ಬಳ್ಳಾರಿ 23: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನರು ನೀಡಿರುವ ತೀರ್ಪಿಗೆ ತೆಲೆಬಾಗುವೆ ಕಾಂಗ್ರೆಸ್ಗೆ ಲಕ್ಷ್ಯಾಂತರ ಜನತೆ ಮತ ನೀಡಿದ್ದು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ವಿ.ಎಸ್.ಉಗ್ರಪ್ಪ ತಮ್ಮ ಸೋಲಿನ ಬಗ್ಗೆ ಪ್ರತಿಕ್ರೀಯೆ ನೀಡಿದರು. ಉಪಚುನಾವಣೆಯಲ್ಲಿ ತಮಗೆ ದೊರೆತ ಮತಗಳ ಅಂತರ ಮತ್ತು ಈಗಿನ ಸೋಲಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಮತದಾರರ ನಾಡಿ ಮಿಡಿತವನ್ನು ನಾವು ಅರ್ಥ ಮಾಡಿಕೊಂಡಂತಿಲ್ಲ. ಇದು ರಾಜ್ಯ ಮತ್ತು ಜನಾದೇಶದಲ್ಲಿ ಕಂಡುಬಂದಿದೆ. ಇದಕ್ಕೆ ಮೋದಿ ಅವರ ಅಲೆಯೇ ಅವರ ಆಡಳಿತದ ಕಾರ್ಯ ವೈಕರಿಯೇ ಎಂದು ಕೇಳಿದ ಪ್ರಶ್ನೆಗೆ ಮೋದಿ ಅಲೆ ಇದೆ ಎನ್ನುವುದನ್ನು ಒಪ್ಪಿಕೊಂಡ ಉಗ್ರಪ್ಪ ಅವರು ಆಡಳಿತ ಕಾರ್ಯ ವೈಕರಿ ಬಗ್ಗೆ ಉತ್ತರಿಸಲಾರೆ ಎಂದರು. ಈಗ ಸೋಲಾಗಿದೆ ಎಂದು ನಾನು ಬಳ್ಳಾರಿಯಿಂದ ದೂರ ಸರಿಯಲ್ಲ. ಸಂಪರ್ಕದಲ್ಲಿ ಇದ್ದು ಗೆದ್ದಿರುವ ಅಭ್ಯಥರ್ಿ ಮತ್ತು ಆ ಪಕ್ಷದ ಮುಖಂಡರು ಜಿಲ್ಲೆಗೆ ಅಭಿವೃದ್ದಿ ಮಾಡುವ ಕಾರ್ಯಗಳಿಗೆ ಬೆಂಬಲವಾಗಿ ನಿಲ್ಲುತ್ತೇನೆ ಎಂದರು. ಆರು ಜನ ಕಾಂಗ್ರೆಸ್ ಶಾಸಕರು ಜಿಲ್ಲೆಯಲ್ಲಿದ್ದು ತಮಗೆ ಈ ರೀತಿ ಸೋಲಾಗಲು ಕಾರಣ ಏನು? ಅವರು ನಿಮಗೆ ದ್ರೋಹ ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಉಗ್ರಪ್ಪ ಅವರು ಪಕ್ಷಕ್ಕೆ ದ್ರೋಹ ಮಾಡಿದವರು ತಾಯಿಗೆ ದ್ರೋಹ ಮಾಡಿದಂತೆ. ಮುಂದಿನ ದಿನದಲ್ಲಿ ಅವರು ಅನುಭವಿಸುತ್ತಾರೆ. ಆದರೆ ಶಾಸಕರು ದ್ರೋಹ ಮಾಡಿದ್ದಾರೆಂದು ಭಾವಿಸುವುದಿಲ್ಲ ಎಂದರು.