ಸಿರುಗುಪ್ಪ 150 ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ : ಶಾಸಕ ಬಿ ಎಂ ನಾಗರಾಜ
ಸಿರುಗುಪ್ಪ 18: ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸ ಪ್ರಯಾಣ ಸುಖಕರ ವಾಗಲಿ ಎಂದು ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರು ಅಭಿಪ್ರಾಯಪಟ್ಟರು ಸಿರುಗುಪ್ಪ ತಾಲೂಕಿನ 2024-25 ನೇ ಸಾಲಿನ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮಕ್ಕಳಿಗೆ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಿಂದ ಸರ್ಕಾರಿ ಪ್ರಾಥಮಿಕ ಶಾಲೆಗಳ ಎಂಟನೇ ತರಗತಿ ಮಕ್ಕಳಿಗೆ ಕರ್ನಾಟಕ ದರ್ಶನ ಪ್ರವಾಸಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಯ ಕ್ಷೇತ್ರ ಶಿಕ್ಷಣಾಧಿಕಾರಿ ಸಿರುಗುಪ್ಪ ತಾಲೂಕುದಿಂದ 150 ವಿದ್ಯಾರ್ಥಿಗಳು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮೂರು ಬಸ್ಸುಗಳಲ್ಲಿ ಪ್ರಯಾಣ ಬೆಳೆಸಿದ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ದ್ವಜ ತೋರಿಸುವ ಮೂಲಕ ಶಾಸಕ ಬಿ ಎಂ ನಾಗರಾಜ ಅವರು ಚಾಲನೆ ನೀಡಿ ಮಾತನಾಡುತ್ತಾ ಮಕ್ಕಳು ಪ್ರವಾಸ ಕೈಗೊಳ್ಳುವುದರಿಂದ ಐತಿಹಾಸಿಕ ಸ್ಥಳಗಳ ಬಗ್ಗೆ ಮಾಹಿತಿ ಹೊಂದಲು ಸಹಾಯಕವಾಗುತ್ತದೆ ಎಂದರು.
ನಗರಸಭಾ ಅಧ್ಯಕ್ಷರಾದ ಬಿ. ವೆಂಕಟೇಶ್ ಕರ್ನಾಟಕ ಪ್ರವಾಸ ನೋಡಲ್ ಅಧಿಕಾರಿಗಳಾದ ವೀರೇಶಪ್ಪ ಇ ಸಿ ಓ ಗಳಾದ ಸುರೇಶ್ ವೆಂಕಟೇಶ್ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀಧರ್ ಪ್ರಧಾನ ಕಾರ್ಯದರ್ಶಿಗಳಾದ ವೈ. ಹನುಮಾನ ಗೌಡ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾದ ಹುಚ್ಚಿರ್ಪ ಪದಾಧಿಕಾರಿಗಳು ಸಾಕ್ಷರತಾ ಅಬ್ದುಲ್ ನಬಿ ಶಿಕ್ಷಣ ಇಲಾಖೆಯ ಸಿಬ್ಬಂದಿ ವರ್ಗದವರು ಪ್ರವಾಸ ಕೈಗೊಂಡಿರುವ ವಿದ್ಯಾರ್ಥಿಗಳು ಮುಖಂಡರು ಪಾಲ್ಗೊಂಡಿದ್ದರು.ಸಿರುಗುಪ್ಪ ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕರ ಅವಿರೋಧ ಆಯ್ಕೆ ಶುಭ ಹಾರೈಕೆ ಶಾಸಕ ಬಿ ಎಂ ನಾಗರಾಜ ಸಿರುಗುಪ್ಪ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಆಡಳಿತ ಮಂಡಳಿಗೆ ಸಿರುಗುಪ್ಪ ತಾಲೂಕಿನ ಬಾಗೇವಾಡಿ ಕ್ಷೇತ್ರದಿಂದ ಪಿ. ತಾಯಪ್ಪ ರಾವಿಹಾಳು ಕ್ಷೇತ್ರದಿಂದ ಕೆ. ಮಲ್ಲಯ್ಯ ಹಿರೇಹಾಳು ಕ್ಷೇತ್ರದಿಂದ ಜಿ. ಮರೇಗೌಡ ಅವರು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರು ನೂತನ ನಿರ್ದೇಶಕರಿಗೆ ಗೌರವಿಸಿ ಸನ್ಮಾನಿಸಿ ಶುಭ ಹಾರೈಸಿದರು ನಗರಸಭಾ ಅಧ್ಯಕ್ಷರಾದ ಬಿ.ವೆಂಕಟೇಶ್ ಸದಸ್ಯರಾದ ಹೆಚ್. ಗಣೇಶ್ ಮುಖಂಡರಾದ ಚೊಕ್ಕ ಪಾಲಾಕ್ಷಿ ಗೌಡ ಕೆ. ಶಂಕ್ರ್ಪ ಬಿ. ಉಮೇಶ್ ಗೌಡ ಗೀರೀಶ್ ಗೌಡ ಕೆ.ಎಂ.ಈರಣ್ಣ ಕೆ.ಎಂ .ಬಜ್ಜಪ್ಪ ಕೆ.ಎಂ. ಚೆನ್ನಪ್ಪ ಖಲೀಲ್ ಸಾಬ್ ಅಬ್ದುಲ್ ನಬಿಸಾಬ್ ಮುಖಂಡರು ಉಪಸ್ಥಿತರಿದ್ದು ಶುಭ ಹಾರೈಸಿದರು.