ಶೋಕಸಾಗರದ ಮಧ್ಯೆ ಕರುಣಾನಿಧಿಗೆ ವಿದಾಯ


ಚೆನ್ನೈ 08: ದ್ರಾವಿಡ ಮುನ್ನೇತ್ರ ಕಳಗಂ ಪರಮೋಚ್ಚ ನಾಯಕ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ(94ವರ್ಷ) ಅವರ ಪಾಥರ್ಿವ ಶರೀರಕ್ಕೆ ಯಾವುದೇ ವಿಧಿ, ವಿಧಾನ ಇಲ್ಲದೇ ಮೌನ ಆಚರಣೆ ಬಳಿಕ ಸಕಲ ಸಕರ್ಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಶ್ರೀಗಂಧದ ಮರದಿಂದ ವಿಶೇಷವಾಗಿ ಶವ ಪೆಟ್ಟಿಗೆಯನ್ನು ಸಿದ್ಧಪಡಿಸಲಾಗಿತ್ತು. ಪೆಟ್ಟಿಗೆ ಮೇಲೆ ಕರುಣಾನಿಧಿ ಅವರು ಸುಮಾರು 30 ವರ್ಷಗಳ ಹಿಂದೆ ಬರೆದಿದ್ದ 'ವಿಶ್ರಾಂತಿ ಇಲ್ಲದೆ ದುಡಿಯುವವನಿಗೆ ಇದು ವಿಶ್ರಾಂತಿಯ ತಾಣ ಎಂದು ಬರೆದಿದ್ದರು. ಅದೇ ಸಾಲನ್ನು ಪೆಟ್ಟಿಗೆ ಮೇಲೆ ಬರೆಯಿಸಲಾಗಿತ್ತು. 

ಮರೀನಾ ಬೀಚ್ ನಲ್ಲಿ ಗುರು ಅಣ್ಣಾದೊರೈ ಸಮಾಧಿ ಸಮೀಪವೇ ಎಂ.ಕರುಣಾನಿಧಿ ಅವರ ಸಮಾಧಿ ಮಾಡಲು ಸಿದ್ಧತೆ ಮಾಡಿದ್ದು, ಕರುಣಾನಿಧಿ ಕುಟುಂಬಸ್ಥರು, ಸೇನಾಪಡೆಗಳು ಪಾಥರ್ಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. 

ಚೆನ್ನೈನ ರಾಜಾಜಿ ಹಾಲ್ ನಿಂದ ಕರುಣಾನಿಧಿ ಅವರ ಪಾಥರ್ಿವ ಶರೀರದ ಅಂತಿಮ ಮೆರವಣಿಗೆ ಹೊರಟು ಕಾಮರಾಜ್ ರಸ್ತೆಯ ಮೂಲಕ ಮರೀನಾ ಬೀಚ್ ವರೆಗೆ ಕೊಂಡೊಯ್ಯಲಾಯಿತು. ಮೆರವಣಿಗೆ ಸಾಗುವ ಸುಮಾರು ಮೂರು ಕಿಲೋ ಮೀಟರ್ ದೂರದವರೆಗೆ ಜನಸಾಗರ ತುಂಬಿತ್ತು. 

ಮರೀನಾ ಬೀಚ್ ನಲ್ಲಿ ಅಣ್ಣಾದೊರೈ ಸಮಾಧಿ ಸಮೀಪವೇ ಸಕಲ ಸಕರ್ಾರಿ ಗೌರವಗಳೊಂದಿಗೆ ಮಾಜಿ ಸಿಎಂ ಕರುಣಾನಿಧಿ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. 

ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕನರ್ಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಹಲವು ಗಣ್ಯರು ಕರುಣಾನಿಧಿ ಅವರ ಪಾಥರ್ಿವ ಶರೀರದ ಅಂತಿಮ ದರ್ಶನ ಪಡೆದು, ನಮನ ಸಲ್ಲಿಸಿದರು. 

ಮಾಜಿ ಸಿಎಂ ಕರುಣಾನಿಧಿ ಅವರ ಅಂತ್ಯಸಂಸ್ಕಾರದ ವೇಳೆ ತಮಿಳುನಾಡು ಹಾಲಿ ಸಿಎಂ ಪಳನಿಸ್ವಾಮಿ ಗೈರುಹಾಜರಾಗಿದ್ದರು.

