ಅಪಘಾತ ಪ್ರಕರಣ; ಮೃತಪಟ್ಟವರ ಕುಟುಂಬದವರಿಗೆ ಸಾಂತ್ವನ ಹೇಳುವಷ್ಟು ಸೌಜನ್ಯ ಇಲ್ಲ; ಡಿ.ಕೆ.ಸುರೇಶ್

ಬೆಂಗಳೂರು ,ಫೆ.15 ಸಚಿವ ಆರ್.ಅಶೋಕ್ ಪುತ್ರನ ಅಪಘಾತ ಪ್ರಕರಣ ವಿಚಾರವಾಗಿ ಪ್ರತಿಕ್ರಯಿಸಿರುವ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್, ಅಪಘಾತ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಸಾಂತ್ವನವನ್ನೂ ಹೇಳುವಷ್ಟು ಸೌಜನ್ಯವಾಗಲಿ, ಮಾನವೀಯತೆಯಾಗಲೀ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಯಿಸಿದ ಅವರು, ಕಾಂಗ್ರೆಸ್ ನವರು ಏನೇ ಮಾಡಿದರೂ ಅಪಚಾರವಾಗುತ್ತದೆ.ನಲಪಾಡ್ ಘಟನೆ ಬಗ್ಗೆ ಮಾತ್ರವೇ ಚರ್ಚೆಯಾಗುತ್ತಿದೆ.ಇದರಿಂದ ನಮ್ಮ ಶಾಸಕ ಹ್ಯಾರೀಸ್ ಬಹಳ ನೋವು ಅನುಭವಿಸಿದ್ದಾರೆ. ಇಂದು ಬಿಜೆಪಿ ಸಚಿವರ ಪುತ್ರರ  ಅಪಘಾತದಿಂದ ಇಬ್ಬರು ಮೃತ ಪಟ್ಟಿದ್ದಾರೆ. ಅಪಘಾತ ಮಾಡಿದ ಕಾರು ಬಿಜೆಪಿ ನಾಯಕರದ್ದೇ ಎನ್ನುತ್ತಿದ್ದಾರೆ. ಮೃತ ಪಟ್ಟವರಿಗೆ ಬಿಜೆಪಿ ನಾಯಕರಿಗೆ ಸಾಂತ್ವನ ಹೇಳಲು ಹೋಗಲಿಲ್ಲ. 

ಮಾಧ್ಯಮದವರು ನಲಪಾಡ್ ಪ್ರಕರಣವನ್ನು ಮಾತ್ರ ತೋರಿಸುತ್ತಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಗೆ ಗೌರವ ಕೊಡಬೇಕಾಗಿರುವ ಮಾಧ್ಯಮಗಳೇ ಸುದ್ದಿ ಬಿತ್ತರಿಸುವಲ್ಲಿ ತಾರತಮ್ಯವೆಸಗಿದೆ ಎಂದರು.ಬೀದರ್ ಶಾಹೀನ್ ಶಾಲೆ ದೇಶದ್ರೋಹ ಪ್ರಕರಣ ನೋಡಿದರೆ ಬಿಜೆಪಿಯಿಂದ ದೌರ್ಜನ್ಯ ಸಾಕಷ್ಟು ನಡೆಯುತ್ತಿದೆ. ಪೊಲೀಸರನ್ನು ಬಳಸಿಕೊಂಡು ಭಯದ ವಾತಾವರಣ ಸೃಷ್ಟಿಮಾಡುತ್ತಿದ್ದಾರೆ. ಬಿಜೆಪಿ ನಡೆ ವಿರೋಧಿಸಿ ಇಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಈಗಾಗಲೇ ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಕೆಲಸ ಮಾಡುತ್ತಿದ್ದಾರೆ. ಸ್ಥಾನ ಬದಲಾವಣೆ ಸಂಬಂಧಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಡಿ.ಕೆ.ಸುರೇಶ್ ಹೇಳಿದರು.