ಅಧ್ಯಕ್ಷರಾಗಿ ಭೀಮಾನಾಯ್ಕ್ ಅಧಿಕಾರ ಸ್ವೀಕಾರ

ಲೋಕದರ್ಶನ ವರದಿ

ಹಗರಿಬೊಮ್ಮನಹಳ್ಳಿ 03 : (ಬೆಂಗಳೂರು): ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಭೀಮಾನಾಯ್ಕ್ರವರು ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಬೆಂಗಳೂರಿನ ನಿಗಮದ ಕಛೇರಿಯಲ್ಲಿ ಅಧಿಕಾರ  ಸ್ವೀಕರಿಸಿದರು.

ಅಧಿಕಾರ ಸ್ವೀಕರಿಸಿ ಮಾತನಾಡಿ ಹಿಂದುಳಿದ ಸಮುದಾಯದ ಬಂಜಾರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿರವರ ಜೊತೆಗೆ ಮಾತನಾಡಿ ಸಮುದಾಯದ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯವನ್ನು ನೀಡುವ ನಿಟ್ಟಿನಲ್ಲಿ ರಾಜ್ಯ ಸಕರ್ಾರ ಹಲವಾರ ಯೋಜನೆಗಳನ್ನು ಹಮ್ಮಿಕೊಂಡಿದ್ದು ಇನ್ನೂ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವಂತೆ ಅವಿರತವಾಗಿ ಶ್ರಮಿಸುವುದಾಗಿ ತಿಳಿಸಿದರು. ಜನರ ಸೇವೆ ಮಾಡುವುದಕ್ಕೆ ಮೊದಲ ಆಧ್ಯತೆ ನೀಡಲಾಗುವುದು,ತಾಂಡಾ ಅಭಿವೃಧ್ಧಿ ನಿಗಮದ ಅಧಿಕಾರದ ಪ್ರಮಾಣಿಕ ಪ್ರಯತ್ನದ ಜೊತೆ ಪ್ರತಿಯೊಂದು ವರ್ಗಗಳ ಅಭಿವೃದ್ಧಿಗೆ ಶ್ರಮಿಸತ್ತೇನೆ ಎಂದು ಹೇಳಿದರು. 

ಈ ವೇಳೆ ಜಲಾಜಾನಾಯ್ಕ, ಹೀರಾಲಾಲ್, ತಾ.ಅ.ನಿ.ಮಾಜಿ ಅಧ್ಯಕ್ಷ ಬಿ.ಬಾಲರಾಜ, ನಂದಿಹಳ್ಳಿ ಹಾಲಪ್ಪ, ಹರ್ಷವರ್ಧನ್,ಅಕ್ಕಿ ತೋಟೇಶ್,ಹೆಗ್ಡಾಳ್ ರಾಮಣ್ನ, ಕೆ. ಶಿವಮೂತರ್ಿ,ಉಪ್ಪಾರ ಬಾಲಕೃಷ್ಣ, ದೇವೇಂದ್ರಪ್ಪ, ಕಲ್ಲಿಹಳ್ಳಿ ಚಂದ್ರು, ಜೋಗಿ ಹನುಮಂತಪ್ಪ, ನೆಲ್ಲು ಇಸ್ಮಾಯಿಲ್ ಸಾಬ್, ಹೆಚ್.ಭೀಮಪ್ಪ, ಕೆ.ಜಿ.ಎನ್ ದಾದು, ನವೀನ್, ರಹಿಮಾನ್, ಆಲ್ಲಾಭಕ್ಷಿ ಇನ್ನಿತರರು ಉಪಸ್ಥಿತರಿದ್ದರು.