ಬಿರುಬೇಸಿಗೆ: ಕೆರೆಗೆಳು ಸಂಪೂರ್ಣ ಬತ್ತಿಹೋಗಿದ್ದು ನೀರಿಗಾಗಿ ಪರದಾಟ
ಸಂಬರಗಿ 14: ಗಡಿ ಭಾಗದ ಗ್ರಾಮದಲ್ಲಿ ದಿನ ದಿನಕ್ಕೆ ಬಿಸಿಲಿನ ಪ್ರಮಾಣ ಹೆಚ್ಚಾದ ಕಾರಣ ಇರುವ ಕೆರೆಗೆಳು ಸಂಪೂರ್ಣ ಬತ್ತಿಹೋಗಿದ್ದು, ಜಾನುವಾರುಗಳಿಗೆ ಫೆಬ್ರುವರಿ ತಿಂಗಳಿನಲ್ಲಿ ನೀರಿನ ಸಮಸ್ಯೆ ಎದುರಿಸಬೇಕಾಗುತ್ತಿದೆ. ಜೂನ್ ವರೆಗೆ ನೀರಿಗಾಗಿ ಪರದಾಡುವ ಪರಿಸ್ಥಿತಿ ಬರುತ್ತಿದೆ.
ಗಡಿಭಾಗದಲ್ಲಿ 15 ಕೆರೆಗಳು ಇದ್ದು, ಮಳೆಯ ಕೊರತೆಯಿಂದ ಯಾವುದೇ ಕರೆ ತುಂಬಿಲ್ಲ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ದಿನ ದಿನಕ್ಕೆ ಹೆಚ್ಚಾಗುತ್ತಿದೆ. ರೈತರಿಗೆ ಜಾನುವಾರುಗಳಿಗೆ ನೀರು ಎಲ್ಲಿದೆ ಎಂದು ಹುಡುಕಾಟ ಮಾಡುವ ಪರಿಸ್ಥಿತಿ ಬಂದಿದೆ. ಈ ಭಾಗದಲ್ಲಿ ಮದಭಾವಿ, ಜಂಬಗಿ, ತಾಂವಶಿ, ಮಲಾಬಾದ, ಅನಂತಪೂರ, ಬಳ್ಳಿಗೇರಿ, ಗುಂಡೆವಾಡಿ, ಪಾರ್ಥನಹಳ್ಳಿ, ಕೆರೆಗಳು 20 ವರ್ಷವಾಯಿತು. ಇಲ್ಲಿಯವರೆಗೆ ಕೆರೆಗಳಿಗೆ ಸ್ವಲ್ಪ ಮಟ್ಟಿಗೆ ಮಳೆಗಾಲದಲ್ಲಿ ನೀರು ಇರುತ್ತಿದ್ದವು. ಸುತ್ತ ಮುತ್ತ ಇರುವ ರೈತರು ತಮ್ಮ ಬೆಳೆಗಳಿಗೆ ನೀರು ಬಿಟ್ಟು ಜಾನುವಾರುಗಳಿಗೆ ನೀರು ಇಲ್ಲದ ಹಾಗೆ ಮಾಡುತ್ತಾರೆ. ಈ ಭಾಗದ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ನೀರು ಶಾಸಕ ಲಕ್ಷ್ಮಣ ಸವದಿ, ಶಾಸಕ ರಾಜು ಕಾಗೆ ಇವರ ಪ್ರಯತ್ನದಿಂದ ಹೊಳೆಯಿಂದ ಕೆನಾಲ ಮುಖಾಂತರ ನೀರು ತಂದು ಅರಳಿಹಟ್ಟಿ ಹಾಗೂ ಜಕ್ಕಾರಟ್ಟಿ ಕೆರೆಗಳಲ್ಲಿ ಮಾತ್ರ ನೀರು ಸಂಗ್ರಹವಾಗಿವೆ. ಇನ್ನೂಳಿದ ಕೆರೆಗಳು ಬತ್ತಿ ಹೋಗಿವೆ. ತಾಲೂಕಾ ಆಡಳಿತ ಗಮನ ಹರಿಸಿ ಈ ಭಾಗದಲ್ಲಿ ಜಾನುವಾರುಗಳ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಈ ಭಾಗದ ರೈತರು ಅಗ್ರಹಿಸಿದ್ದಾರೆ. ಅಥಣಿ ತಾಲೂಕಿನಲ್ಲಿ 39 ಕೆರೆಗಳು ಇದ್ದು, ಅದರಲ್ಲಿ ಗಡಿ ಭಾಗದ ಎಲ್ಲಾ ಕೆರೆಗಳು ಬತ್ತಿ ಹೋಗಿವೆ. ಪೂರ್ವ ಭಾಗದ 5 ಕೆರೆಗಳಲ್ಲಿ ಸ್ವಲ್ಪ ಮಟ್ಟಿಗೆ ನೀರು ಇದೆ. ಆ ನೀರನ್ನು ಜಾನುವಾರುಗಳಿಗೆ ಉಪಯೋಗಿಸಬೇಕು. ರೈತರು ಬೆಳೆಗಳಿಗೆ ಉಪಯೋಗಿಸಬಾರದು.