ದೇಶಾದ್ಯಂತ ಸಿಬಿಎಸ್ಇ 10,12 ತರಗತಿಗಳ ಪರೀಕ್ಷೆ ಆರಂಭ

ನವದೆಹಲಿ, ಫೆ 15 :   ದೇಶಾದ್ಯಂತ ಸಿಬಿಎಸ್ಇ ಕೇಂದ್ರೀಯ ಶಿಕ್ಷಣ ಮಾಧ್ಯಮದ 10 ಮತ್ತು 12ನೇ ತರಗತಿಗಳ ಪರೀಕ್ಷೆಗಳು  ಶನಿವಾರದಿಂದ  ಆರಂಭವಾಗಿದೆ.

ಹತ್ತನೇ ತರಗತಿ ಪರೀಕ್ಷೆಗೆ 18 ಲಕ್ಷದ 89 ಸಾವಿರ ವಿದ್ಯಾರ್ಥಿಗಳು ಹಾಗೂ 12ನೇ ತರಗತಿ ಪರೀಕ್ಷೆಗೆ 12 ಲಕ್ಷ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದು ವರದಿಯಾಗಿದೆ.  

ಸಿಬಿಎಸ್ ಇ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು 5,376 ಕೇಂದ್ರಗಳಲ್ಲಿ ಹಾಗೂ ಪಿಯುಸಿ ಪರೀಕ್ಷೆ 4,983 ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ.

ಪರೀಕ್ಷೆ ಸುಗಮವಾಗಿ ನಡೆಯಲು ಎಲ್ಲಾ ರೀತಿಯ ಬಂದೋಬಸ್ತ್ ಮಾಡಲಾಗಿದೆ. ಪರೀಕ್ಷೆಯ ಪ್ರತಿ ದಿನವೂ ವಿದ್ಯಾರ್ಥಿಗಳೂ ಬೆಳಗ್ಗೆ 9.45ಗಂಟೆಗೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕೆಂದು ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಕೇಂದ್ರಿಯ ಶಿಕ್ಷಣ ಮಂಡಳಿಯ  ಅಧಿಕಾರಿಗಳು ತಿಳಿಸಿದ್ದಾರೆ.

10ಗಂಟೆಗೆ ಪರೀಕ್ಷೆ ಆರಂಭವಾಗಲಿದ್ದು, ಸಿಬಿಎಸ್ ಇ ನಿಯಮದ ಪ್ರಕಾರ 10ಗಂಟೆ ನಂತರ ಪರೀಕ್ಷಾ ಕೇಂದ್ರಗಳಿಗೆ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುವುದಿಲ್ಲ.