ಓಲೈಕೆ ರಾಜಕಾರಣದ ಬಜೆಟ್ : ಪಾಟೀಲ

Budget is a politics of appeasement: Patil

ಓಲೈಕೆ ರಾಜಕಾರಣದ ಬಜೆಟ್ : ಪಾಟೀಲ

ಶಿಗ್ಗಾವಿ 8: ಮತ್ತೊಮ್ಮೆ ತಮ್ಮ ಅಭಿವೃದ್ಧಿ ಶೂನ್ಯ, ನೀರಸ ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ ತಮ್ಮ ಶೂನ್ಯ ಸಾಧನೆಯನ್ನು ಇನ್ನಷ್ಟು ಆಳಕ್ಕೆ ಕುಸಿಯುವಂತೆ ಮಾಡಿದ್ದಾರೆ. ರಾಜ್ಯದ ಬಹು ಸಂಖ್ಯಾತರಿಗೆ ಚಳ್ಳೆಹಣ್ಣು ತಿನ್ನಿಸಿ, ಅಲ್ಪ ಸಂಖ್ಯಾತರ ಕಲ್ಯಾಣಕ್ಕೆ ಭರಪೂರ ಅನುದಾನ ಒದಗಿಸಿದ್ದಾರೆ.ಮೊದಲಿನಿಂದಲೂ ಓಲೈಕೆ ರಾಜಕಾರಣಕ್ಕೆ ಒತ್ತುಕೊಟ್ಟಿರುವ ಕಾಂಗ್ರೆಸ್ ಸರ್ಕಾರ ಈಗ, ಸರ್ಕಾರಿ ಗುತ್ತಿಗೆಗಳಲ್ಲಿ ಅಲ್ಪ ಸಂಖ್ಯಾತರಿಗೆ ಮೀಸಲಾತಿ ಕೂಡ ಒದಗಿಸಿದೆ. ಮುಸಲ್ಮಾನರ ಕಣ್ಣಿಗೆ ಬೆಣ್ಣೆ ಹಚ್ಚಿ, ಪರಿಶಿಷ್ಟ ಸಮುದಾಯ ಸೇರಿದಂತೆ ಸಮಾಜದ ಇತರೆ ಎಲ್ಲಾ ವರ್ಗಗಳ ಜನರ ಕಣ್ಣಿಗೆ ಸುಣ್ಣ ಹಚ್ಚುವ ಮೂಲಕ ತಾನು ಪಕ್ಷಪಾತಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದುಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರರ ರೇಣುಕನಗೌಡ ಪಾಟೀಲ ಹೇಳಿದರು.