ಭೀಮಾ ತೀರ ಜನಪದ ಸಾಹಿತ್ಯದ ತೊಟ್ಟಿಲು: ವಿ ಸಿ ನಾಗಠಾಣ

Bhima Theer Cradle of Folk Literature: V C Nagathan

ಭೀಮಾ ತೀರ ಜನಪದ ಸಾಹಿತ್ಯದ ತೊಟ್ಟಿಲು: ವಿ ಸಿ ನಾಗಠಾಣ 

ಚಡಚಣ 18: ಭೀಮಾ ತೀರ ಜನಪದ ಸಾಹಿತ್ಯದ ತೊಟ್ಟಿಲು ಜನರ ನಾಲಿಗೆ ಮೇಲಿದ್ದ ಹಾಡುಗಳು ಮುಂದಿನ ತಲೆಮಾರಿಗೆ ಸಾಗಿಸುವ ಕೆಲಸ ನಮ್ಮ ನಿಮ್ಮ ಮೇಲಿದೆ ಎಂದು ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷ ವ್ಹಿ.ಸಿ.ನಾಗಠಾಣ ಅವರು ಹೇಳಿದರು. 

ಅವರು ರವಿವಾರ ಲಕ್ಷ್ಮಿ ದೇವಿ ದೇವಸ್ಥಾನದ ಆವರಣದಲ್ಲಿ ಜರುಗಿದ ವಿದ್ಯಾ ಕಲ್ಯಾಣಶೆಟ್ಟಿ ಅವರ ಜನಪದ ಸೊಗಡು ದರ್ಶನ ಗ್ರಂಥ ಲೋಕಾರೆ​‍್ಣ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ 

ಮಾತನಾಡಿದರು. 

ಈ ಚಡಚಣ ಭಾಗದ ಮಹಿಳೆಯರು ಬಳಸುವ ಜನಪದ ಸಾಹಿತ್ಯ ಹೇರಳವಾಗಿದೆ. ಅದನ್ನು ಸಂಗ್ರಹಿಸುವ ಕೆಲಸಈ ಹಿಂದೆಯೆ ಆಗಬೇಕಿತ್ತು ಅದು ತಡವಾಗಿಯಾದರು ಸರಿ ವಿದ್ಯಾ ಕಲ್ಯಾಣಶೆಟ್ಟಿ ಅವರು ಸಂಪಾದಿಸಿದ  ಜನಪದ ಸೊಗಡು ದರ್ಶನ ಗ್ರಂಥ ಬಿಡುಗಡೆ ನಮಗೆ ಹೆಮ್ಮೆ ತಂದಿದೆ ಎಂದರು.  

ಪುಸ್ತಕ ಬಿಡುಗಡೆ ಮಾಡಿದ ಎಸ್ ಆರ್ ಅವಜಿ ಮಾತನಾಡಿ ವಿದ್ಯಾ ಅವರು ಲಕ್ಷ್ಮೀ ಅಕ್ಕನ ಬಳಗದ ಮಹಿಳೆಯರು ಹಾಡುತ್ತಿದ್ದ ಹಾಡುಗಳ ಸಂಗ್ರಹ ಮಾಡಿ ಪ್ರಕಟಿಸಿರುವದು ದೊಡ್ಡ ಸಾಹಸದ ಕೆಲಸ ಎಂದರು.  

ಪುಸ್ತಕದ ಕಿರುಪರಿಚಯ ಮಾಡಿದ ಡಾ.ಸಂಗಮೇಶ ಮೇತ್ರಿ ಕರ್ನಾಟಕದ ಜನಪದ ಸಾಹಿತ್ಯದ ತವರುಮನೆ ಭೀಮಾ ನದಿ ದಡವಾಗಿದೆ. ಹಲಸಂಗಿ ಗೆಳೆಯರ ಬಳಗ ಸಂಗ್ರಹಿಸಿದ ಗರತಿ ಹಾಡುಗಳಿಗೆ ಸಮಾನವಾದ ಗ್ರಂಥ ಹೊರತರಲು ರಾಜ್ಯದ ಯಾವ ವಿಶ್ವವಿದ್ಯಾಲಯಕ್ಕೂ ಸಾಧ್ಯವಾಗಿಲ್ಲ, ಈ ನಿಟ್ಟಿನಲ್ಲಿ ವಿದ್ಯಾ ಅವರು ಶ್ರಮವಹಿಸಿ ಮಾಡಿದ ಸಾಧನೆ ಪ್ರಶಂಸೆಗೆ ಅರ್ಹವಾಗಿದೆ ಎಂದರು.  

