ಲೋಕದರ್ಶನ ವರದಿ
ಯಲಬುರ್ಗಾ 03: 2006 ರಲ್ಲಿ ಪ್ರಪ್ರಥಮ ಬಾರಿಗೆ ಅಂದಿನ ಹಣಕಾಸು ಸಚಿವರಾಗಿದ್ದಂತಹ ಹಾಗೂ ಇಗಿನ ಮುಖ್ಯಮಂತ್ರಿಯಾಗಿರುವ ಬಿ ಎಸ್ ಯಡಿಯೂರಪ್ಪನವರು ಜಾರಿಗೆ ತಂದಂತಹ ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ಸೈಕಲ್ ವಿತರಣೆಯೂ ಒಂದಾಗಿದೆ ಎಂದು ಶಾಸಕ ಹಾಲಪ್ಪ ಆಚಾರ ಹೇಳಿದರು.
ಪಟ್ಟಣದ ಬಾಲಕಿಯರ ಸರಕಾರಿ ಪ್ರೌಡ ಶಾಲೆಯ ವಿದ್ಯಾರ್ಥಿ ನೀಯರಿಗೆ ಸೈಕಲ್ ವಿತರಿಸಿ ಅವರು ಮಾತನಾಡಿದರು.
ವಿದ್ಯಾಥರ್ಿಗಳು ಶಾಲೆಗಳು ದೂರವಿದೆ ಎಂದು ಹೋಗಲು ಬರಲು ಸಾಧ್ಯವಾಗುವದಿಲ್ಲಾ ಎನ್ನುವ ಕಾರಣಕ್ಕೆ ಶಾಲೆಯಿಂದ ದೂರ ಉಳಿಯಬಾರದು ಹಾಗೂ ಶಾಲೆಗೆ ಸರಿಯಾದ ಸಮಯಕ್ಕೆ ಹಾಜರಾಗಬೇಕು ಆ ಉದ್ದೇಶದಿಂದ ಈ ಯೋಜನೆ ಉತ್ತಮವಾಗಿದೆ, ಹಾಗೂ ಸರಕಾರಿ ಶಾಲೆಯಲ್ಲಿ ನೂತನ ಕಟ್ಟಡಗಳು ನಿಮರ್ಾಣ ಮಾಡುವಾಗ ಶಾಲಾ ಮುಖ್ಯೋಪಾದ್ಯಾಯರು ಹಾಗೂ ಎಸ್ಡಿಎಮ್ಸಿಯವರು ನಿಗಾ ವಹಿಸಬೇಕು ಇಲ್ಲವಾದಲ್ಲಿ ಕಳಪೆ ಕಟ್ಟಡ ಕಟ್ಟಿ ಹಣ ಲೂಟಿ ಹೊಡೆಯುತ್ತಾರೆ ಅದು ತಪ್ಪಬೇಕು ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು ಹಾಗೂ ಕೇವಲ ಖಾಸಗಿ ಶಾಲೆಯಲ್ಲಿ ಕಲಿತರೆ ಮಾತ್ರ ದೊಡ್ಡ ವ್ಯಕ್ತಿಗಳಾಗುವದಿಲ್ಲಾ ಸರಕಾರಿ ಶಾಲೆಯಲ್ಲಿ ಕಲಿತವರು ಎಲ್ಲಾ ಹಂತದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ಲಕ್ಷ್ಮೀ ದ್ಯಾಮನಗೌಡ್ರ, ಉಪಾಧ್ಯಕ್ಷ ವೀಶ್ವನಾಥ ಮರಿಬಸಪ್ಪನವರ, ಜಿಪಂ ಸದಸ್ಯರಾದ ಗಂಗಮ್ಮ ಈಶಣ್ಣ ಗುಳಗಣ್ಣನವರ, ಗೀರಿಜಾ ರೇವಣೆಪ್ಪ ಸಂಗಟಿ, ಮಾಜಿ ಜಿಪಂ ಸದಸ್ಯ ಅರವಿಂದಗೌಡ ಪಾಟೀಲ, ತಾಪಂ ಸದಸ್ಯರಾದ ಶಂಕರಗೌಡ ಟಣಕನಕಲ್, ಮುಖಂಡರಾದ ಬಸವಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳ್ಳಿ, ಈರಪ್ಪ ಕುಡಗುಂಟಿ, ರತನ್ ದೇಸಾಯಿ, ಸುರೇಶಗೌಡ ಶಿವನಗೌಡ, ಸಿದ್ರಾಮೇಶ ಬೆಲೇರಿ, ಈರಪ್ಪ ಬಣಕಾರ, ಮೈಬೂಸಾಬ ವಣಗೇರಿ, ಶಿವಪ್ಪ ಶಾಸ್ತ್ರೀ, ಬಿಇಓ ಶರಣಪ್ಪ ವಟಗಲ್, ಪಪಂ ಸದಸ್ಯರಾದ ಕಳಕಪ್ಪ ತಳವಾರ, ಬಸವಲಿಂಗಪ್ಪ ಕೊತ್ತಲ, ಅಮರೇಶ ಹುಬ್ಬಳ್ಳಿ, ವಸಂತಕುಮಾರ ಭಾವಿಮನಿ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.