ಬೆಂಗಳೂರು 24: ವಿಧಾನಸಭೆ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಅವರು ಸಕರ್ಾರಿ ಬಂಗಲೆಯಲ್ಲಿದ್ದ ದುಬಾರಿ ಬೆಲೆಯ ಸೋಫಾ ಸೆಟ್ ಹಾಗೂ ನಾಲ್ಕು ಮಂಚಗಳನ್ನು ತಮ್ಮ ಸ್ವಂತ ಮನಗೆ ಕೊಂಡೊಯ್ದಿರುವ ಪ್ರಕರಣ ಮಂಗಳವಾರ ಬೆಳಕಿಗೆ ಬಂದಿದೆ.
ಕೋಳಿವಾಡ್ ಸ್ಪೀಕರ್ ಆಗಿದ್ದಾಗ ಅವರಿಗೆ ನೀಡಲಾಗಿದ್ದ ಸಕರ್ಾರಿ ಬಂಗಲೆಗೆ ಸಕರ್ಾರದ ಹಣದಿಂದ ಖರೀದಿಸಿದ್ದ ಸೋಫಾ ಹಾಗೂ ಕಾಟ್ ಗಳು ಈಗ ಅವರ ಸ್ವಂತ ಮನೆ ಸೇರಿವೆ. ಇನ್ನು ಸಕರ್ಾರಿ ಸೋಫಾ ಮತ್ತು ಮಂಚಗಳನ್ನು ತಮ್ಮ ಮನೆಗೆ ಕೊಂಡೊಯ್ದಿರುವುದನ್ನು ಸಮಥರ್ಿಸಿಕೊಂಡಿರುವ ಕೆ.ಬಿ.ಕೋಳಿವಾಡ್ ಅವರು, ನಾನು ಸ್ಪೀಕರ್ ಆಗಿದ್ದಾಗ ನನಗೆ ಬೇಕಾದ ರೀತಿ ಪೀಠೋಪಕರಣಗಳನ್ನು ಮಾಡಿಸಿಕೊಂಡಿದ್ದೆ. ಹಾಗಾಗಿ ಒಂದು ಸೋಫಾ ಮತ್ತು ನಾಲ್ಕು ಕಾಟ್ ನ್ನು ಮನೆಗೆ ತಂದಿದ್ದೇನೆ. ಮುಂಚೆಯೇ ಪೇಮೆಂಟ್ ಮಾಡುತ್ತೀನಿ ಎಂದು ಪತ್ರ ಬರೆದುಕೊಟ್ಟೇ ಅವುಗಳನ್ನು ಮನೆಗೆ ತಂದಿದ್ದೀನಿ ಎಂದು ಹೇಳಿದ್ದಾರೆ.
ಈ ಎಲ್ಲ ಪೀಠೋಪಕರಣದ ದರ ಮೂರು ಲಕ್ಷ ರು. ಆಗಬಹುದು. ಈ ಬಗ್ಗೆ ವಿಧಾನಸಭಾ ಕಾರ್ಯದಶರ್ಿಯಿಂದ ಹಣ ಪಾವತಿ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಅವರು ಈ ಪೀಠೋಪಕರಣಗಳಿಗೆ ದರ ನಿಗದಿ ಮಾಡಿದ ಮೇಲೆ ಅದನ್ನು ಭರಿಸುತ್ತೇನೆ. ಈ ಹಿಂದೆಯೂ ಕೆಲ ಸಭಾಧ್ಯಕ್ಷರು ಈ ರೀತಿ ಮಾಡಿದ್ದಿದೆ ಎಂದು ತಮ್ಮ ನಿಲುವನ್ನು ಸಮಥರ್ಿಸಿಕೊಂಡಿದ್ದಾರೆ.
ಸಕರ್ಾರಿ ಪೀಠೋಪಕರಣ ಹಿಂದಿರುಗಿಸುವಂತೆ ವಿಧಾನಸಭೆ ಕಾರ್ಯದಶರ್ಿಗಳು ಮಾಜಿ ಸ್ಪೀಕರ್ ಕೋಳಿವಾಡ್ ಅವರಿಗೆ ಪತ್ರ ಬರೆದಿದ್ದು, 14ನೇ ವಿಧಾನಸಭೆಯ ಅವಧಿಯಲ್ಲಿ ತಾವು ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ, ತಮಗೆ ಕ್ರೆಸೆಂಟ್ ರಸ್ತೆಯಲ್ಲಿ ಹಂಚಿಕೆಯಾಗಿದ್ದ ಸಕರ್ಾರಿ ವಸತಿಗೃಹಕ್ಕೆ ತಮ್ಮ ಕೋರಿಕೆಯಂತೆ ಕೆಲ ಪೀಠೋಪಕರಣಗಳನ್ನು ಸರಬರಾಜು ಮಾಡಲಾಗಿದ್ದು, ಅದನ್ನು ಹಿಂತಿರುಗಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಎರಡು ನ್ಯಾಚುರಲ್ ವುಡ್ ಎಂಡಿಎಫ್ ಬೋಡರ್್ ಸ್ಟೋರೇಜ್ ಸೌಲಭ್ಯ ಹೊಂದಿರುವ ಮಂಚಗಳು, ಮತ್ತೊಂದು ಎಂಡಿಎಫ್ ಬೋಡರ್್ ಸ್ಟೋರೇಜ್ ಹೊಂದಿರುವ ಕಿಂಗ್ ಸೈಜ್ ಮಂಚ, ಇಟಾಲಿಯನ್ ಬಫಾಲೋ ಲೆದರ್ ಸೋಫಾಗಳನ್ನು ಸಕರ್ಾರ ಹಿಂಪಡೆಯದೆ ಇರುವುದನ್ನು ಪಟ್ಟಿ ಸಮೇತ ಉಲ್ಲೇಖಿಸಿದೆ.
ಅಕ್ರಮವಾಗಿ ಸಕರ್ಾರದ ಪಿಠೋಪಕರಣಗಳನ್ನು ಮನೆಗೆ ಕೊಂಡೊಯ್ದ ಕೋಳಿವಾಡ್ ಕ್ರಮವನ್ನು ಪ್ರತಿಪಕ್ಷ ಬಿಜೆಪಿ ತೀವ್ರವಾಗಿ ಖಂಡಿಸಿದೆ.