ಅಪಘಾತಗಳ ತಡೆಗೆ ರಸ್ತೆ ಸಂಚಾರಿ ನಿಯಮ ಪಾಲಿಸಿ

Follow road traffic rules to prevent accidents

ಅಪಘಾತಗಳ ತಡೆಗೆ ರಸ್ತೆ ಸಂಚಾರಿ ನಿಯಮ ಪಾಲಿಸಿ 

ಹಾವೇರಿ 18 : ದೇಶದಲ್ಲಿ ಕಳೆದ 2023ನೇ ಸಾಲಿನಲ್ಲಿ ಐದು ಲಕ್ಷ ಅಪಘಾತಗಳು ಸಂಭವಿಸಿದ್ದು, ಅಪಘಾತಗಳ  ತಡೆಗೆ  ಎಲ್ಲರೂ ರಸ್ತೆ ಸಂಚಾರಿ ನಿಯಮಗಳನ್ನು  ಪಾಲಿಸಬೇಕು ಎಂದು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ತಾಂತ್ರಿಕ ಸಹಾಯಕ ರಮೇಶಕುಮಾರ ಹೂಗಾರ ಹೇಳಿದರು. 

ರಾಣೇಬೆನ್ನೂರು ತಾಲೂಕಿನ ಕಮದೋಡ ಗ್ರಾಮದಲ್ಲಿ ಶುಕ್ರವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಬೆಂಗಳೂರು, ಯೋಜನಾ ಅನುಷ್ಠಾನ ವಿಭಾಗ, ಚೈತನ್ಯ ರೂರಲ್ ಡೆವಲಪ್ ಸೊಸೈಟಿ, ಗ್ರಾಮ ಪಂಚಾಯತ್, ಪೋಲಿಸ್ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ (ಕಒಉಖಙ) ಅಡಿಯಲ್ಲಿ  ಆಯೋಜಿಸಲಾದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ವಿಶ್ವದಲ್ಲಿ ಅತಿ ಉದ್ದದ ರಸ್ತೆಗಳನ್ನು ಹೊಂದಿರುವ ದೇಶಗಳಲ್ಲಿ ಭಾರತ  ಎರಡನೇ   ಸ್ಥಾನದಲ್ಲಿದೆ. ಅಪಘಾತಗಳ ತಡೆಗೆ ಅಗತ್ಯ ಜಾಗೃತಿ ಮೂಡಿಸಬೇಕು. ಶೇ. 11 ರಷ್ಟು ಸಾವು ಅಪಘಾತಗಳಿಂದ  ಆಗುವುತ್ತಿರುವುದು  ತುಂಬಾ ನೋವಿನ ಸಂಗತಿಯಾಗಿದೆ ಎಂದರು. 

ಕಾರ್ಯನಿರ್ವಾಹಕ ಅಭಿಯಂತರ ಅನಿಲಕುಮಾರ್ ಎಸ್ ಮಾತನಾಡಿ, ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಅತೀ ವೇಗದ ಚಾಲನೆ ಮೃತ್ಯುವಿಗೆ ಆಹ್ವಾನವಿದ್ದಂತೆ, 120 ಕಿ.ಮೀ. ವೇಗದಲ್ಲಿ ಹೋಗಿ 108 ರಲ್ಲಿ ಬರುವುದು ಬೇಡ ಎಂದು ಕಿವಿಮಾತು ಹೇಳಿದರು.ಗ್ರಾಮ ಪಂಚಾಯತ್  ಉಪಾಧ್ಯಕ್ಷ ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. ಚೈತನ್ಯ ರೂರಲ್ ಡೆವಲಮೆಂಟ್ ಸೊಸೈಟಿಯ ಸಂಸ್ಥಾಪಕ ಮಜೀದ ಎಸ್‌.ಎಚ್ ಪ್ರಾಸ್ತವಿಕವಾಗಿ ಮಾತನಾಡಿದರು.ಪೋಲಿಸ್ ಇಲಾಖೆಯ ಬಿ.ಎನ್‌.ಕುರುಬರ್ ಹಾಗೂ ರಮೇಶ್ ರಸ್ತೆ ಸುರಕ್ಷತೆ ಕುರಿತು ಉಪನ್ಯಾಸ ನೀಡಿದರು. ಜನನಿ ಕಲಾ ತಂಡದವರು ಬೀದಿ ನಾಟಕ ಪ್ರದರ್ಶಿಸಿದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ ಶರಣಬಸಪ್ಪ, ಲೆಕ್ಕಾಧೀಕ್ಷರಾದ ಶ್ರೀಮತಿ ಗುರುದೇವಿ ಬಿ ದೊಡ್ಡಮನಿರವರು, ಸಹ ಶಿಕ್ಷಕಿ ಎನ್ ಸಿ ಹೊಸಕಟ್ಟಿ ಉಪಸ್ಥಿತರಿದ್ದರು. ಸಂಯೋಜಕರಾದ ಗೀತಾ ಸ್ವಾಗತಿಸಿದರು, ಶಿಕ್ಷಕ ಹೇಮಂತ ಎಸ್ ಕೆ ನಿರೂಪಿಸಿದರು.