ಅಂತಿಮ ದರ್ಶನ ಪಡೆದ ಪ್ರಧಾನಿ ನರೇಂದ್ರ ಮೋದಿ 

ಪ್ರಧಾನಿ ನರೇಂದ್ರ ಮೋದಿ ಅವರಿಂದು ಬೆಳಗ್ಗೆ ಇಲ್ಲಿನ ರಾಜಾಜಿ ಹಾಲ್ನಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿರುವ ಅಗಲಿದ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ಪಾಥರ್ಿವ ಶರೀರದ ಅಂತಿಮ ದರ್ಶನ ಪಡೆದು ಹಿರಿಯ ನಾಯಕನಿಗೆ ಗೌರವ ಅಪರ್ಿಸಿದರು. ಕರುಣಾನಿಧಿ ಅವರ ಪುತ್ರ ಎಂ ಕೆ ಸ್ಟಾಲಿನ್ ಅವರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ ದುಃಖತಪ್ತ ಕುಟುಂಬದವರಿಗೆ ಸಾಂತ್ವನ ಹೇಳಿದರು. ಡಿಎಂಕೆ ನಾಯಕ ಕರುಣಾನಿಧಿ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿ ಶ್ರದ್ಧಾಂಜಲಿ ಅಪರ್ಿಸಿದ ಲೋಕಸಭೆ ಇಂದಿನ ಕಲಾಪವನ್ನು ಮುಂದೂಡಿತು.

ಮರೀನಾ ಬೀಚ್ನಲ್ಲೇ  ಸಮಾಧಿಗೆ ಹೈ ಅಸ್ತು 

ಮರೀನಾ ಬೀಚ್ನಲ್ಲಿ ಡಿಎಂಕೆ ಅಧಿನಾಯಕ ಕರುಣಾನಿಧಿ ಅವರ ಅಂತ್ಯ ಸಂಸ್ಕಾರಕ್ಕೆ ಮದ್ರಾಸ್ ಹೈಕೋಟರ್್ ಅನುಮತಿ ನೀಡಿದ್ದು. ಅವಕಾಶ ನೀಡಲು ನಿರಾಕರಿಸಿದ್ದ ತಮಿಳುನಾಡು ಎಐಎಡಿಎಂಕೆ ಸಕರ್ಾರಕ್ಕೆ ಮುಖಭಂಗವಾಗಿದೆ.  

ಅಣ್ಣಾ ದೊರೈ ಸಮಾಧಿ ಪಕ್ಕದಲ್ಲೇ ಅಂತ್ಯ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಡಿಎಂಕೆ ಮನವಿ ಮಾಡಿತ್ತು. ಸಕರ್ಾರ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಡಿಎಂಕೆ ಹೈಕೋಟರ್್ ಮೆಟ್ಟಿಲೇರಿತ್ತು. ಮರೀನಾ ಬೀಚ್ನಲ್ಲಿ  ಸಮಾಧಿ ಮಾಡಲು ಅವಕಾಶ ನೀಡಬಾರದು ಎಂದು ಟ್ರಾಫಿಕ್ ರಾಮಸ್ವಾಮಿ ಸೇರಿದಂತೆ ಐವರು ಹೈ ಕೋಟರ್್ಗೆ ತಕರಾರು ಅಜರ್ಿ ಸಲ್ಲಿಸಿದ್ದರು. ಐವರೂ ಅಜರ್ಿಗಳನ್ನು ವಾಪಸ್ ಪಡೆದಿದ್ದರು. ಈ ವಿವಾದದ ಕುರಿತು  ಮಂಗಳವಾರ ಮಧ್ಯರಾತ್ರಿವರೆಗೂ ವಿಚಾರಣೆ ನಡೆಯಿತಾದರೂ ಯಾವುದೇ ಆದೇಶ ಹೊರಬೀಳದೆ ಬುಧವಾರ ಬೆಳಗ್ಗೆ 8 ಗಂಟೆಗೆ ವಿಚಾರಣೆ ಮುಂದೂಡಿಕೆಯಾಗಿತ್ತು. 

ಕನರ್ಾಟಕ ಮೂಲದ ಹಂಗಾಮಿ ಸಿಜೆ ಹುಲುವಾಡಿ ಜಿ.ರಮೇಶ್ ನಿವಾಸದಲ್ಲಿ ರಾತ್ರಿ ವಿಚಾರಣೆ ನಡೆಯಿತು. ಹೈಕೋಟರ್್ನಲ್ಲಿ  ಬುಧವಾರ ಬೆಳಗ್ಗೆ 8 ಗಂಟೆಗೆ ಆರಂಭವಾದ ಅಜರ್ಿ ವಿಚಾರಣೆ ಸುಧೀರ್ಘ 2 ಗಂಟೆಗಳ ಬಳಿಕ ತೀಪು ಹೊರ ಬಂದಿದೆ.

