ವಿಜಯಪುರದಿಂದ ಮುಂಬೈಗೆ ಬಸ್ ಸಂಚಾರ ಆರಂಭ
ಸಂಬರಗಿ 17: ಗಡಿ ಭಾಗದ ಜನರ ಅಂತರರಾಜ್ಯ ಬಸ್ ಸೇವೆಗಾಗಿ ಸಾಂಗ್ಲಿ ಕೊಲ್ಹಾಪುರ ಪುಣೆ ಮುಂಬೈನಲ್ಲಿ ಮಾರುಕಟ್ಟೆ ಸಂಪರ್ಕವಿರುವುದರಿಂದ ಜನರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ವಿಜಯಪುರದಿಂದ ಮುಂಬೈಗೆ ಬಸ್ ಸಂಚಾರ ಆರಂಭಿಸಲಾಗಿದೆ ಎಂದು ವ್ಯವಸ್ಥಾಪಕ ಹಾಗೂ ಕೈಗಾರಿಕೋದ್ಯಮಿ ಮಾಣಿಕ್ ಸೂರ್ಯವಂಶಿ ಮಾಹಿತಿ ನೀಡಿದರು.
ಬಿಜಾಪುರ ಮುಂಬೈ ಬಸ್ ಸೇವೆಗೆ ಚಾಲನೆ ನೀಡಿದ ನಂತರ, ಜಂಬಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಸ್ ವಿಜಯಪುರ ಕೇಂದ್ರ ಬಸ್ ನಿಲ್ದಾಣದ ಬಳಿಯಿಂದ ಅಥಣಿ ಕಾಗವಾಡ ಮೀರಜ್ ಸಾಂಗ್ಲಿ ಪುಣೆ ಮುಂಬೈ ಬೋರಿವಲಿ ಮಾರ್ಗವಾಗಿ ಸಂಜೆ 6ಕ್ಕೆ ತಲುಪುತ್ತದೆ ಮತ್ತು ಮರುದಿನ ಅದೇ ಸಮಯಕ್ಕೆ ಹೊರಡುತ್ತದೆ. ಅಥಣಿಗೆ ಆಗಮಿಸಿದ ನಂತರ ಕರ್ನಾಟಕ ಕಾಂಗ್ರೆಸ್ ಸಮಿತಿ ಸದಸ್ಯ ದಿಗ್ವಿಜಯ ಪವಾರ ದೇಸಾಯಿ ಮತ್ತು ಅವರ ಪತ್ನಿ ಸುವಿಧಾ ಪೂಜೆಸಲ್ಲಿಸಿದರು.
ಭಾವುಸಾಹೇಬ ಜಾಧವ, ವಿನಾಯಕ ದೇಸಾಯಿ, ರೇಣುಕಾ ಸಕ್ಕರೆ ಕಾರ್ಖಾನೆ ಮುಖ್ಯಸ್ಥ ಪ್ರಿನ್ಸ್ ಅಧಿ, ಸಿದ್ದು ಪಾಟೀಲ್, ರಾಹುಲ್ ಸೂರ್ಯವಂಶಿ, ತೇಜಸ್ ಸೂರ್ಯವಂಶಿ ಮತ್ತು ಅನೇಕ ಗಣ್ಯರು ಉಪಸ್ಥಿತರಿದ್ದರು.