ಲೋಕದರ್ಶನವರದಿ
ರಾಣೇಬೆನ್ನೂರು.29: ಆರೋಗ್ಯವಂತ ಯುವಕ-ಯುವತಿಯರು ಸ್ವಯಂಪ್ರೇರಿತರಾಗಿ ರಕ್ತ ದಾನ ಮಾಡುವುದರಿಂದ ಇತರರಿಗೆ ಜೀವದಾನ ನೀಡಲು ನೆರವಾಗುವುದು. ಕಾರಣ ರಕ್ತದಾನ ಮಾಡುವುದರ ಜೊತೆಗೆ ಬೇರೆಯವರನ್ನು ರಕ್ತದಾನ ಮಾಡಲು ಪ್ರೇರೇಪಿಸಬೇಕು ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ಶನಿವಾರ ನಗರದ ಅಮೃತಂ ಆಸ್ಪತ್ರೆಯಲ್ಲಿ ಜೆಸಿಐ ಘಟಕ, ಎಂ.ಕೆ.ಪವಾರ ಮೆಮೋರಿಯಲ್ ಸೊಸೈಟಿ, ಅಮೃತಂ ಆಸ್ಪತ್ರೆ ಹಾಗೂ ಹುಬ್ಬಳ್ಳಿ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಮಾಜಕ್ಕೆ ಪ್ರತಿಯೊಬ್ಬರ ಕೊಡುಗೆ ಪಾರವಾಗಿದೆ, ಜೀವ ರಕ್ಷಣೆಗೆ ರಕ್ತದಾನ ಅತೀ ಅಮೂಲ್ಯವಾಗಿದೆ. ದೇಶದಲ್ಲಿ ಪ್ರತಿನಿತ್ಯ ಅಪಘಾತ ಪ್ರಕರಣಗಳಲ್ಲಿ ಸಾಕಷ್ಟು ಜನರು ಮೃತಪಡುತ್ತಿದ್ದಾರೆ. ಮನುಷ್ಯನಿಗೆ ಮನುಷ್ಯನೆ ರಕ್ತವನ್ನೇ ನೀಡಬೇಕು ಎಂದರು.
ಅನೇಕರಿಗೆ ರಕ್ತದಾನ ಮಾಡಲು ಆಸಕ್ತಿ ಇಲ್ಲ. ಲಕ್ಷಾಂತರ ಜನರ ರಕ್ತಸ್ರಾವದಿಂದಾಗಿ ಜೀವ ಉಳಿಸಿಕೊಳ್ಳಲು ಜೀವನ್ಮರಣ ಹೋರಾಟ ನಡೆಸುತ್ತಾರೆ. ಇಂತಹ ಸಂದರ್ಭಧಲ್ಲಿ ರಕ್ತದಾನ ಮಾಡಿ ಜೀವ ಉಳಿಸಬೇಕು ಎಂದು ಅರುಣಕುಮಾರ ಸಲಹೆ ನೀಡಿದರು.
ಅಮೃತಂ ಆಯರ್ುವೇದ ಆಸ್ಪತ್ರೆ ತಜ್ಞ ವೈದ್ಯ ಡಾ. ನಾರಾಯಣ ಪವಾರ ಮಾತನಾಡಿ, ಮಹಿಳೆಯರು ಪ್ರಸವದ ಸಂದರ್ಭದಲ್ಲಿ ರಕ್ತಹೀನತೆಯಿಂದ ತೊಂದರೆಗೆ ಸಿಲುಕಿ ಮೃತಪಟ್ಟಿರುವ ನಿರ್ದಶನಗಳಿವೆ. ಇಂತಹವರಿಗೂ ನೀಡುವ ರಕ್ತವು ಜೀವ ದ್ರವ್ಯವಾಗಿ ಪ್ರಾಣ ಉಳಿಸುತ್ತದೆ ಎಂದರು.
ರಕ್ತದಾನದಿಂದ ಆರೋಗ್ಯ ಸುಧಾರಿಸುತ್ತದೆ. ದೇಹದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಹೀಗಾಗಿ ಭಯಪಡುವ ಅಗತ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ರಕ್ತ ವಿಭಜಿಸಿ ಯಾವ ಅಂಶದ ಕೊರತೆ ಇದೆಯೋ ಅದನ್ನು ಮಾತ್ರ ರೋಗಿಗೆ ನೀಡುವ ತಂತ್ರಜ್ಞಾನ ಅಭಿವೃದ್ಧಿಯಾಗಿದೆ ಎಂದರು.
ಇದರಿಂದ ರಕ್ತದ ಅಭಾವಕ್ಕೆ ಸ್ಪಲ್ಪಮಟ್ಟಿಗೆ ಪರಿಹಾರ ಸಿಗುತ್ತದೆ. ಮಹಿಳೆಯರಲ್ಲಿ ಶೇ.80 ರಷ್ಟು ರಕ್ತಹೀನತೆ ಸಮಸ್ಯೆ ಕಾಡುತ್ತಿದೆ. ದಿನದಿಂದ ದಿನಕ್ಕೆ ರಕ್ತದ ಬೇಡಿಕೆ ಹೆಚ್ಚುತ್ತಿದೆ. ಆದರೆ, ಕೃತಕವಾಗಿ ರಕ್ತ ಉತ್ಪಾಧಿಸಲು ಸಾಧ್ಯವಿಲ್ಲ.
ರಕ್ತದ ಕೊರತೆ ನೀಗಿಸುವ ನಿಟ್ಟಿನಲ್ಲಿ ರಕ್ತದಾನ ಶಿಬಿರಗಳ ಸಂಖ್ಯೆ ಹೆಚ್ಚಿಸಬೇಕು ಎಂದರು. ಜೆಸಿ ಅಧ್ಯಕ್ಷ ಶಿವರುದ್ರಪ್ಪ ಮಾತನಾಡಿ, ರಕ್ತದಾನದಿಂದ ಆರೋಗ್ಯ ಸಮಸ್ಯೆ ಎದುರಾಗುತ್ತದೆ ಎಂಬ ತಪ್ಪು ಕಲ್ಪನೆಯಿದೆ ಆದರೆ, ರಕ್ತದಾನನದಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಹೀಗಾಗಿ ರಕ್ತದಾನ ಕುರಿತು ಭಯಪಡುವ ಅಗತ್ಯವಿಲ್ಲ ಆರೋಗ್ಯವಂತ ವ್ತಕ್ತಿ ವರ್ಷದಲ್ಲಿ 4 ಬಾರಿ ರಕ್ತದಾನ ಮಾಡಬಹುದು ಎಂದರು.
35ಕ್ಕೂ ಅಧಿಕ ಜನರು ರಕ್ತದಾನ ಮಾಡಿದರು. ಕೃಷ್ಣಾಸಾ ಪವಾರ, ನಗರಸಭಾ ಸದಸ್ಯ ಕೆಎಂಪಿ ಮಣಿ, ರಾಜು ಅಡ್ಮನಿ, ಜೆಸಿಐ ಕಾರ್ಯದಶರ್ಿ ಹರೀಶ್ ಕೋಪಡರ್ೆ, ಆರ್.ವಿ. ಪಾಟೀಲ, ಲಕ್ಷ್ಮಣ ಕನಕಿ, ಜಿ.ಡಿ. ಬಗಾಡೆ, ರತ್ನಾ ಪುನೀತ, ಶಶಿಕಲಾ ಮಾಗನೂರು ಸೇರಿದಂತೆ ಮತ್ತಿತರರು ಇದ್ದರು.