ಅಧ್ಯಕ್ಷ ಸ್ಥಾನ ವಹಿಸಿದ ಸಿದ್ರಾಮಪ್ಪ ಭಮಶೆಟ್ಟಿ ಅವರು ನಮ್ಮೂರಿನ ಹೆಸರು ತಂದ ವಿದ್ಯಾ ಅವರಿಗೆ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದರು. 

ಸಾನಿಧ್ಯ ವಹಿಸಿದ್ದ ಮಹಾಂತೇಶ ಸ್ವಾಮಿಗಳು ಮೂಲ ಜನಪದ ಉಳುವಿಗಾಗಿ ಜಾನಪದ ವಿದ್ವಾಂಸರು ಮುಂದೆ ಬಂದು ಕೆಲಸ ಮಾಡಲಿ  ನಮ್ಮ ತದ್ದೇವಾಡಿ ಮಠದಿಂದ, ತನು ಮನ ಧನ ಸಹಾಯ ಮಾಡಲು ಸಿದ್ಧವಿದೆ ಎಂದರು.  

ಷಡಕ್ಷರಿ ಸ್ವಾಮಿಗಳು ಮಾತನಾಡಿ ಚಡಚಣ ಭಾಗ ಡಾ.ಸಿಂಪಿ ಲಿಂಗಣ್ಣ, ಮಧುರಚೆನ್ನರ ನೆಲವಾಗಿದ್ದು ಇಲ್ಲಿ ಜನಪದ ಸಾಹಿತ್ಯ ಸಮೃದ್ಧವಾಗಿ ಹರಡಿದೆ ಅದನ್ನು ಉಳಿಸಿದ ಶ್ರೇಯ ವಿದ್ಯಾ ಅವರಿಗೆ ಸಲ್ಲುತ್ತದೆ, ಅವರಿಂದ ಸಾಹಿತ್ಯ ಸೇವೆ ನಿರಂತರವಾಗಿ ಬೆಳೆಯಲಿ ಎಂದು ಹಾರೈಸಿದರು. 

  ಡಾ. ಎಂ ಎಸ್ ಮಾಗಣಗೇರಿ ಸ್ವಾಗತಿಸಿದರು, ಎಸ್ ಎಲ್ ಮೇತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೊ ರವಿ ಅರಳಿ ಕಾರ್ಯಕ್ರಮ ನಿರೂಪಿಸಿದರು. 

ಮುಖ್ಯ ಅತಿಥಿಗಳಾಗಿ ಬಾಳನಗೌಡ. ಪಾಟೀಲ ಅಧ್ಯಕ್ಷರು ಜಿಲ್ಲಾ ಜಾನಪದ ಪರಿಷತ್ತು, ವಿಶ್ವನಾಥ ಪಾಟೀಲ, ಆರ್ ಪಿ ಬಗಲಿ, ನಾಗರಾಜ ನಿರಾಳೆ, ಶಿವನಗೌಡ ಬಿರಾದಾರ,ಎಸ್ ಜಿ ಜಂಮಶೆಟ್ಟಿ, ಸಿ ಎಂ ಕಲ್ಯಾಣಶೆಟ್ಟಿ, ಶಂಕರ ಗಲಗಲಿ, ಪಟ್ಟಣ ಪಂಚಾಯತ ಸದಸ್ಯರು, ಲಕ್ಷ್ಮೀ ಬಳಗದವರು ಇದ್ದರು.