ಲೋಕದರ್ಶನ ವರದಿ
ಬಳ್ಳಾರಿ 13: ತಮ್ಮ ನಿತ್ಯ ಜೀವನದಲ್ಲಿ ಯಾರು ಸ್ವಚ್ಛತೆಯನ್ನು ತಮ್ಮ ಮನೆ, ಮನ ಮತ್ತು ಸಾರ್ವಜನಿಕ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೋ ಅವರಿಗೆ ಸಂಪತ್ತಿನ ಸಂಪಾದನೆಯೂ ಸುಲಭವಾಗಲಿದೆ. ಅದಕ್ಕೆಂದೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸ್ವಚ್ಛತೆಗೆ ವಿಶೇಷ ಆಧ್ಯತೆಯನ್ನು ನೀಡಿ ಪಾಲುದಾರ ಕುಟುಂಬಗಳಿಗೆ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಯಾಣ ಕರ್ನಾಟಕ ವಿಭಾಗದ ಪ್ರಾದೇಶಿಕ ನಿದರ್ೇಶಕರಾದ ಪುರುಷೋತ್ತಮ ಪಿ.ಕೆ. ತಿಳಿಸಿದರು.
ನಗರದ ರಾಣಿಪೇಟೆ ಶ್ರೀರಾಮ ಮಂದಿರದಲ್ಲಿ ನಡೆದ ಹೊಸಪೇಟೆ ವಿಭಾಗದ 179 ಶ್ರದ್ಧಾ ಕೇಂದ್ರಗಳಿಗೆ ಕಸದ ಬುಟ್ಟಿ ಮತ್ತು ವಿವಿಧ ಅನುದಾನಗಳನ್ನು ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಇಂಡಿಯಾ ಟುಡೆ ಎಂಬ ಮಾಧ್ಯಮ ಸಂಸ್ಥೆ ದೇಶದ ಸ್ವಚ್ಚ ಧಾರ್ಮಿಕ ನಗರವನ್ನಾಗಿ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಗುರುತಿಸಿ ಗೌರವಿಸಿದೆ. ಇದು ಇಡೀ ಕರ್ನಾಟಕದ ಗೌರವವಾಗಬೇಕೆಂಬ ಅಭಿಲಾಷೆಯಿಂದ ನಮ್ಮ ಪಾಲುದಾರ ಸದಸ್ಯರು ಮತ್ತು ಸಾರ್ವಜನಿಕರ ಸಹಾಯದಲ್ಲಿ ಪ್ರತಿವರ್ಷ ಆಗಷ್ಟ್ 15 ಮತ್ತು ಜನೇವರಿ 15 ಕ್ಕೆ ಎರಡು ಹಂತದಲ್ಲಿ ವಿವಿಧ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಚಗೊಳಿಸುವ ರೂಢಿಯನ್ನು ಸಂಸ್ಥೆ ಮಾಡಿದ್ದು ಪೂರಕವಾಗಿ ಆ ಎಲ್ಲಾ ಕೇಂದ್ರಗಳಿಗೆ 2 ರಂತೆ ಕಸದ ಬುಟ್ಟಿಯನ್ನು ವಿತರಿಸಿ ಸ್ವಚ್ಛತೆ ನಿರಂತರವಾಗಿರುವಂತೆ ನಾಗರಿಕರಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಕಸದ ಬುಟ್ಟಿಗಳನ್ನು ವಿತರಿಸಲಾಗುತ್ತಿದೆ. ಹಾಗೂ ಸಿಡ್ಬಿ ಸಾಲ ಯೋಜನೆ, ನಿರ್ಗತಿಕರಿಗೆ ಮಾಶಾಸನ, ಬಡವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯವೇತನ ವಿಶೇಷವಾಗಿ ಆಟೋ ಖರೀದಿಗೆ ಸಾಲ ಸೌಲಭ್ಯ ಹೀಗೆ ಬಡ ಮತ್ತು ಮದ್ಯಮವರ್ಗದ ಜನರು ನೆಮ್ಮದಿ ಕಂಡುಕೊಳ್ಳುವಲ್ಲಿ ಸಂಸ್ಥೆ ಅವರಿಗೆ ಸಹಾಯವನ್ನು ಮಾಡುತ್ತಿರುವುದಾಗಿ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರ ಸಭೆಯ ಮಾಜಿ ಸ್ಥಾಯಿಸಮಿತಿ ಅಧ್ಯಕ್ಷ ಎನ್.ರೂಪೇಶ್ಕುಮಾರ್ ರವರು ಮಾತನಾಡಿ ಸರಕಾರವೂ ಗುರುತಿಸಲಾಗದ ಸಮಸ್ಯೆಯನ್ನು ಧರ್ಮಸ್ಥಳ ಸಂಸ್ಥೆ ಸ್ವಯಂ ಪ್ರೇರಣೆಯಿಂದ ಗುರುತಿಸಿ ಅರ್ಹರಿಗೆ ನಿರಂತರ ಸೇವೆ ನೀಡುತ್ತಿರುವ ಧರ್ಮಧಿಕಾರಿ ವೀರೇಂದ್ರ ಹೆಗ್ಗಡೆಯವರ ಅಸಾಧಾರಣವಾದ ಕ್ರಿಯೆ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಮಾರೆಮ್ಮ ದೇವಸ್ಥಾನ, ಆಂಜನೇಯ ದೇವಸ್ಥಾನ, ಶ್ರೀರಾಮ ದೇವಸ್ಥಾನ, ಹುಸೇನ್ಭಾಷಾ ಮಸೀದಿ, ಕಲ್ಮಠೇಶ್ವರ ದೇವಸ್ಥಾನ, ಗಣೇಶ ದೇವಸ್ಥಾನ, ಓಂಕಾರೇಶ್ವರ ದೇವಸ್ಥಾನ, ವೀರಾಂಜನೇಯ ದೇವಸ್ಥಾನ, ವಡಕರಾಯ ದೇವಸ್ಥಾನ, ಜಂಡೇ ಕಟ್ಟೆ ಮಸೀದಿ, ಶಂಕರಲಿಂಗ ಮಠ, ಪಾಂಡುರಂಗ ದೇವಸ್ಥಾನ, ಆಂಜನೇಯಸ್ವಾಮಿ ದೇವಸ್ಥಾನಗಳಿಗೆ ಸಾಂಕೇತಿಕವಾಗಿ ಒಣಕಸ ಮತ್ತು ಹಸಿಕಸ ಸಂಗ್ರಹಣೆಗಾಗಿ ಬುಟ್ಟಿಗಳನ್ನು ಹಾಗೂ ಮಾಶಾಸನ, ಸುಜ್ಞಾನನಿಧಿ ಶಿಷ್ಯವೇತನ, ಅಭಿವೃದ್ಧಿ ಅನುದಾನಗಳು ಮತ್ತು ಸಿಡ್ಬಿ ಸಾಲದ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಹೊಸಪೇಟೆ ವಿಭಾಗದ ಜಿಲ್ಲಾ ನಿದರ್ೇಶಕರಾದ ಚಿದಾನಂದ.ಕೆ., ಜಿಲ್ಲಾ ಜನಜಾಗೃತಿ ವೇದಿಕೆಯ ಪರಶುರಾಮ, ವೆಂಕಟೇಶ್, ಹಿರಿಯಣ್ಣ, ಯೋಜನಾಧಿಕಾರಿ ರಾಘವೇಂದ್ರ.ಎನ್, ಒಕ್ಕೂಟದ ಅದ್ಯಕ್ಷರಾದ ಜಯಲಕ್ಷ್ಮಿ, ರಾಮಮಂದಿರದ ಅಧ್ಯಕ್ಷರಾದ ಲಕ್ಷ್ಮಿಪತಿ, ವೆಂಕಟೇಶ್, ಮೇಲ್ವಿಚಾರಕರಾದ ರಾಮಕೃಷ್ಣ, ಶೃತಿ ಮತ್ತು ಸಾವಿತ್ರಿ ಹಾಗೂ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.