ಸಿನಿಮೀಯ ಶೈಲಿಯಲ್ಲಿ ಬೀದರ್ ಜೈಲಿನಿಂದ ಕೈದಿ ಪರಾರಿ

ಬೀದರ್, ಫೆ 17, ಕಾರಾಗೃಹದಿಂದ ಸಿನಿಮೀಯ ಶೈಲಿಯಲ್ಲಿ ಕೈದಿಯೋರ್ವ ಪರಾರಿಯಾಗಿರುವ ಘಟನೆ ಬೀದರ್ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ರಾಘವೇಂದ್ರ ಜೋತಪ್ಪನವರ (22) ಎಂಬ ಕೈದಿ ಜೈಲಿನಿಂದ ಪರಾರಿಯಾಗಿ ದ್ದಾನೆ.ಭಾನುವಾರ ಸಂಜೆ 4.18 ನಿಮಿಷಕ್ಕೆ ಜೈಲು ಸಿಬ್ಬಂದಿ ಕಣ್ಣು ತಪ್ಪಿಸಿ ಜೈಲಿನ ಗೋಡೆಯಿಂದ ಹಾರಿ ಕೈದಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಕಳ್ಳತನ ಪ್ರಕರಣದ ಆರೋಪದಡಿ ರಾಘವೇಂದ್ರ, ಕಳೆದ ಜನವರಿ 11ರಿಂದ ಇಲ್ಲಿನ ಜೈಲಿನಲ್ಲಿದ್ದನು. ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ ಈತ  ಮೂರು ಕಳ್ಳತನ ಪ್ರಕರಣಲ್ಲಿ ಜೈಲು ಪಾಲಾಗಿದ್ದನು. ಹೊಂಚು ಹಾಕಿ ಜೈಲಿನ ಮೂಲೆಯೊಂದರಲ್ಲಿ ಗೋಡೆ ಹಾರಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ತಡರಾತ್ರಿ ಪ್ರಕರಣ ದಾಖಲಿಸಲಾಗಿದೆ.