ಕೊರೋನಾ ಸೋಂಕಿತೆಯಿಂದ ಹೆಣ್ಣು ಮಗುವಿಗೆ ಜನ್ಮ: ಪ್ರತ್ಯೇಕಗೊಳಿಸಿ ಚಿಕಿತ್ಸೆ

ಬೆಂಗಳೂರು, ಮೇ 9,ಪಾದರಾಯನಪುರದ  ಕೊರೊನಾ ಸೋಂಕಿತ ಗರ್ಭಿಣಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ  ನೀಡಿದ ಬೆನ್ನಲ್ಲೇ ತಾಯಿ ಮಗುವನ್ನು ಬೇರ್ಪಡಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಸುಮಾರು 34 ವರ್ಷದ ಮಹಿಳೆಯು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶುಕ್ರವಾರ ತಡರಾತ್ರಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು  ಹುಟ್ಟಿದ ಮಗುವನ್ನು ವೈದ್ಯರು ತಾಯಿಯಿಂದ ಪ್ರತ್ಯೇಕಿಸಿ ಚಿಕಿತ್ಸೆ ಆರಂಭಿಸಿದ್ದಾರೆ. ಹುಟ್ಟಿದ ಒಂದು ದಿನದ ಮಗುವಿಗೂ ಕೋವಿಡ್ ಟೆಸ್ಟ್ ಮಾಡಿದ್ದು, ಮಗುವಿನ ಗಂಟಲು ದ್ರವವನ್ನು  ಪರೀಕ್ಷೆಗೆ ಕಳುಹಿಸಲಾಗಿದೆ. ಮಗುವನ್ನು   ಐಸೂಲೇಷನ್ ವಾರ್ಡಿನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ.ಮಗುವಿಗೆ ಹಾಲಿನ ಪೌಡರ್ ನೀಡಲಾಗುತ್ತಿದ್ದು, ಮಗು ಹುಟ್ಟಿದಾಗಲೇ 3 ಕೆ.ಜಿ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ತಾಯಿಯನ್ನು ವಿಕ್ಟೋರಿಯಾ  ಆಸ್ಪತ್ರೆಯಲ್ಲಿ ಕೋವಿಡ್ ವಾರ್ಡಿನಲ್ಲಿ ಇರಿಸಲಾಗಿದೆ. ಈ ಮೂಲಕ ಕೊರೊನಾ ಮಹಾ ಮಾರಿಯಿಂದ  ತಾಯಿ, ಮಗು ದೂರ ದೂರವಾಗಿದ್ದಾರೆ. ತಂದೆ-ತಾಯಿ ಅಪ್ಪುಗೆಯಲ್ಲಿ ಇರಬೇಕಾದ ಮಗು ಈಗ  ಐಸೂಲೇಷನ್ ವಾರ್ಡಿನಲ್ಲಿದೆ.