ಲೋಕದರ್ಶನ ವರದಿ
ರಾಯಬಾಗ 27: ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನವಾಗಿದ್ದು, ಒಬ್ಬ ವ್ಯಕ್ತಿಜೀವ ಉಳಿಸುವಲ್ಲಿ ಮಹತ್ವದ್ದಾಗಿದೆ. ಆರೋಗ್ಯಯುತ ವ್ಯಕ್ತಿಯೋರ್ವ ವರ್ಷದಲ್ಲಿ 3 ಬಾರಿ ರಕ್ತದಾನ ಮಾಡಬಹುದು ಎಂದು ನಸಲಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯೆ ಪ್ರಿಯಾಂಕಾ ತಳವಾರ ಹೇಳಿದರು.ತಾಲೂಕಿನ ನಂದಿಕುರಳಿ ಗ್ರಾಮದ ವಿಠಲ ಮಂದಿರದಲ್ಲಿ ಆರೋಗ್ಯ ಇಲಾಖೆ, ಬೆಳಗಾವಿ ರಕ್ತ ಭಂಡಾರ(ಬಿಮ್ಸ್), ಗ್ರಾಮ ಪಂಚಾಯತ ನಂದಿಕುರಳಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ನಸಲಾಪೂರಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾಮಾನ್ಯವಾಗಿಎಲ್ಲ ವ್ಯಕ್ತಿಗಳು ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ಹೊಸ ರಕ್ತ ಉತ್ಪತಿಯಾಗಿ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ. ಕೊಬ್ಬಿನಾಂಶ ಕಡಿಮೆಯಾಗಲು ಸಹಾಯವಾಗುತ್ತದೆ ಎಂದು ತಿಳಿಸಿದರು. ಶಿಬಿರದಲ್ಲಿ ಬೆಳಗಾವಿ ಬಿಮ್ಸ್ನಡಾ.ಶ್ಯಾಮಬಾಗ, ಡಾ.ಶೀತಲ ಚೌಗಲಾ, ನಾಜಿಯಾ ಅಜಿನ್ನಾಬಡೆ, ಶ್ರವಣ ಕಾಂಬಳೆ, ಮಂಜುನಾಥ ಜಾಧವ, ರಾಜು ಸಾವಂತ, ಪೃಥ್ವಿರಾಜಜಾಧವ, ಅಮೀತ ಜಾಧವ, ಎಸ್.ಬಿ.ಭಜಂತ್ರಿ, ಅಕ್ಕಪ್ಪ ಕಾಂಬಳೆ, ರವೀಂದ್ರ ದೇಸಾಯಿ, ಸಿದ್ರಾಮ ಉಪ್ಪಾರ, ಪಿಡಿಒರಾಮಚಂದ್ರ ಮಾದರ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.