ಜಂಬನಗೌಡ ಅವರಿಗೆ ಡಾಕ್ಟರೇಟ್ ಪದವಿ

ಜಂಬನಗೌಡ ಅವರಿಗೆ ಡಾಕ್ಟರೇಟ್ ಪದವಿ  Jambanagowda receives doctorate degree

ಲೋಕದರ್ಶನ ವರದಿ 

ಬಳ್ಳಾರಿ ಮಾ.6, ಬಳ್ಳಾರಿ ತಾಲ್ಲೂಕಿನ ಸಂಗನಕಲ್ಲು ಗ್ರಾಮದ ನಿವಾಸಿ ಜಂಬನಗೌಡ ಅವರಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಪಿಎಚ್‌.ಡಿ ಪದವಿಯನ್ನು ಪ್ರದಾನ ಮಾಡಿದೆ.  ಜಂಬನಗೌಡ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ  ಡಾ.ವಣೇನೂರು ಮಲ್ಲಿಕಾರ್ಜುನಗೌಡ ಅವರ ಮಾರ್ಗದರ್ಶನದಲ್ಲಿ “ವಿಜಯ ನಗರ ಸಾಮ್ರಾಜ್ಯ ಕುರಿತ  ಕನ್ನಡ ನಾಟಕಗಳ ಅಧ್ಯಯನ” ಎನ್ನುವ ವಿಷಯದ  ಮೇಲೆ ಸಂಶೋಧನೆ ನಡೆಸಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಇತ್ತೀಚೆಗೆ ನಡೆದ ಕನ್ನಡ ವಿಶ್ವವಿದ್ಯಾಲಯದ 34ನೇ ನುಡಿಹಬ್ಬದ ಘಟಿಕೋತ್ಸವದಲ್ಲಿ ರಾಜ್ಯದ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಜಂಬನಗೌಡ ಅವರಿಗೆ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿ ಸನ್ಮಾನಿಸಿದ್ದಾರೆ. ಜಂಬನಗೌಡ ಅವರಿಗೆ ಪಿಎಚ್‌.ಡಿ  ಡಾಕ್ಟರೇಟ್ ಪದವಿ ದೊರಕಿದ್ದಕ್ಕೆ ಬಳ್ಳಾರಿ ಜನತೆ ಮತ್ತು ಮಾರ್ಗದರ್ಶಕರು, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಸಹಪಾಠಿ ಮಿತ್ರರು ಅಭಿನಂದನೆ ಸಲ್ಲಿಸಿದ್ದಾರೆ.