ಕೊಪ್ಪಳ 23: ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಆಚರಣೆ ನಿಮಿತ್ತ ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪವನ್ನು ಅಪರ್ಿಸಿ ಗೌರವ ನಮನ ಸಲ್ಲಿಸುವುದರ ಮೂಲಕ ಸರಳವಾಗಿ ಆಚರಿಸಲಾಯಿತು.
ನೆರೆಹಾವಳಿ ಸಂತ್ರಸ್ತರಿಗೆ ನೆರವಾಗುವ ಉದ್ದೇಶದಿಂದ ಬ್ರಹ್ಮ ನಾರಾಯಣ ಗುರು ಜಯಂತಿಯನ್ನು ಸರಳ ಆಚರಣೆಗೆ ಸಮಾಜದ ಮುಖಂಡರು ಸ್ವಯಂ ಪ್ರೇರಿತರಾಗಿ ಸಮ್ಮತಿಸಿದ ಕಾರಣ ಬ್ರಹ್ಮ ನಾರಾಯಣ ಗುರು ಜಯಂತಿಯನ್ನು ಜಿಲ್ಲಾಡಳಿತದ ವತಿಯಿಂದ ಸೋಮವಾರದಂದು ಸರಳವಾಗಿ ಆಚರಿಸಲಾಯಿತು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂತರ್ಿ ದೇಸಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜೇಂದ್ರಬಾಬು, ಜಿಲ್ಲಾಧಿಕಾರಿ ಕಚೇರಿಯ ಜಗದೀಶ, ಮಹಾವೀರ, ಉಪವಿಭಾಧಿಕಾರಿ ಕಚೇರಿಯ ಮಹೇಂದ್ರ, ವಾರ್ತಾ ಇಲಾಖೆಯ ಎಂ. ಅವಿನಾಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ, ಸಮಾಜದ ಮುಖಂಡರಾದ ಪ್ರತಿಪ ಶೇಠ್ ಹಾನಗಲ್, ಈರಣ್ಣ ಹುಲಿಗಿ, ಎ.ಬಿ.ರವಿ, ವೆಂಕಟೇಶ ಗಂಗಾವತಿ, ಅನೀಲ್ ಹುಲಿಗಿ, ಬಸವರಾಜ ಚಿಲವಾಡಗಿ, ನಾಗರಾಜ ಹೊನಳ್ಳಿ,ಸತೀಶ ಇಂದರಗಿ, ಅಶೋಕ ಹಿಟ್ನಾಳ, ಪ್ರತಿಪ ಪೂಜಾರ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬ್ರಹ್ಮ ನಾರಾಯಣ ಗುರು ಭಾವಚಿತ್ರಕ್ಕೆ ಪುಷ್ಪಾರ್ಪಣೆಗೈದು ಗೌರವ ನಮನ ಸಲ್ಲಿಸಿದರು.