ಬಡವರ ಸೇವೆಗೆ ಸದಾ ಸಿದ್ಧ : ಲೈನ್ಸ್ ಕ್ಲಬ್ ಅಧ್ಯಕ್ಷ ರಾಜು ತಾಳಿಕೋಟಿ
ಮಹಾಲಿಂಗಪುರ 18: ನಗರದ ಲೈನ್ಸ್ ಕ್ಲಬ್ ಅಧ್ಯಕ್ಷ ರಾಜು ತಾಳಿಕೋಟಿ ಮಾತನಾಡಿ ಎಲ್ಲಿ ಬಡವರ ಸಮಸ್ಯೆ ಇರುತ್ತದೆಯೋ ಅಂತಹ ಬಡ ಕುಟುಂಬವನ್ನು ಗುರುತಿಸಿ ಅವರ ಸಮಸ್ಯಕ್ಕೆ ಪರಿಹಾರ ಒದಗಿಸುವುದು. ಮತ್ತು ಸರ್ಕಾರದ ಮಟ್ಟದಲ್ಲಿ ಕೆಲವೊಂದು ನೆನಗುಂದಿಗೆ ಬಿದ್ದಂತಹ ಕೆಲಸವನ್ನು ಗುರುತಿಸಿ ಅಂತಹ ಕೆಲಸ ಕಾರ್ಯವನ್ನು ನಮ್ಮ ಲೈನ್ಸ್ ಸಂಸ್ಥೆ ವತಿಯಿಂದ ಸಾಧ್ಯವಾದಷ್ಟು ನಾವು ಸೇವೆ ಮಾಡಲು ಸಿದ್ಧ ಎಂದು ಹೇಳಿದರು.
ನಂತರ ಲೈನ್ಸ್ ಕ್ಲಬ್ ಎಂ ಜೆ ಎಫ್ ಮನೋಜ್ ಮಾಣಿಕ ಮಾತನಾಡಿ 2024 -25ನೇಯ ಸಾಲಿನ ಅಧ್ಯಕ್ಷ ರಾಜು ತಾಳಿಕೋಟಿ ಮತ್ತು ಅವರ ಸರ್ವ ತಂಡ ಸುಮಾರು ಒಂದು ಲಕ್ಷ ವೆಚ್ಚದಲ್ಲಿ ಶಿರೋಳ ಅವರ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತವಾಗಿ ಶೌಚಾಲಯವನ್ನು ನಿರ್ಮಾಣ ಮತ್ತು ಕೆಂಗೇರಿಮಡ್ಡಿಯ ಸರ್ಕಾರಿ ಪ್ರಾಥಮಿಕ ಶಾಲಾ ಬಡ ಮಕ್ಕಳಿಗೆ 120 ಟೀ ಶರ್ಟ್ ಗಳನ್ನು ಲೈನ್ಸ್ ಕ್ಲಬ್ ವತಿಯಿಂದ ಕೊಡುಗೆಯಾಗಿ ನೀಡಿದ್ದಾರೆ. ಇದು ನಮ್ಮ ಲೈನ್ಸ್ ಸಂಸ್ಥೆಯು ಹೆಮ್ಮೆ ಪಡುವ ವಿಷಯ ಎಂದು ಹೇಳಿದರು.
ಮನೋಜ ಮಾಣಿಕ, ರಾಜು ತಾಳಿಕೋಟಿ, ಉಮಾ ಗುಂಡಾ, ಸಂಜು ಶಿರೋಳ, ವಿಶ್ವನಾಥ ಗುಂಡಾ, ಅಶೋಕ ದಿನ್ನಿಮನಿ, ಅನುಪ ಹಂಚಿನಾಳ, ವಿದ್ಯಾ ದಿನ್ನಿಮನಿ, ರಮೇಶ ಶೆಟ್ಟರ, ವಿದ್ಯಾ ಗುಂಡಾ, ಸುರೇಖಾ ಚನ್ನಾಳ, ಅಶ್ವಿನಿ ಕೊಳ್ಳಿಗುಡ್ಡ, ಸೌಮ್ಯಾ ಕನಕರಡ್ಡಿ, ಸೋಮು ಸಂಶಿ, ವಿಷ್ಣು ಗೌಡ ಪಾಟೀಲ, ಸಿದ್ದು ನಕಾತಿ, ಪ್ರಶಾಂತ ಅಂಗಡಿ, ಸಚಿನ ಗುಂಡಾ, ವಿದ್ಯಾ ಶಿರೋಳ, ಶೈಲಾ ಶೆಟ್ಟರ, ಹುಚ್ಚೇಶ ವಡ್ಡರ, ಮಹಾಲಿಂಗ ಮೂಡಲಗಿ ಸೇರಿದಂತೆ ಇನ್ನು ಅನೇಕರು ಇದ್ದರು.