ಲೋಕದರ್ಶನ ವರದಿ
ಅಂಕೋಲಾ 01: ಅಂಕೋಲಾದ ವಿವಿಧ ಉತ್ಸವಗಳ ಸಾಲಿನಲ್ಲಿ ತನ್ನದೆ ಆದ ಪ್ರಾಮುಖ್ಯತೆಯನ್ನು ಹೊಂದಿರುವ ನಾಮಧಾರಿ ಸಮಾಜದ ದಹಿಕಾಂಲ ಉತ್ಸವವು ಡಿ.2 ರವಿವಾರ ನಡೆಯಲಿದ್ದು, ಉತ್ಸವದ ತಯಾರಿ ಭರ್ಜ ರಿಯಾಗಿ ಸಾಗಿದೆ.
ತನ್ನಿಮಿತ್ತ ಶುಕ್ರವಾರ ಶ್ರೀ ವೆಂಕಟ್ರಮಣ ದೇವಸ್ಥಾನದ ರಥಬೀದಿಯಿಂದ ಆರಂಭಗೊಂಡ ಬೈಕ್ ರ್ಯಾಲಿಯು ಪಟ್ಟಣ ಹಾಗೂ ಗ್ರಾಮೀಣ ಭಾಗದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಗಮನ ಸೆಳೆಯಿತು. ನಾಮಧಾರಿ ಸಮಾ ಜದ ಮುಖಂಡ ಮಂಜುನಾಥ ಎಲ್.ನಾಯ್ಕ ಕಾಕರಮಠ ಅವರು ಬೈಕ್ ರ್ಯಾಲಿಗೆ ಚಾಲನೆ ನೀಡಿ, ಶುಭ ಕೋರಿದರು.
ಈ ಸಂದರ್ಭದಲ್ಲಿ ಉತ್ಸವ ಸಮಿತಿಯ ಅಧ್ಯಕ್ಷ ಗಜಾನನ ಆರ್.ನಾಯ್ಕ ಬೊಬ್ರುವಾಡ, ಗೌರವಾಧ್ಯಕ್ಷ ಜಯಪ್ರಕಾಶ ನಾಯ್ಕ ಕಲಭಾಗ, ಪ್ರಮುಖರಾದ ಪ್ರಕಾಶ ನಾಯ್ಕ ಲಕ್ಷ್ಮೇಶ್ವರ, ಗಣಪತಿ ನಾಯ್ಕ ಹನುಮಟ್ಟಾ, ಮುಕರ್ುಂಡಿ ನಾಯ್ಕ, ರವಿ ನಾಯ್ಕ, ನಾಗೇಶ ನಾಯ್ಕ (ಆಚಾ), ಉದಯ ನಾಯ್ಕ, ಮಂಜುನಾಥ ವಿ. ನಾಯ್ಕ, ಗಣೇಶ ನಾಯ್ಕ, ನಾಗೇಂದ್ರ ನಾಯ್ಕ, ವಿಶ್ವನಾಥ ಟಿ. ನಾಯ್ಕ, ರಾಜೇಶ ಎಂ. ನಾಯ್ಕ ತೆಂಕಣಕೇರಿ, ಗೋಪಾಲಕೃಷ್ಣ (ನಾಗೇಂದ್ರ) ನಾಯ್ಕ, ಕೃಷ್ಣ ನಾಯ್ಕ ಲಕ್ಷ್ಮೇಶ್ವರ, ದೇವಿದಾಸ ಜಾನು ನಾಯ್ಕ, ಮುಂಜುನಾಥ ನಾಯ್ಕ ಮೊರಳ್ಳಿ, ಸುರೇಶ ನಾಯ್ಕ ಅಸ್ಲಗದ್ದೆ, ಕೃಷ್ಣ ನಾಯ್ಕ ಬೊಬ್ರುವಾಡ, ಅನಿಲ ರಾಮ ನಾಯ್ಕ, ಗಜಾನನ ವಿ. ನಾಯ್ಕ, ಮಂಜುನಾಥ ಕೆ. ನಾಯ್ಕ ಬೆಳಂಬಾರ, ಸೇರಿದಂತೆ ದಹಿಂಕಾಲ ಉತ್ಸವ ಸಮಿತಿ ಸದಸ್ಯರು, ನಾಮಧಾರಿ ಸಮಾಜದ ಯುವಕರು ಪಾಲ್ಗೊಂಡಿದ್ದರು. ಪಿ.ಎಸ್.ಐ.ಗಳಾದ ಶ್ರೀಧರ ಎಸ್.ಆರ್., ಎ.ವೈ. ಕಾಂಬಳೆ ಮತ್ತು ಪೊಲೀಸ ಸಿಬ್ಬಂದಿಗಳು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.