ಬೀದಿ ನಾಯಿಗಳ ಹಾವಳಿಗೆ ಬ್ರೇಕ್‌: ಜನತೆ ನಿರಾಳ : ಶಶಿಕಾಂತ ಎನ್ ತೇರದಾಳ

Break the menace of stray dogs: People are free: Shashikanta N Theradala

ಲೋಕದರ್ಶನ ವರದಿ 

ಬೀದಿ ನಾಯಿಗಳ ಹಾವಳಿಗೆ ಬ್ರೇಕ್‌: ಜನತೆ ನಿರಾಳ  : ಶಶಿಕಾಂತ ಎನ್ ತೇರದಾಳ 

ಜಮಖಂಡಿ : ಬೀದಿ ನಾಯಿಗಳ ಹಾವಳಿಯಿಂದ ನಗರದ ಜನತೆ ಬೇಸತ್ತು ನಗರಸಭೆ ಅಧಿಕಾರಿಗಳಿಗೆ ಸಾಕಷ್ಟು ಮನವಿ ಸಲಿಸಿದರು ಪ್ರಯೋಜನವಾಗಿಲ್ಲ ಎನ್ನುವ ಜನತೆ ಇವಾಗ ನಿಟ್ಟು ಉಸಿರು ಬಿಟ್ಟಂತಾಗಿದೆ. ನಗರಸಭೆ ಪೌರಾಯುಕ್ತ ಜೋತಿಗೀರೀಶ ಅವರು ತಮ್ಮ ಸಿಬ್ಬಂದಿಗಳ ಜೊತೆಗೆ ಹಾಗೂ ಬೆಂಗಳೂರಿನಿಂದ ಆಗಮಿಸಿದ ತಂಡದೊಂದಿಗೆ ಬೆಳಗಿನ ಜಾವದಲ್ಲಿ ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ಮಾಡಿಸಲು ಮುಂದಾಗಿರುವದು ಶ್ಲಾಘನೀಯವಾಗಿದೆ. 

ನಗರದಲ್ಲಿ ಸಾವಿರಾರು ಬೀದಿನಾಯಿಗಳಿಂದ ಚಿಕ್ಕಮಕ್ಕಳು, ವಯೋವೃದ್ಧರು, ಮಹಿಳೆಯರು, ಯುವಕರು ಸೇರಿದಂತೆ ಅನೇಕರ ಮೇಲೆ ದಾಳಿ ಮಾಡಿ, ಮನಬಂದಂತೆ ಕಚ್ಚಿ, ಕಚ್ಚಿ ತೀವ್ರವಾಗಿ ಗಾಯಗೊಳಿಸುವ ಬೀದಿನಾಯಿಗಳಿಂದ ಜನತೆ ಬೇಸತ್ತು ಹೋಗಿದ್ದರು. ಕೆಲವಂದಿಷ್ಟು ಜನತೆಗೆ ಚಿಕಿತ್ಸೆ ಫಲಿಸದೆ ಸಾವನ್ನು ಸಹ ಅಪ್ಪಿದ್ದಾರೆಂದು ಜನತೆಯ ಕೂಗು ಸಹ ಕೇಳಿ ಬರುತ್ತಿದೆ. ಲಕ್ಷಾಂತರ ಹಣವನ್ನು ಖರ್ಚು ಮಾಡಿ ಕೆಲವರು ಗುಣಮುಖರಾಗಿದ್ದಾರೆ. ಆದರೆ ಬೀದಿನಾಯಿಗಳಿಂದ ಮುಕ್ತಿ ಯಾವಾಗ ದೊರೆಯುತ್ತದೆ ಎಂದು ಜನತೆಯ ಅಳಲು ಕೇಳಿಬರುತ್ತಿತ್ತು. 

ಆದರೆ ಇವಾಗ ನಗರಸಭೆಯವರು ಗಲ್ಲಿ,ಗಲ್ಲಿಯಲ್ಲಿ ಇರುವ ಬೀದಿನಾಯಿಗಳನ್ನು ಹಿಡಿಯುತ್ತಿದ್ದಾರೆ. ಮುಖ್ಯ ಮಾರುಕಟ್ಟೆಯಲ್ಲಿ, ರಸ್ತೆಯ ಬದಿಯಲ್ಲಿ, ಗಲ್ಲಿ, ಗಲ್ಲಿಗಳಲ್ಲಿ ಬೀದಿನಾಯಿಗಳು ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದವು. ಅವುಗಳಿಗೆ ಬಲೆಯನ್ನು ಬೀಸಿ ಬೀದಿನಾಯಿಗಳನ್ನು ಹಿಡಿಯುತ್ತಿದ್ದಾರೆ. ಬೀದಿನಾಯಿಯನ್ನು ಹಿಡಿಯುವ ತಂಡ ಬೆಂಗಳೂರಿನಿಂದ ಆಗಮಿಸಿದ್ದು. ಪ್ರತಿಯೊಂದು ಬೀದಿನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿದ ಬಳಿಕ ಅವುಗಳ ಕಿವಿಗೆ ಟ್ಯಾಗ್‌ವನ್ನು ಹಾಕಲಾಗುತ್ತದೆ. ಯಾವುದೆ ತರಹದಿಂದ ಬೀದಿನಾಯಿಗಳಿಗೆ ತೊಂದರೆ ನೀಡುವುದಿಲ್ಲ. ಚಿಕಿತ್ಸೆ ಮುಗಿದ ಬಳಿಕ ಯಾವ ಸ್ಥಳದಲ್ಲಿ ಇರುತ್ತವೆ ಅದೇ ಸ್ಥಳದಲ್ಲಿಯೇ ಬೀದಿನಾಯಿಗಳನ್ನು ಅಲ್ಲಿಯೇ ಬಿಡಲಾಗುತ್ತದೆ. ಆದರೆ ಪ್ರತಿಯೊಂದು ನಾಯಿಗಳು ಚಿಕಿತ್ಸೆ ಆದ ಬಳಿಕ ತಮ್ಮ ಕ್ರೂರತೆಯನ್ನು ಕಡಿಮೆ ಮಾಡಿಕೊಳ್ಳುತ್ತವೆ. ಇದರಿಂದ ಸಾರ್ವಜನಿಕರಿಗೆ ಯಾವುದೆ ತೊಂದರೆಯನ್ನು ನೀಡುವುದಿಲ್ಲ ಎಂದು ನಗರಸಭೆ ಪೌರಾಯುಕ್ತ ಜೋತಿಗೀರೀಶ ಅವರು ಮಾಧ್ಯಮಕ್ಕೆ ಮಾಹಿತಿಯನ್ನು ತಿಳಿಸಿದ್ದಾರೆ. 

ಅಂತು ಇಂತು ಬೀದಿನಾಯಿಗಳಿಂದ ಬೇಸತ್ತು ಹೊಗಿದ ನಗರದ ಜನತೆ ಹಾಗೂ ಸಾರ್ವಜನಿಕರು ನಗರಸಭೆಯ ಅಧಿಕಾರಿಗಳಿಗೆ ಶ್ಲಾಘನಿಸಿದ್ದಾರೆ.