕೊಂಡವರಿದ್ದರೆ ಅಂಥವರಿಗೆ ಭಾಗವಹಿಸಲು ಅವಕಾಶವಿರುವುದಿಲ್ಲ.
13. ಈ ವಿಷಯಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ವಿವರಗಳಿಗೆ ಪ್ರಧಾನ ಕಾರ್ಯದರ್ಶಿಗಳು, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ-580 001 ಇವರೊಂದಿಗೆ ಸಂಪರ್ಕಿಸಬಹುದು (ಮೊ: 94480-22950) ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ 