ಧಾರವಾಡ 07: ಪೂರ್ವ ಪ್ರಾಥಮಿಕದಿಂದ ಪದವಿ ಹಂತದವರೆಗೆ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ ಒದಗಿಸಲು ರಾಜ್ಯ ಸರ್ಕಾರ ಕೈಗೊಂಡ ಕಲಿಕಾ ಚಿಲುಮೆ, ಗಣಿತ ಮತ್ತು ಗಣಕ, ಓದು ಕರ್ನಾಟಕ, ಮರುಸಿಂಚನ, ವಿದ್ಯಾ ವಿಚೇತನ ದಂತಹ ಕಾರ್ಯಕ್ರಮಗಳು ಮತ್ತು ಂಋ ತಂತ್ರಜ್ಞಾನ ಆಧಾರಿತ "ಕಲಿಕಾ ದೀಪ" ಯೋಜನೆಯು 2,000 ಶಾಲೆಗಳ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳನ್ನು ಆತ್ಮವಿಶ್ವಾಸದಿಂದ ಕಲಿಯಲು ಮತ್ತು ಪ್ರಾರಂಭಿಕ ಗಣಿತದ ಸಾಮರ್ಥ್ಯಗಳನ್ನು ಹೊಂದಲು ಸಹಾಯ ಮಾಡಲಿದೆ. ಇದನ್ನು ಎಕ್-ಸ್ಟೆಪ್ ಫೌಂಡೇಶನ್ ಸಹಯೋಗದಲ್ಲಿ ಮಾಡಲಾಗುತ್ತಿದೆ. ಇದು ಶ್ಲಾಘನೀಯವಾಗಿದೆ.
ಆದರೆ ಈ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಮತ್ತು ಕಲಿಕಾ ಗುಣಮಟ್ಟ, ಕೌಶಲ್ಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಹೆಚ್ಚಿಸಲು, ಗ್ರಾಮೀಣ ಮಟ್ಟದಲ್ಲಿ ಇನ್ನೂ ಹಲವಾರು ಸವಾಲುಗಳು ಎದುರಾಗಿವೆ. ತಂತ್ರಜ್ಞಾನ ಕೊರತೆ, ತರಗತಿ ಕೊಠಡಿಗಳ ಅಪೋಷ, ಹಾಗೂ ಖಾಯಂ ಮತ್ತು ವಿಷಯ ಪರಿಣಿತ ಶಿಕ್ಷಕರ ಕೊರತೆ ಶಾಲೆಗಳ ಮಟ್ಟದಲ್ಲಿ ಗಂಭೀರ ಸಮಸ್ಯೆಗಳಾಗಿವೆ, ಇದನ್ನು ತಕ್ಷಣ ಗಮನಿಸಬೇಕಾಗಿದೆ.
ಆಡಿ.ವಿದ್ಯಾ ಮಗದುಮ್
ಸಂಶೋಧನಾ ವಿದ್ಯಾರ್ಥಿ,
ಅರ್ಥಶಾಸ್ತ್ರ ವಿಭಾಗ
ಕ ವಿ ವಿ ಧಾರವಾಡ .