ಬಸ್ ಪಲ್ಟಿ ಃ 20 ಜನ ಜೀವಾಪಾಯದಿಂದ ಪಾರು

ಚನ್ನಮ್ಮನ ಕಿತ್ತೂರು 10ಃ ಕಿತ್ತೂರು ಮತ್ತು ದೇಗಾಂವ ಮಾರ್ಗಮದ್ಯದ ಸವಳಮುಖ ಕ್ರಾಸ್ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಸ್ಕಿಯಿಂದ ಪಣಜಿಗೆ ತೆರಳುತ್ತಿದ್ದ ಕರ್ನಾಟಕ  ಸಾರಿಗೆ ಬಸ್ ಪಲ್ಟಿಯಾದ ಘಟನೆ ಸೋಮವಾರ ಸಂಜೆ ನಡೆದಿದೆ.

ರಾಯಚೂರ ವಿಭಾಗದ ಮಸ್ಕಿ ಡಿಪೋದ ಈಶಾನ್ಯ ಕರ್ನಾಟಕ ಸಾರಿಗೆ ಬಸ್ನಲ್ಲಿ 20 ಜನ ಪ್ರಯಾಣಿಸುತ್ತಿದ್ದರು. ಆದರೇ ಈ ದುರ್ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಜೀವಾಪಾಯ ಸಂಭವಿಸಿಲ್ಲ. ಆದರೇ ಬಸ್ ಚಾಲಕನಿಗೆ ಮಾತ್ರ ಗಾಯವಾಗಿದ್ದು ಸ್ಥಳಕ್ಕೆ ಕಿತ್ತೂರು ಪಿಎಸ್ಐ ಸಂಜೀವಕುಮಾರ ಕಲ್ಲೂರ ಭೇಟಿ ನೀಡಿದ್ದಾರೆ.

ಬಾಕ್ಸ ಐಟಂ : 

ಈ ಸರ್ಕಾರಿ  ಬಸ್ ಪಲ್ಟಿಯಾದ ಸ್ಥಳದಲ್ಲಿ ಈ ಹಿಂದೆ ಅಡುಗೆಗೆ ಬಳಸುವ ಎಣ್ಣಿಯು ಬಿದ್ದ ಪರಿಣಾಮದಿಂದ ವಾಹನಗಳೆರೆಡು ಬಿದ್ದಿದ್ದವು. ಇಷ್ಟಾದರೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ ಪರಿಣಾಮ ಈಗ ಸರ್ಕಾರಿ  ಬಸ್ ಕೂಡ ಅಪಘಾತಕ್ಕಿಡಾಗಿದ್ದು ಇನ್ನಾದರೂ ಅಧಿಕಾರಿಗಳು ಇದನ್ನು ಸರಿ ಪಡಿಸುವರೇ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತು.