ಜಿನ್ನಪ್ಪಣ್ಣಾ ಚೌಗುಲೆ ಅವರ 9ನೇ ಪುಣ್ಯಸ್ಮರಣೆ ನಿಮಿತ್ಯ ರಕ್ತದಾನ ಶಿಬಿರ
ಕಾಗವಾಡ, 17; ಮನುಷ್ಯನಿಗೆ ಬೇಕಾಗುವ ರಕ್ತವನ್ನು ಯಾವುದೇ ಕಾರ್ಖಾನೆಯಲ್ಲಿ ಉತ್ಪಾದಿಸಲು ಸಾಧ್ಯವಿಲ್ಲ. ಅದನ್ನು ಮಾರುಕಟ್ಟೆಯಿಂದ ಖರೀದಿಸಲೂ ಬರುವುದಿಲ್ಲ. ಇಲ್ಲಿಯ ವರೆಗೆ ರಕ್ತದ ಕೃತಕ ಉತ್ಪತ್ತಿ ಯಾರಿಂದಲೂ ಸಾಧ್ಯವಾಗಿಲ್ಲ. ರಕ್ತವನ್ನು ದಾನ ಮಾಡಿದಾಗ ಮಾತ್ರ ಅದು ಇತರರಿಗೆ ಉಪಯೋಗವಾಗಲಿದೆ. ಆದ್ದರಿಂದ ಪ್ರತಿಯೊಬ್ಬರು ರಕ್ತದಾನ ಮಾಡಬೇಕೆಂದು ಡಾ. ಸುಧೀರ ಬೋಲೆ ತಿಳಿಸಿದ್ದಾರೆ.
ಅವರು ಸೋಮವಾರ ದಿ. 17 ರಂದು ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಶ್ರೀ ಜಿನ್ನಪ್ಪಣ್ಣಾ ಚೌಗುಲೆ ಲಾಲಬಹಾದ್ದೂರ ಸೌಹಾರ್ದ ಸಹಕಾರಿಯ ಸಂಸ್ಥಾಪಕರಾದ ದಿವಂಗತ ಜಿನ್ನಪ್ಪಣ್ಣಾ ಚೌಗುಲೆ ಅವರ 9 ನೇ ಪುಣ್ಯಸ್ಮರಣೆ ನಿಮಿತ್ಯ ಅಥಣಿ ಬ್ಲಡ್ ಬ್ಯಾಂಕ್ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಸಸಿಗೆ ನೀರೇರೆದು, ಚಾಲನೆ ನೀಡಿ, ಮಾತನಾಡುತ್ತಿದ್ದರು.
ಈ ಸಮಯದಲ್ಲಿ ಡಾ. ಸುಕುಮಾರ ಚೌಗುಲೆ, ಡಾ. ರವಿ ಕುರುಂದವಾಡೆ, ಡಾ. ರಾಜೇಂದ್ರ ಅಕಿವಾಟೆ, ಡಾ. ಅಶ್ವೀನಿ ಅಕಿವಾಟೆ, ಡಾ. ಅಮೋಲ ಸರಡೆ, ಡಾ. ಜಿತೇಂದ್ರ ಖೋತ, ಡಾ. ಸುಲೇಮಾನ ತಾಂಬೋಳೆ, ಸಿಬಿಕೆಎಸ್‌ಎಸ್‌ಕೆ ನಿರ್ದೇಶಕ ಮಹಾವೀರ ಕಾತ್ರಾಳೆ, ಅಶೋಕ ಕಾತ್ರಾಳೆ, ಸಹಕಾರಿಯ ಅಧ್ಯಕ್ಷ ಭಮ್ಮಣ್ಣ ಚೌಗುಲೆ, ಉಪಾಧ್ಯಕ್ಷ ಶಾಲನ ಪಾಟೀಲ ಸೇರಿದಂತೆ ಸರ್ವ ಸದಸ್ಯರು, ಸಿಬ್ಬಂದಿ ವರ್ಗದವರು ಗ್ರಾಮಸ್ಥರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ವಿದ್ಯಾಸಾಗರ ಚೌಗುಲೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಶಿಬಿರದಲ್ಲಿ ನೂರಕ್ಕೂ ಅಧಿಕ ಜನರು ರಕ್ತದಾನ ಮಾಡಿದರು.