ವಸತಿ ಯೋಜನೆಯ ಪ್ರಗತಿ ಪರಿಶೀಲಿಸಿದ ಸಿಇಓ


ಬೆಳಗಾವಿ: ಜುಲೈ 04 ಬೆಳಗಾವಿ ತಾಲೂಕಿನ ಬಸ್ತವಾಡ ಮತ್ತು ತಾರಿಹಾಳ ಗ್ರಾಮ ಪಂಚಾಯತಿಯ ವಿವಿಧ ವಸತಿ ಯೋಜನೆಯಡಿ ಪ್ರಗತಿ ಪರಿಶೀಲನೆಗಾಗಿ ಮಂಗಳವಾರ (ಜುಲೈ 03) ರಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ  ವಸತಿ ರಹಿತ ಮತ್ತು ನಿವೇಶನ ರಹಿತ ಸಮೀಕ್ಷೆಯಡಿಯಲ್ಲಿ ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 1,42,856 ಫಲಾನುಭವಿಗಳನ್ನು ಗುತರ್ಿಸಿದ್ದು, ಇನ್ನೂ ಯಾರಾದರೂ ಅರ್ಹ ಫಲಾನುಭವಿಗಳು ಇದ್ದಲ್ಲಿ ಅಂತಹ ಫಲಾನುಭವಿಗಳನ್ನು ಗುರುತಿಸಿ ಆನ್ಲೈನ್ನಲ್ಲಿ ನಮೂದಿಸಿ ಸದರಿ ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಪಂಚಾಯತ ಸೂಚನಾ ಫಲಕದಲ್ಲಿ ಪ್ರಕಟಿಸುವಂತೆ ಸೂಚಿಸಿದರು.

ರಾಜ್ಯ ಮತ್ತು ಕೇಂದ್ರ ಸಕರ್ಾರದ ವಿವಿಧ ವಸತಿ ಯೋಜನೆಗಳಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳ ಮನವೊಲಿಸಿ ಪ್ರಗತಿಯಲ್ಲಿರುವ ಎಲ್ಲಾ ಮನೆಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ತಿಳಿಸಿದರು.

ಮನೆ ನಿಮರ್ಾಣ ಕಾರ್ಯದಲ್ಲಿ ಫಲಾನುಭವಿಗಳ ಆಥರ್ಿಕ ನೆರವಿಗಾಗಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಮತ್ತು ವಸತಿ ಯೋಜನೆಯ ಒಗ್ಗೂಡಿಸುವಿಕೆಯಲ್ಲಿ ಒಟ್ಟು 90 ಮಾನವ ದಿನಗಳನ್ನು 4 ಹಂತದಲ್ಲಿ ನೀಡುತ್ತಿದ್ದು, ಒಟ್ಟು ರೂ.22,410 ಗಳನ್ನು ನೀಡುವಂತೆ ತಿಳಿಸಿದರು.