ಕಾಲ್ತುಳಿತಕ್ಕೆ ಇಬ್ಬರು ಬಲಿ 

ಡಿಎಂಕೆ ಪರಮೋಚ್ಛ ನಾಯಕ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅಂತ್ಯಕ್ರಿಯೆ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ರಾತ್ರಿಯಿಡೀ ಹೈಕೋಟರ್್ ನಲ್ಲಿ ನಡೆದ ಹೈಡ್ರಾಮಾಕ್ಕೆ ಬುಧವಾರ ತೆರೆಬಿದ್ದಿದೆ. ಚೆನ್ನೈನ ಮರೀನಾ ಬೀಚ್ ನಲ್ಲಿಯೇ ಕರುಣಾನಿಧಿ ಅವರ ಅಂತ್ಯಕ್ರಿಯೆ ನಡೆಸುವಂತೆ ಕೋಟರ್್ ತೀಪು ನೀಡಿದೆ. ಏತನ್ಮಧ್ಯೆ ಬಸ್, ಕಾರು ಸೇರಿದಂತೆ ವಾಹನಗಳ ಮೇಲೆ ಕಲ್ಲುತೂರಾಟ ನಡೆಸಿರುವ ಘಟನೆ ವರದಿಯಾಗಿದೆ. 

ಪೆರಿಯಾರ್ ಪುತ್ಥಳಿ ಬಳಿ ಕಾಲ್ತುಳಿತ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ ತಮಿಳುನಾಡಿನಾದ್ಯಂತ ಸುಮಾರು 80ಕ್ಕೂ ಅಧಿಕ ಹಿಂಸಾಚಾರ ಕೇಸ್ ದಾಖಲಾಗಿದೆ ಎಂದು ವರದಿ ವಿವರಿಸಿದೆ. ಹಿಂಸಾಚಾರ, ನೂಕುನುಗ್ಗಲಿನ ಹಿನ್ನೆಲೆಯಲ್ಲಿ ಪೊಲೀಸರು ಹಲವರನ್ನು ಬಂಧಿಸಿದ್ದು, ಜನರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಹಿಂಸಾಚಾರದಲ್ಲಿ ಈವರೆಗೂ 7ಕ್ಕೂ ಅಧಿಕ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂಸತ್ ಕಲಾಪ ಮುಂದೂಡಿಕೆ 

ನವದೆಹಲಿ: ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ವರಿಷ್ಠ, ಮಾಜಿ ಸಿಎಂ ಕರುಣಾನಿಧಿ ಅವರ ನಿಧನದ ಹಿನ್ನೆಲೆಯಲ್ಲಿ ಅವರಿಗೆ ಸಂತಾಪ ಸೂಚಿಸಿ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪವನ್ನು ಬುಧವಾರ ಮುಂದೂಡಲಾಯಿತು. ಯಾವತ್ತೂ ಸಂಸದರಾಗಿರದ ವ್ಯಕ್ತಿಯೊಬ್ಬರಿಗೆ ಸಂತಾಪ ಸಲ್ಲಿಸಿ ಕಲಾಪವನ್ನು ಮುಂದೂಡಿರುವುದು ಲೋಕಸಭೆ ಇತಿಹಾಸದಲ್ಲಿಯೇ ಮೊದಲನೆಯದ್ದಾಗಿದೆ. ಕಳೆದ ಆರು ದಶಕಗಳಿಂದ ಮುತುವೇಲು ಕರುಣಾನಿಧಿ ಅವರು ತಮಿಳುನಾಡು ವಿಧಾನಸಭೆಯಲ್ಲಿ ಸದಸ್ಯರಾಗಿದ್ದವರು, 5 ಬಾರಿ ಮುಖ್ಯಮಂತ್ರಿಯಾಗಿ ಹಾಗೂ 50 ವರ್ಷಗಳ ಕಾಲ ಪ್ರಾದೇಶಿಕ ಡಿಎಂಕೆ ಪಕ್ಷದ ಚುಕ್ಕಾಣಿಯನ್ನು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಸಂಸದರಾಗದೇ ಇದ್ದ ಹಾಗೂ ಮಾಜಿ ಸಿಎಂಗೆ ಗೌರವ ಸಲ್ಲಿಸಿ ಕಲಾಪ ಮುಂದೂಡಿರುವುದು ಲೋಕಸಭೆಯಲ್ಲೇ ಪ್ರಥಮ ಬಾರಿಯಾಗಿದೆ ಎಂದು ವರದಿ ತಿಳಿಸಿದೆ.