ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾಗಿ ಪಿ.ನೀಲಕಂಠಪ್ಪ, ಉಪಾಧ್ಯಕ್ಷರಾಗಿ ಸಣಾಪುರ ಪಾರ್ವತಿ ಆಯ್ಕೆ
ಕಂಪ್ಲಿ 26: ತಾಲ್ಲೂಕು ದೇವಸಮುದ್ರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪಿ.ನೀಲಕಂಠಪ್ಪ ಹಾಗೂ ಉಪಾಧ್ಯಕ್ಷರಾಗಿ ಸಣಾಪುರ ಪಾರ್ವತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ರಿಟರ್ನಿಂಗ್ ಅಧಿಕಾರಿಗಳಾದ ಬಿ.ರಾಮಸ್ವಾಮಿ ಘೋಷಣೆ ಮಾಡಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 12 ಜನ ನಿರ್ದೇಶಕರುಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಸಂಘಕ್ಕೆ ಇಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿತ್ತು. ನಿಗಧಿಯಂತೆ ಅಧ್ಯಕ್ಷ ಸ್ಥಾನಕ್ಕೆ ಪಿ.ನೀಲಕಂಠಪ್ಪ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಣಾಪುರ ಪಾರ್ವತಿ ಇಬ್ಬರೇ ನಾಮಪತ್ರಗಳನ್ನು ಸಲ್ಲಿಸಿದ್ದರಿಂದ ಹಾಗೂ ನಾಮಪತ್ರಗಳು ಕ್ರಮಬದ್ಧವಾಗಿದ್ದರಿಂದ ಅಧ್ಯಕ್ಷರಾಗಿ ಪಿ.ನೀಲಕಂಠಪ್ಪ ಮತ್ತು ಉಪಾಧ್ಯಕ್ಷರಾಗಿ ಸಣಾಪುರ ಪಾರ್ವತಿ ಅವಿರೋಧವಾಗಿ ಆಯ್ಕೆಯಾದರು ನೂತನ ಅಧ್ಯಕ್ಷ ಪಿ.ನೀಲಕಂಠಪ್ಪ ಮಾತನಾಡಿ ಸಂಘದ ಎಲ್ಲಾ ನಿರ್ದೇಶಕರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.ಗ್ರಾಮದ ಮುಖಂಡರಾದ ಅಳ್ಳಳ್ಳಿ ವೀರೇಶ್ ಮಾತನಾಡಿದ ಸಹಕಾರ ಸಂಘದಿಂದ ರೈತರಿಗೆ ಸಕಾಲದಲ್ಲಿ ರಸಗೊಬ್ಬರ, ಬಿತ್ತನೆ ಬೀಜಗಳನ್ನು ಒದಗಿಸುವಂತೆ ಸಲಹೆ ನೀಡಿದರು. ನಂತರ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ನಿರ್ದೇಶಕರುಗಳನ್ನು ಗ್ರಾಮದ ಮುಖಂಡರು ಸನ್ಮಾನಿಸಿ ಗೌರವಿಸಿದರು. ಚುನಾವಣೆಯಲ್ಲಿ ನಿರ್ದೇಶಕರುಗಳಾದ ಕೆ.ತಿ್ೇರುದ್ರ್ಪ, ಜಿ.ಗಣೇಶಗೌಡ, ಸಿ.ಕೆ.ಸೋಮಶೇಕರ್, ಎಸ್.ಎಸ್.ಮಲ್ಲಿಕಾರ್ಜುನ, ಗುಬಾಜಿ (ಕಡೆಮನಿ) ನಾಗರಾಜ, ಎ.ಮಂಜುನಾಥ್, ಕೊರವರ ಹುಲುಗಪ್ಪ, ನಾಯ್ಕರ ತಿಪ್ಪೇಸ್ವಾಮಿ, ಈ ಅನ್ನಪೂರ್ಣ, ಗಾದಿಗನೂರು ಹಂಪಮ್ಮ, ಸಂಘದ ಸಿಇಒ ಎಸ್.ಎಸ್.ನಾಗರಾಜ, ಗ್ರಾಮದ ಮುಖಂಡರಾದ ಕಡೆಮನಿ ಪಂಪಾಪತಿ, ಜಿ.ಲಿಂಗನಗೌಡ, ನಾಯಕ ವೆಂಕೋಬ, ಬಸನಗೌಡ, ಕೋರಿ ಚನ್ನಬಸವ, ಹೊನ್ನೂರ್ಪ, ವಿ.ಶೇಖರ್ಪ, ಕೋಟೆ ರಾಮಪ್ಪ, ಬಸವರಾಜ ಸೇರಿದಂತೆ ಇತರರು ಇದ್ದರು.