ಲೋಕದರ್ಶನ ವರದಿ
ಕಂಪ್ಲಿ 16: ಕೋಟೆಯ ಶ್ರೀ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ 157ನೇ ಜನ್ಮ ದಿನಾಚರಣೆ ಸರಳ ಸಂಭ್ರಮದಿಂದ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಶಾಲೆ ಅಧ್ಯಕ್ಷ ಬಿ. ರಮೇಶರವರು ಮಾತನಾಡಿ. ಭಾರತದ ಪ್ರಸಿದ್ಧ ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರಾದ ಸ್ವಾಮಿ ವಿವೇಕಾನಂದರು ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆ ಬಗ್ಗೆ ವಿಶಾಲ ದೃಷ್ಟಿಯ ಸಂಕೇತವಾಗಿ,ವಾಗಿದ್ದರು ಯುವಕರು ಸ್ವಾಮಿ ವಿವೇಕಾನಂದರು ಆದರ್ಶ ತತ್ವಗಳನ್ನು ಜೀವನದಲ್ಲಿ ಆಳವಡಿಕೊಳ್ಳಬೇಕೆಂದರು ಮಕ್ಕಳು ವಿವೇಕಾನಂದರ ವೇಷಭೂಷಣ ಧರಿಸಿದರು. ಕೋಟೆಯ ಪ್ರಮುಖ ಬೀದಿಗಳಲ್ಲಿ ಮಕ್ಕಳ ಜಾಥ ನಡೆಸಿದರು.
ಈ ಕಾರ್ಯಕ್ರಮದಲ್ಲಿ ನಿವೃತ ಶಿಕ್ಷಕ ಪಿ. ಸೋಮಪ್ಪ, ಮುಖ್ಯಗುರು ಜಿಲಾನ್, ಶಿಕ್ಷಕರಾದ ಶ್ವೇತಾ, ರೇಣುಕಾ, ಸುನೀತಾ, ಉಮಾ, ಗೌಸಿಯಾ, ಕುಮಾರಿ ಶಾಲಿನಿ, ಈರಮ್ಮ, ಅರುಣಾ ಶಿಕ್ಷಕರಾದ ಷಾಷವಲಿ, ಅದ್ದಪ ತಿಮ್ಮಪ್ಪ, ಎಲ್ಲಾ ತರಗತಿಯ ಮಕ್ಕಳು, ಪಾಲಕ-ಪೋಷಕರು ಪಾಲ್ಗೊಂಡಿದರು.