ದೈವಿಕ ಶಕ್ತಿ ಒಲಿಸಿಕೊಳ್ಳಲು ನಿರ್ಮಲ ಭಕ್ತಿ-ಭಾವ ಬೇಕು...

ದೈವಿಕ ಶಕ್ತಿ ಒಲಿಸಿಕೊಳ್ಳಲು ನಿರ್ಮಲ ಭಕ್ತಿ-ಭಾವ ಬೇಕು... To attract divine power, pure devotion is required..

ವಿಜಯಪುರ 16: ದೇವರಲ್ಲಿ ನಿರ್ಮಲ ಭಕ್ತಿಯಿಟ್ಟು ಧ್ಯಾನ, ತಪಸ್ಸು, ಭಜನೆ ಮತ್ತು ದೈವತ್ವ ಶಕ್ತಿಯನ್ನು ಒಲಿಸಿಕೊಳ್ಳುವಲ್ಲಿ ಮನದಲ್ಲಿ ಸಮಚಿತ್ತದಿಂದ ಏಕೋಭಾವದಿಂದ ಪ್ರಾರ್ಥಿಸಿದರೆ ಲಕ್ಷ್ಮೀ ನಮಗೆ ಅನುಗ್ರಹಿಸುತ್ತಾ, ಜೀವನದಲ್ಲಿ ಸುಖ-ಶಾಂತಿ, ನೆಮ್ಮದಿ ದೊರೆಯುತ್ತದೆ. ಎಂದರು.  ಸಂಪಾದಿಸಿದ ಆದಾಯದಲ್ಲಿಯೇ ಸಂಸಾರ ನಡೆಸಿ,  ದೇವಸ್ಥಾನಗಳಿಗೆ ತನು-ಮನ-ಧನದ ಮೂಲಕ ಸಹಾಯ ಮಾಡಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕೆಂದು ಧ್ಯಾನ ತರಬೇತುದಾರಿಣಿ ಸರೋಜಾ ಬಾಗಲಕೋಟ ಅವರು ಸಲಹೆ ನೀಡಿದರು. 

ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್‌-ಅಮೀನ್ ಆಸ್ಪತ್ರೆಯ ಎದುರಿಗೆ ಇರುವ ಹವಾಲ್ದಾಎ ಕಾಲನಿಯಲ್ಲಿರುವ ಲಕ್ಷ್ಮೀ ದೇವಸ್ಥಾನದಲ್ಲಿ 3 ನೇಯ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ದಿನಾಂಕ: 15-03-2026 ರಂದು ಹಮ್ಮಿಕೊಂಡ ಸಾಮೂಹಿಕ ಲಲಿತ ಸಹಸ್ರ ನಾಮಾವಳಿ ಪಠಣ ಮತ್ತು ಕುಂಕುಮಾರ್ಚನೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.  

ಅವರು ಮಾತನಾಡುತ್ತಾ, ಕೋವಿಡ್ ನಂತರ ಜೀವನವೆಂದರೆ ಏನು ಎಂಬುದನ್ನು ಜನ ಅರಿತಿದ್ದಾರೆ. ಸಾಮಾಜಿಕ., ಧಾರ್ಮಿಕ, ಅಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಅದರ ಜೊತೆಗೆ ಸಮೂಹ ಮಾಧ್ಯಮ, ಪಾಶ್ಚಾತ್ಯೀಕರಣದ ಪ್ರಭಾವದಿಂದ ನಮ್ಮ ದೇಶೀಯ ಸಂಸ್ಕೃತಿ ನಶಿಸಿ ಹೋಗುತ್ತಿರುವ ಇಂದಿನ ದಿನಮಾನಗಳಲ್ಲಿ ಪ್ರತಿ ಮನೆಯಲ್ಲಿಯೂ ನಮ್ಮ ಸಂಸ್ಕೃತಿ-ಸಂಸ್ಕಾರ, ಸಂಪ್ರದಾಯ ಮತ್ತು ಪರಂಪರೆಯನ್ನು ಆಚರಿಸುತ್ತಾ, ಅದು ಮುಂದಿನ ಯುವ ಪೀಳಿಗೆ ಉಳಿಸಿ-ಬೆಳೆಸಿಕೊಂಡು ಹೋಗುವಂತೆ ಪ್ರೇರೇಪಿಸಬೇಕಾಗಿದೆ.

ನಮ್ಮಲ್ಲಿರುವ ಕಾಮ, ಕ್ರೋಧ, ಮದ, ಮೋಹ, ಮತ್ಸರ, ಲೋಭಗಳೆಂಬ ಅರಿಷಡ್ವರ್ಗಗಳನ್ನು ತ್ಯಜಿಸಿ, ಅರಿವೇ ಗುರು ನುಡಿಯೇ ಜೋರ್ತಿಲಿಂಗವೆಂಬ ಬಸವಣ್ಣವರ ವಚನವನ್ನು ಪರಿಪಾಲಿಸಬೇಕು ಎಂದು ಹೇಳಿದರು.ದೇವಸ್ಥಾನ ಸಮೀತಿ ಸ ಅಧ್ಯಕ್ಷೆ ಶೋಭಾ ಚವ್ಹಾಣ, ಶಕುಂತಲಾ ಅಂಕಲಗಿ, ಪ್ರೇಮಾ ಕ್ಷತ್ರಿ, ಜ್ಯೋತಿ ಕನಮಡಿ, ಗೀತಾ ಮೆಣಸಂಗಿ, ಕಲಾವತಿ ಬಿದರಿ, ವೈಶಾಲಿ ಕಾಮಗಳ, ಜ್ಯೋತೊ ಹಿರೇಮಠ, ಸಾವಿತ್ರಿ ಹಿರೇಮಠ, ಸುಮಂಗಲಾ ಪತ್ತಾರ, ಮಂಜುಳಾ ನಿಂಬಾಳಕರ, ದಾನಮ್ಮ ಕೋಟಿ, ಇನ್ನಿತರರು ಸಹ ಉಪಸ್ಥಿತರಿದ್ದರು.  

ಈ ಲಲಿತ ಸಹಸ್ರ ನಾಮಾವಳಿ ಪಠಣ ಮತ್ತು ಕುಂಕುಮಾರ್ಚನೆ ಕಾರ್ಯಕ್ರಮದಲ್ಲಿ ನವರಸಪುರದ ಸುತ್ತಮುತ್ತಲಿನ ಬಡಾವಣೆಗಳ ನೂರಾರು ಮಹಿಳೆಯರು ಮತ್ತು ಮಕ್ಕಳು ಪಾಲ್ಗೊಂಡು ಆ ದೇವಿತೆ ಭಕ್ತಿ ಭಾವದಿಂದ ಸಾಮೂಹಿಕವಾಗಿ ನಾಮಸ್ತುತಿ ಮಾಡಿದರು.